ಹೊನ್ನಾವರ:ಬಡಗು ತಿಟ್ಟು ಯಕ್ಷಗಾನದ ಶ್ರೇಷ್ಠ ಕಲಾವಿದ, ತಾಲೂಕಿನ ಹಡಿನಬಾಳ ನಿವಾಸಿ ಶ್ರೀಪಾದ ಹೆಗಡೆ (65) ಅವರು ಗುರುವಾರ ರಾತ್ರಿ ನಿಧನರಾದರು.
ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು-ಬಳಗ, ಅಸಂಖ್ಯ ಅಭಿಮಾನಿಗಳು ಇದ್ದಾರೆ. ಕಳೆದ ವರ್ಷ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು. ಅದರಿಂದ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ. ಮತ್ತೆ ಅಸ್ವಸ್ಥರಾದ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಬುಧವಾರ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದರು.
ಅಭಿಜಾತ ಕಲಾವಿದ: ಯಕ್ಷಗಾನ ಕ್ಷೇತ್ರದಲ್ಲಿ ಎಲ್ಲ ರೀತಿಯ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡ ಅಪರೂಪದ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆ. ಇವರಿಗೆ ಚಿಕ್ಕಂದಿನಿಂದಲೇ ಕಲೆಗಳಲ್ಲಿ ಅಭಿರುಚಿ. ಯಕ್ಷಗಾನ ಅಷ್ಟೇ ಅಲ್ಲ, ಮಣ್ಣಿನ ಮೂರ್ತಿ ಮಾಡುವುದರಲ್ಲೂ ಆಸಕ್ತಿ. ಬಡ ಕುಟುಂಬದಲ್ಲಿ ಹುಟ್ಟಿದ್ದರಿಂದ ಅವರ ವಿದ್ಯಾಭ್ಯಾಸ ಹತ್ತನೇ ತರಗತಿಗೆ ಸೀಮಿತವಾಯಿತು. ಕೆಲಸಕ್ಕಾಗಿ ಅಲೆದಾಡಿದರೂ ಪ್ರಯೋಜನವಾಗಲಿಲ್ಲ. ಜೀವನ ಸಾಗಿಸಲು ಕೆಲಸ ಅನಿವಾರ್ಯವಾಗಿತ್ತು. ಆಗ ಇವರನ್ನು ಕೈಬೀಸಿ ಕರೆದಿದ್ದು ಚಿಕ್ಕಂದಿನ ಆಸಕ್ತಿಯ ಯಕ್ಷಗಾನ. ತಮ್ಮ ಮಾವ ಹಾಗೂ ಯಕ್ಷಗಾನ ಕಲಾವಿದ ಸತ್ಯ ಹೆಗಡೆ ಅವರಿಂದ ಸ್ಪೂರ್ತಿಗೊಂಡ ಇವರು ಗುಂಡಬಾಳ ಮೇಳಕ್ಕೆ ಸೇರಿದರು.
ಶ್ರೀಪಾದ ಹೆಗಡೆ ಯಕ್ಷರಂಗಕ್ಕೆ ಬಂದಿದ್ದು ಹಾಸ್ಯ ಕಲಾವಿದನಾಗಿ. ನಂತರ ಯಕ್ಷಗಾನದ ಶ್ರೇಷ್ಠ ಕಲಾವಿದ ಕೆರೆಮನೆ ಮಹಾಬಲ ಹೆಗಡೆ ಅವರ ಒಡನಾಟ ಪ್ರಾರಂಭವಾಯಿತು. ಗಂಭೀರ ಪಾತ್ರದೆಡೆಗೆ ವಾಲಿದ್ದರು. ಪಾತ್ರಗಳಿಗೆ ತಮ್ಮದೇ ಶೈಲಿಯಲ್ಲಿ ಜೀವ ತುಂಬತೊಡಗಿದರು. ಅವರು ಕೀಚಕ ವಧೆಯ ‘ವಲಲ’, ಗದಾಯುದ್ಧದ ‘ಭೀಮ’ ರುದ್ರಕೋಪದ ‘ರಕ್ತಜಂಘ’, ಲಂಕಾದಹನದ ‘ಹನುಮಂತ’, ಕನಕಾಂಗಿ ಕಲ್ಯಾಣದ ‘ಘಟೋದ್ಗಜ’ ಇವಲ್ಲದೇ ಕಾಳಿದಾಸ, ರಾಮ, ಕೌರವ,
ರಾವಣ, ನಳ, ಕರ್ಣ ಮುಂತಾದ ಪಾತ್ರಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿದವರು. ‘ಗೋವಿಂದನ ರಾಜಿ ಪಂಚಾಯ್ತಿ’ ಎನ್ನುವ ಪ್ರಸಂಗವನ್ನು ಹವ್ಯಕ ಭಾಷೆಯಲ್ಲಿ ಮಾಡಿದ ಹೆಗ್ಗಳಿಕೆ ಇವರದ್ದು.
ಯಕ್ಷಗಾನವನ್ನೇ ವೃತ್ತಿಯಾಗಿ ಸ್ವೀಕರಿಸಿದ ಶ್ರೀಪಾದ ಹೆಗಡೆ ಅವರು ಗುಂಡಬಾಳ, ಇಡಗುಂಜಿ, ಪಂಚಲಿಂಗ, ಪೆರ್ಡರು, ಬಚ್ಚಗಾರು, ಕುಮಟಾ, ಮಂರ್ದತಿ, ಶಿರಸಿ, ಸಾಲಿಗ್ರಾಮ ಮೇಳಗಳಲ್ಲಿ ತಿರುಗಾಟ ಮಾಡಿದ್ದಾರೆ. ಹಲವಾರು ವಿಡಿಯೋ ಯಕ್ಷಗಾನದಲ್ಲಿ ಇವರು ಭಾಗವಹಿಸಿದ್ದಾರೆ. ಅಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಅತಿಥಿ
ಕಲಾವಿದರಾಗಿ ಭಾಗವಹಿ ಸುತ್ತಿದ್ದರು. ಭಾವುಕ ಜೀವಿಯಾಗಿದ್ದ ಅವರು, ತಮ್ಮ ಜೀವಿತದ ಕೊನೆಯ ವರೆಗೂ ಬಡತನದಲ್ಲೇ
ಜೀವನವನ್ನು ಸಾಗಿಸಿದ್ದರು. ಅವರಿಗೆ ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ, ಸೇರಿದಂತೆ ಹಲವು ಸಂಘಟನೆ, ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದ್ದವು.
ಹಲವು ಕೆಲಸದಲ್ಲಿ ಸಿದ್ಧ ಹಸ್ತ
ಯಕ್ಷಗಾನ ಮೇಳದ ತಿರುಗಾಟ ಆರು ತಿಂಗಳು ಮಾತ್ರ. ಉಳಿದ ದಿನಗಳಲ್ಲಿ ಹಲವಾರು ಕಡೆ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದರು. ಆದರೆ, ಅದರಿಂದ ಜೀವನ ನಿರ್ವಹಣೆ ಕಷ್ಟ. ಅದಕ್ಕಾಗಿ ಅವರು ಚೌತಿಯ ಸಮಯದಲ್ಲಿ ಗಣಪತಿ ಮೂರ್ತಿ ನಿರ್ವಣ, ಮಳೆಗಾಲದಲ್ಲಿ ಕೊಡೆ ರಿಪೇರಿ, ಹೊಲಿಗೆ, ಎಲೆ ವ್ಯಾಪಾರ ಇತ್ಯಾದಿ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದರು.
ಮಾತು, ಬಣ್ಣಗಾರಿಕೆಯ ಮೋಡಿ
ಶ್ರೀಪಾದ ಹೆಗಡೆಯವರ ಮಾತುಗಾರಿಗೆ ಸೂಜಿಗಲ್ಲಿನಂತೆ ಪ್ರೇಕ್ಷಕರನ್ನು ಆಕರ್ಷಿಸುತ್ತಾ ಇತ್ತು. ಭಾವನಾತ್ಮಕ ಪಾತ್ರಗಳನ್ನು ನಿರ್ವಹಿಸಿದರೆ ನೋಡುಗರು ಕಣ್ಣೀರು ಇಡುವಂತೆ ಸಂಭಾಷಣೆಯನ್ನು ಪ್ರಸ್ತುತ ಪಡಿಸುತ್ತಿದ್ದರು. ಇವರ ಪಾತ್ರೋಚಿತವಾದ ಬಣ್ಣಗಾರಿಕೆ ಮಾಡಿಕೊಳ್ಳುವುದರಲ್ಲಿ ನಿಷ್ಣಾತರಾಗಿದ್ದರು.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:10 − 9 =
Remember me
