ಕೊಡಗು:ಶನಿವಾರಸಂತೆ ಸಮೀಪದ ಹಲವು ಗ್ರಾಮದಲ್ಲಿ ಶುಕ್ರವಾರ ಆಲಿಕಲ್ಲು ‌ಮಳೆ ಧಾರಾಕಾರವಾಗಿ ಆಗಿದ್ದು, ಜನತೆಯಲ್ಲಿ ಅಚ್ಚರಿ ಮೂಡಿಸಿದೆ. ಜಮ್ಮುಕಾಶ್ಮೀರದಲ್ಲಿ‌ ಮಂಜು ಮಳೆ ಬಿದ್ದಂತೆ ಇಲ್ಲೂ ಗೋಲಿ ಗಾತ್ರದ ರಾಶಿ-ರಾಶಿ ಆಲಿಕಲ್ಲುಗಳು ಬಿದ್ದಿವೆ. ಅಂಕನಹಳ್ಳಿ, ನಿಡ್ತ, ಮೆಣಸ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮದಲ್ಲಿ ಇಡೀ ವಾತವರಣ ಆಲಿಕಲ್ಲುಗಳಿಂದ ಹರಡಿಕೊಂಡಿತ್ತು. ಮಧ್ಯಾಹ್ನ 1 ಗಂಟೆಗೆ ಆರಂಭವಾದ ಆಲಿಕಲ್ಲು ಮಳೆ ಸುಮಾರು ಅರ್ಧ ಗಂಟೆಗಳ ಕಾಲ ಸುರಿದಿದೆ. ನೀರಿನ ಬದಲು‌‌ ಆಲಿಕಲ್ಲು ಸುರಿದ ಪರಿಣಾಮ ರೈತರು ಕಂಗಲಾಗಿದ್ದಾರೆ. ಕಾಳುಮೆಣಸು, ಕಾಫಿ ‌ಬೆಳೆ ಹಾನಿಯಾಗಿದೆ. ಇನ್ನು ಇಂತಹ ಮಳೆಯನ್ನು ಜೀವಮಾನದಲ್ಲಿ ಎಂದೂ ಕಂಡಿರಲಿಲ್ಲ ಎಂದ ಸ್ಥಳೀಯರು ಆಶ್ಚರ್ಯದಿಂದ ಆಲಿಕಲ್ಲುಗಳನ್ನು ನೋಡುತ್ತಿದ್ದ ದೃಶ್ಯ ಕಂಡು ಬಂತು. ಮಳೆ ನಂತರ ತುಸು ಬಿಸಿಲಿನ ವಾತಾವರಣ ಕಂಡುಬಂದಿದೆ. ಜಿಲ್ಲೆಯಾದ್ಯಂತ ಇಂದು ಮೋಡ ಕವಿದ ವಾತಾವಣರವಿದೆ. ಹಾಸನದಲ್ಲೂ ಅಲ್ಲಲ್ಲಿ ಆಲಿಕಲ್ಲು ಮಳೆಯಾಗಿದೆ. ಇನ್ನು ಶನಿವಾರಸಂತೆಯಲ್ಲಿ ಆಲಿಕಲ್ಲು ಮಳೆಯ ಫೋಟೋಗಳು ಇಲ್ಲಿವೆ ನೋಡಿ.

3 ಮಕ್ಕಳ ತಾಯಿ ಜತೆ ಯುವಕನ ಕಾಮಪುರಾಣ: ತ್ರೀಕೋನ ವಿವಾಹೇತರ ಸಂಬಂಧಕ್ಕೆ ಇಬ್ಬರು ಬಲಿ

ಒಂದೂವರೆ ವರ್ಷದ ಮಗು ಕೊಂದಿದ್ದ ಪಾಪಿ ತಂದೆಗೆ ಗಲ್ಲುಶಿಕ್ಷೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
