ಮೈಸೂರು:‘ನಾನು ಹಾಳಾಗಿದ್ದೇ ಸಿದ್ದರಾಮಯ್ಯನನ್ನು ಉದ್ಧಾರ ಮಾಡಲು ಹೋಗಿ’ ಎಂದು ಬಿಜೆಪಿ ಎಂಎಲ್​ಸಿ ಎಚ್​.ವಿಶ್ವನಾಥ್​ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್​, ‘ದೇವೇಗೌಡರು ನಿನ್ನನ್ನ ಪಕ್ಷದಿಂದ ಹೊರ ಹಾಕಿದ್ದರು. ನಾನು ಸಾಕಷ್ಟು ಜನರ ಕಾಲು ಹಿಡಿದು ನಿನ್ನನ್ನು ಪಕ್ಷಕ್ಕೆ ಕರೆದುಕೊಂಡು ಬಂದೆ. ನಿನ್ನನ್ನು ಉದ್ದಾರ ಮಾಡೋಕೆ ಹೋಗಿ ನಾನೇ ಹಾಳಾದೆ. ನಿನ್ನ ಅಧಿಕಾರವಧಿಯಲ್ಲೇ ಕುರುಬ ಜನಾಂಗಕ್ಕೆ ಹೆಚ್ಚು ಅನ್ಯಾಯ ಆಗಿದೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ‘ನೀನೇನು ದೇವರಾಜ ಅರಸು, ಹನುಂತಯ್ಯರಿಗಿಂತ ದೊಡ್ಡ ನಾಯಕ ಅಲ್ಲ. ದೇವರಾಜ ಅರಸು ಅವರಿಗಿಂತ ದೊಡ್ಡ ಆಡಳಿತಗಾರನೇ ನೀನು? ಎಂದು ಏಕವಚನದಲ್ಲಿ ಹರಿಹಾಯ್ದರು.ಇದನ್ನೂ ಓದಿರಿವಿವಾಹಿತೆ ಜತೆ ಯುವಕನ ಸಲ್ಲಾಪ, ತಡರಾತ್ರಿ ಸಿಕ್ಕಿಬಿದ್ದ ಜೋಡಿಯನ್ನ ಟ್ರ್ಯಾಕ್ಟರ್​ಗೆ ಕಟ್ಟಿಹಾಕಿದ ಗ್ರಾಮಸ್ಥರು!
ಸಂಗೊಳ್ಳಿ ರಾಯಣ ಅಭಿವೃದ್ಧಿಗೆ 260 ಕೋಟಿ ಹಣ ಬಿಡುಗಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ವಿಶ್ವನಾಥ್​, ‘ಸಿದ್ದರಾಮಯ್ಯ ಕೊಟ್ಟದ್ದು 10 ‌ಕೋಟಿ ಮಾತ್ರ. ಬಜೆಟ್‌ನಲ್ಲಿ ಹೇಳಿ ಹೋದರೆ ಆಗಲ್ಲ. ಮೇಲಾಗಿ ಅದಕ್ಕಾಗಿ ಹಣ ಮೀಸಲಿಡಬೇಕಿತ್ತು. ಎಫ್‌ಡಿ ಹಣ ಮೀಸಲಿಟ್ಟು ಮಾತನಾಡಬೇಕಿತ್ತು. ಅದು ಬಿಟ್ಟು ನಾನೇ ಜನಾಂಗವನ್ನು ಉದ್ಧಾರ ಮಾಡಿದೆ ಎನ್ನುವುದು ಸರಿಯಲ್ಲ. ನೀನೇನು ದೇವರಾಜ ಅರಸು, ಹನುಮಂತಯ್ಯರಿಗಿಂತ ದೊಡ್ಡ ನಾಯಕ ಅಲ್ಲ. ಅವರ ಅವಧಿಯಲ್ಲಿ ಆದ ಅಭಿವೃದ್ಧಿಗಳು ದೊಡ್ಡವು. ನಾನು.. ನಾನು.. ಅನ್ನೋ ದುರಹಂಕಾರ- ದರ್ಪ ನಿನ್ನನ್ನ ಎಲ್ಲಿಗೆ ತಗೊಂಡು ಹೋಗಿದೆ‌?’ ಎಂದು ವಿಶ್ವನಾಥ್​ ಖಾರವಾಗಿಯೇ ಪ್ರಶ್ನಿಸಿದರು.
‘ನಾನೇ ಮುಖ್ಯಮಂತ್ರಿ ನಾನೇ ಆಗ್ತೀನಿ ಅಂತಾರೇ. ಇನ್ನೂ ಎರಡೂವರೆ ವರ್ಷ ಇದೆ. ಜನ್ರು ಯಾರಿಗೆ ಆಶೀರ್ವಾದ ಮಾಡ್ತಾರೋ ಯಾರಿಗೆ ಗೊತ್ತು. ಸುಮ್ಮನೆ ಏಕೆ ಬೊಂಬಡಿ ಬಿಡ್ತೀರಿ’ ಎಂದರು.
ಸಿದ್ದರಾಮಯ್ಯರ ಹುಟ್ಟೂರಲ್ಲಿ ರಾಮ ಮಂದಿರ ನಿರ್ಮಾಣ! ಈ ಬಗ್ಗೆ ಮಾಹಿತಿ ಹೊರಹಾಕಿದ ಮಾಜಿ ಸಿಎಂ

ಡೆತ್​ನೋಟ್​ ಬರೆದಿಟ್ಟು ಹೈಸ್ಕೂಲ್​ ಶಿಕ್ಷಕ ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಶಿಕ್ಷಕ

3 ಮಕ್ಕಳ ತಾಯಿ ಜತೆ ಯುವಕನ ಕಾಮಪುರಾಣ: ತ್ರೀಕೋನ ವಿವಾಹೇತರ ಸಂಬಂಧಕ್ಕೆ ಇಬ್ಬರು ಬಲಿ

ವಿವಾಹಿತೆ ಜತೆ ಯುವಕನ ಸಲ್ಲಾಪ, ತಡರಾತ್ರಿ ಸಿಕ್ಕಿಬಿದ್ದ ಜೋಡಿಯನ್ನ ಟ್ರ್ಯಾಕ್ಟರ್​ಗೆ ಕಟ್ಟಿಹಾಕಿದ ಗ್ರಾಮಸ್ಥರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 5 =
Remember me
