ಬೆಂಗಳೂರು:ಇಡೀ ಜಗತ್ತು ಕರೊನಾ ಭೀತಿಯಲ್ಲಿ ಮುಳುಗಿದ್ದರೆ ಸೈಬರ್ ಹ್ಯಾಕರ್ಸ್ ಜನರ ಬ್ಯಾಂಕ್ ಖಾತೆ, ಡೇಟಾಗೆ ಕನ್ನ ಹಾಕಲು ಅಣಿಯಾಗಿದ್ದಾರೆ. ಇ-ಮೇಲ್, ವಾಟ್ಸ್​ಆಪ್ ಅಥವಾ ಇನ್ನಾವುದೇ ಜಾಲತಾಣಗಳಲ್ಲಿ ಬರುವ ಲಿಂಕ್​ಗಳನ್ನು ಕ್ಲಿಕ್ ಮಾಡದಂತೆ ಸಾರ್ವಜನಿಕರಿಗೆ ಸಿಐಡಿ ಸೈಬರ್ ಪೊಲೀಸರು ಎಚ್ಚರಿಸಿದ್ದಾರೆ.
ಕರೊನಾ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಮಾಹಿತಿ ತಿಳಿಯಲು ಪ್ರತಿಯೊಬ್ಬರೂ ಇಂಟರ್​ನೆಟ್​ನಲ್ಲಿ ಹುಡುಕಾಡುತ್ತಿದ್ದಾರೆ. ಮತ್ತೊಂದೆಡೆ ಬ್ಲಾಕ್ ಹ್ಯಾಟ್ ಹ್ಯಾಕರ್​ಗಳ ತಂಡ ಅಮಾಯಕರನ್ನು ದಾರಿ ತಪ್ಪಿಸಿ ಬ್ಯಾಂಕ್ ಖಾತೆ ಮತ್ತು ಡೇಟಾಗೆ ಕನ್ನ ಹಾಕಲು ಪ್ರಯತ್ನಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಹ್ಯಾಕರ್​ಗಳು ಕರೊನಾ ಸೋಂಕಿನ ನಿಯಂತ್ರಣ ಕುರಿತ ಮಾಹಿತಿಯುಳ್ಳ ಸಂದೇಶವನ್ನು ಇ-ಮೇಲ್ ಮತ್ತು ಮೊಬೈಲ್​ಗೆ ರವಾನಿಸಿ ಆಸಕ್ತಿ ಮೂಡಿಸಿ ಕೊನೆಗೆ ಹೆಚ್ಚಿನ ಮಾಹಿತಿಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡುವಂತೆ ಸೂಚನೆ ಕೊಡುತ್ತಾರೆ. ಜನ ಲಿಂಕ್ ಮೇಲೆ ಕ್ಲಿಕ್ ಮಾಡುತ್ತಿದ್ದಂತೆ ಕಂಪ್ಯೂಟರ್ ಮತ್ತು ಮೊಬೈಲ್​ನಲ್ಲಿರುವ ಡೇಟಾ ಕಳವಾಗುತ್ತದೆ. ಆ ನಂತರ ಜನರಿಗೆ ತಿಳಿಯದಂತೆ ಅವರ ಬ್ಯಾಂಕ್ ಖಾತೆಯಲ್ಲಿ ಇರುವ ಹಣಕ್ಕೆ ಕನ್ನ ಹಾಕುತ್ತಾರೆ. ಹೀಗಾಗಿ ಖಾಸಗಿ ಕಂಪನಿಗಳ ನೌಕರರನ್ನು ರಾಜ್ಯದ ಸಿಐಡಿ ಸೈಬರ್ ಕ್ರೖೆಂ ವಿಭಾಗದ ಅಧಿಕಾರಿಗಳು ಕರೊನಾ ವೈರಸ್ ಮಾಹಿತಿಯುಳ್ಳ ಇ-ಮೇಲ್ ಬಗ್ಗೆ ಎಚ್ಚರ ವಹಿಸುವಂತೆ ಅರಿವು ಮೂಡಿಸುತ್ತಿದ್ದಾರೆ.
ದೇಣಿಗೆ ಹೆಸರಲ್ಲೂ ಕನ್ನ:ಕರೊನಾ ವೈರಸ್​ನಿಂದ ನೂರಾರು ಜನ ಮೃತಪಡುತ್ತಿದ್ದಾರೆ. ಅವರಿಗೆ ನೆರವಾಗುವ ಹೆಸರಲ್ಲಿ ದೇಣಿಗೆ ಸಂಗ್ರಹಿಸುವ ಸೋಗಿನಲ್ಲಿ ಸೈಬರ್ ಹ್ಯಾಕರ್ಸ್ ಸೆಳೆಯುತ್ತಾರೆ. ಆನ್​ಲೈನ್​ನಲ್ಲೇ ದೇಣಿಗೆ ವರ್ಗಾವಣೆಗೆ ಆಹ್ವಾನಿಸಿ ನಿಮ್ಮ ಬ್ಯಾಂಕ್ ಖಾತೆ ಅಥವಾ ವ್ಯಾಲೆಟ್ ಮಾಹಿತಿಗೆ ಕನ್ನ ಹಾಕುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಎಚ್ಚೆತ್ತ ಸಾಫ್ಟ್​ವೇರ್ ಕಂಪನಿಗಳು:ಕರೊನಾ ಸೋಂಕಿನ ಭೀತಿಯಿಂದ ಬಹುರಾಷ್ಟ್ರೀಯ ಕಂಪನಿಗಳಾದ ಮೈಕ್ರೋಸಾಫ್ಟ್, ಗೂಗಲ್, ಲಾಗ್​ವಿುನ್, ಸಿಸ್ಕೊ ಸೇರಿ ಹಲವು ಕಂಪನಿಗಳು ತಮ್ಮ ನೌಕರರಿಗೆ ಮನೆಯಲ್ಲೇ ಕುಳಿತು ಕೆಲಸ ಮಾಡುವಂತೆ ತಿಳಿಸಿವೆ. ಅಲ್ಲದೆ, ಕಂಪನಿಯ ರಿಮೋಟ್ ನೆಟ್​ವರ್ಕ್​ನಲ್ಲೇ ಮೀಟಿಂಗ್ ಮತ್ತು ಚರ್ಚೆ
ನಡೆಸಬೇಕು. ಯಾವುದೇ ನೆಟ್​ವರ್ಕ್​ನಲ್ಲಿ ಅಧಿಕಾರಿ, ಸಹೋದ್ಯೋಗಿಗಳ ಜತೆ ಚಾಟ್ ಮತ್ತು ಮಾಹಿತಿ ಹಂಚಿಕೊಳ್ಳದಂತೆ ಕಟ್ಟಾಜ್ಞೆ ಹೊರಡಿಸಿವೆ.
ಕಳ್ಳರಿಂದ ದೂರವಿರಿ
| ಗೋವಿಂದರಾಜು ಚಿನ್ನಕುರ್ಚಿ
ಪ್ರವಾಸಿಗರೆ ಆತಂಕ ಬೇಡ ಮೈಸೂರು ಮೃಗಾಲಯದ ಪಕ್ಷಿಗಳಲ್ಲಿ ಹಕ್ಕಿಜ್ವರ ಇಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − three =
Remember me
