ಬೆಂಗಳೂರು:ಆಯುರ್ವೆದ ಚಿಕಿತ್ಸೆಗೆಂದು ದಕ್ಷಿಣ ಆಫ್ರಿಕಾಕ್ಕೆ ತೆರಳಿರುವ ಹಕ್ಕಿಪಿಕ್ಕಿ ಕ್ಯಾಂಪ್​ನ 44 ಜನರು ಲಾಕ್​ಡೌನ್ ಕಾರಣದಿಂದ ಸಮಸ್ಯೆಗೆ ಸಿಲುಕುವಂತಾಗಿದೆ. ಮಾ. 24ರಂದು ಭಾರತದಲ್ಲಿ ಲಾಕ್​ಡೌನ್ ಘೋಷಿಸಲಾಯಿತು. ಅದಕ್ಕೂ ಮುನ್ನವೇ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಯಿತು. ಅಲ್ಲದೆ ಮಾ. 27ರಂದು ದಕ್ಷಿಣ ಆಫ್ರಿಕಾದಲ್ಲಿ ಲಾಕ್​ಡೌನ್ ಮಾಡಲಾಯಿತು. ಹೀಗಾಗಿ ಎರಡೂ ದೇಶಗಳ ನಡುವಿನ ವಿಮಾನಯಾನ ಸಂಪರ್ಕ ಕಡಿತಗೊಂಡಿದ್ದು, ಅಲ್ಲಿರುವ ಭಾರತೀಯರು ಇಲ್ಲಿಗೆ ಬರದ ಸ್ಥಿತಿ ನಿರ್ವಣವಾಗಿದೆ. ಭಾರತೀಯರಿಗೆ ಆಯುರ್ವೆದ ಚಿಕಿತ್ಸೆ ನೀಡುವುದು, ಮಸಾಜ್ ಮಾಡುವ ಸಲುವಾಗಿ ತೆರಳಿದ್ದ ಶಿವಮೊಗ್ಗದ ಹಕ್ಕಿಪಿಕ್ಕಿ ಕ್ಯಾಂಪ್​ನ 44 ಮಂದಿ ದಕ್ಷಿಣ ಆಫ್ರಿಕಾದಲ್ಲಿ ಸಿಕ್ಕಿ ಹಾಕಿಕೊಳ್ಳುವಂತಾಗಿದೆ.
17 ದಿನಗಳಿಂದ ಹೋಟೆಲ್​ನಲ್ಲಿ ಉಳಿದಿರುವ ಇವರು, ಊಟ ಮತ್ತು ಹಣವಿಲ್ಲದೆ ಸಮಸ್ಯೆ ಅನುಭವಿಸುವಂತಾಗಿದೆ. ಅದರಲ್ಲೂ ಜೊಹಾನ್ಸ್​ಬರ್ಗ್​ನಲ್ಲಿರುವ 16 ಜನರನ್ನು ಹಣ ಪಾವತಿಸದಿದ್ದರೆ ಹೋಟೆಲ್​ನಿಂದ ಹೊರಹಾಕುವುದಾಗಿ ಮಾಲೀಕರು ಹೇಳುತ್ತಿದ್ದಾರೆ. ಭಾರತೀಯ ಮೂಲದ ಕೆಲವರು ಅವರಿಗೆ ಆಹಾರ ನೀಡುತ್ತಿದ್ದಾರಾದರೂ, ವಸತಿಗಾಗಿ ಇರುವ ಹೋಟೆಲ್ ಬಿಲ್ ಪಾವತಿಸಲಾಗದೆ ಸಮಸ್ಯೆಗೆ ಸಿಲುಕುವಂತಾಗಿದೆ.
ರಾಯಭಾರಿ ಕಚೇರಿ ಭರವಸೆ:ತಮಗಾಗಿರುವ ಸಮಸ್ಯೆ ಕುರಿತು ದಕ್ಷಿಣ ಆಫ್ರಿಕಾದಲ್ಲಿನ ಭಾರತದ ರಾಯಭಾರಿ ಕಚೇರಿಯನ್ನು ಸಂರ್ಪಸಿದ್ದಾರೆ. ಅವರನ್ನು ವಾಪಸ್ ಕಳುಹಿಸುವ ಕುರಿತು ರಾಯಭಾರಿ ಕಚೇರಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೆ, ಭಾರತದಲ್ಲೂ ಲಾಕ್​ಡೌನ್ ಇರುವುದರಿಂದ ಅವರನ್ನು ಅಲ್ಲಿಂದ ಕಳುಹಿಸುವುದು ಹೇಗೆ ಎಂಬ ಯೋಚನೆ ಅಧಿಕಾರಿಗಳದ್ದು.

ಆಫ್ರಿಕಾದಲ್ಲಿರುವ ಭಾರತೀಯರಿಗೆ ಮಸಾಜ್, ಆಯುರ್ವೆದ ಚಿಕಿತ್ಸೆ ನೀಡಲು ಬಂದಿದ್ದೆವು. ದಕ್ಷಿಣ ಆಫ್ರಿಕಾದಲ್ಲಿ ಲಾಕ್​ಡೌನ್ ಮಾಡಿದ್ದರಿಂದ ನಾವೆಲ್ಲ ಇಲ್ಲಿಯೇ ಸಿಕ್ಕಿಕೊಳ್ಳುವಂತಾಗಿದೆ. ಭಾರತ ಸರ್ಕಾರ ನಮ್ಮನ್ನು ದೇಶಕ್ಕೆ ಕರೆಸಿಕೊಳ್ಳಲು ಕ್ರಮ ಕೈಗೊಳ್ಳಬೇಕು.| ರಾಜು ಹಿಮಾಲಯ, ದಕ್ಷಿಣ ಆಫ್ರಿಕಾದಲ್ಲಿ ಸಿಕ್ಕಿ ಹಾಕಿಕೊಂಡಿರುವವರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + one =
Remember me
