ಚಾಮರಾಜನಗರ:ವಿಧಾನ ಪರಿಷತ್​ ಸದಸ್ಯ ಎಚ್​.ವಿಶ್ವನಾಥ್​ಗೆ ನಾಡದೇವಿ ಚಾಮುಂಡೇಶ್ವರಿ ಶಾಪ ತಟ್ಟಿದೆ ಎಂದು ಮಾಜಿ ಸಚಿವ ಸಾರಾ ಮಹೇಶ್ ಹೇಳಿದರು.
ಬುಧವಾರ ಸುದ್ದಿಗಾರರ ಬಳಿ ಮಾತನಾಡಿದ ಸಾರಾ ಮಹೇಶ್​, ವಿಶ್ವನಾಥ್​ಗೆ ಚಾಮುಂಡೇಶ್ವರಿ ಶಾಪ ತಟ್ಟಿದೆ, ಹಾಗಾಗಿ ಅವರಿಗೆ ಮಂತ್ರಿಸ್ಥಾನ ತಪ್ಪಿದೆ. ಇದು ನ್ಯಾಯದೇವತೆಯ ತೀರ್ಪು. ಹೀಗಿರುವಾಗ ನಿಮ್ಮನ್ನು ಮಂತ್ರಿ ಮಾಡಲು ಹೇಗೆ ಸಾಧ್ಯ? ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿರಿಅಬಕಾರಿ ಸಚಿವ ಸ್ಥಾನಕ್ಕೆ ನಾಗೇಶ್​ ರಾಜೀನಾಮೆ ಕೊಟ್ಟಿದ್ದಕ್ಕೆ ಸ್ವಕ್ಷೇತ್ರದಲ್ಲೇ ಪಟಾಕಿ ಸಿಡಿಸಿ ಸಂಭ್ರಮಾಚರಣೆ!
ಬಿ.ಎಸ್​.ಯಡಿಯೂರಪ್ಪನವರ ಬಗ್ಗೆ ಮಾತನಾಡಲು ಸಣ್ಣ ನೈತಿಕತೆಯೂ ವಿಶ್ವನಾಥ್​ಗೆ ಇಲ್ಲ. ಯಡಿಯೂರಪ್ಪ ಮಾತು ಕೊಟ್ಟಂತೆ 16 ಜನರಿಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ ಎಂದ ಸಾರಾ ಮಹೇಶ್​, ನಿಮ್ಮ ವೈಯಕ್ತಿಕ ಹಿತಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿದಿದ್ದೀರಿ. ಚಳಿಗಾಲಕ್ಕೊಂದು ಗೂಡು, ಮಳೆಗಾಲಕ್ಕೊಂದು ಗೂಡು, ಬೇಸಿಗೆಗೊಂದು ಗೂಡು… ಎನ್ನುತ್ತಾ ಪಕ್ಷ ಬದಲಿಸಿದ್ದೀರಿ ಎಂದು ವಿಶ್ವನಾಥ್​ರನ್ನ ಸಾರಾ ಮಹೇಶ್​ ತರಾಟೆಗೆ ತೆಗೆದುಕೊಂಡರು.
ನೀವು ಬಾಂಬೆಗೆ ಹೋಗಿ ಹುಣಸೂರಿನ ಮತದಾರರನ್ನ ಮಾರಾಟ ಮಾಡಿದ್ದೀರ. ನಿಮಗೆ ನಮ್ಮ ಕಾರ್ಯಕರ್ತರ ನಿಟ್ಟುಸಿರು ಮತ್ತು ಶಾಪ ತಟ್ಟದೇ ಬಿಡುತ್ತಾ? ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಯಡಿಯೂರಪ್ಪ ಮಾತಿಗೆ ತಪ್ಪಿದ್ದಾರೆ, ನಂಬಿಕೆ ದ್ರೋಹ ಮಾಡಿದ್ದಾರೆ ಎನ್ನುತ್ತಿದ್ದೀರಿ. ನಿಮ್ಮನು ಕರೆಯೋ ಎಮ್ಮೆ ಕೊಟ್ಟು, ಒದೆಯೋ ಕೋಣ ತಂದಾಗೆ ಆಗಿದೆ ಎಂದು ವಿಶ್ವನಾಥ್​ ವಿರುದ್ಧ ಕಟುವಾಗಿ ಟೀಕಿಸಿದರು.
ಬಿಎಸ್​ವೈ ಸಂಪುಟ ಸೇರಿದ ‘ಸಪ್ತ’ ಸಚಿವರು: ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಭಾವ್ಯ ಪಟ್ಟಿ

ಪ್ರೀತಿಸಿ ಮದ್ವೆ ಮಾಡಿಕೊಂಡಾಗ ಅಡ್ಡಿಯಾಗದ ಆ ಸಮಸ್ಯೆ ವರ್ಷದ ಬಳಿಕ ದೊಡ್ಡದಾಯ್ತೆ..? ಗಂಡನ ಮನೆ ಬಾಗಿಲಲ್ಲಿ ಕಣ್ಣೀರಿಟ್ಟ ಪತ್ನಿ

ತಾನೇ ಸಾಕಿದ್ದ ಹಸುಗೆ ಬಲಿಯಾದ ಬಾಲಕ! ಮುಗಿಲುಮುಟ್ಟಿದೆ ಕುಟುಂಬಸ್ಥರ ಆಕ್ರಂದನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + thirteen =
Remember me
