ಮಳಖೇಡ (ಕಲಬುರಗಿ):ಕನ್ನಡಕ್ಕೆ ಮೊದಲ ಕೃತಿ ನೀಡಿದ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ (ಮಾನ್ಯಖೇಟ)ದಲ್ಲಿ ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್​, ಯಾದಗರಿ, ರಾಯಚೂರು ಹಾಗೂ ಕಿತ್ತೂರು ಕರ್ನಾಟಕದ ವಿಜಯಪುರ ಜಿಲ್ಲೆಯ 51,900 ಜನರಿಗೆ ಗುರುವಾರ ಹಕ್ಕುಪತ್ರ ವಿತರಿಸಲಾಯಿತು. ಸಾಂಕೇತಿಕವಾಗಿ 5 ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹಕ್ಕುಪತ್ರ ವಿತರಣೆ ಮಾಡಿದರು. ಈ ವೇಳೆ ಮೋದಿ ಅವರನ್ನ ಹತ್ತಿರದಿಂದಲೇ ಕಣ್ತುಂಬಿಕೊಂಡ ತಾಂಡಾ ಜನರು ಭಾವುಕರಾದರು.
ರಾಷ್ಟ್ರಕೂಟರ ನಾಡು ಮಳಖೇಡದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಗಿನ್ನೆಸ್​ ದಾಖಲೆಯಾಯಿತು. ದೇಶದ ಇತಿಹಾಸದಲ್ಲಿಯೇ ಏಕಕಾಲಕ್ಕೆ 51,900 ತಾಂಡಾ ವಾಸಿಗಳಿಗೆ ಹಕ್ಕುಪತ್ರ ಹಂಚಿಕೆ ಆಗಿರುವುದು ಇದೇ ಮೊದಲು. ಆ ಮೂಲಕ ಲಂಬಾಣಿ ತಾಂಡಾ, ಹಟ್ಟಿ, ಹಾಡಿ, ಕುರುಬರ ಮತ್ತು ಗೊಲ್ಲರಹಟ್ಟಿ, ವಡ್ಡರಹಟ್ಟಿಯಲ್ಲಿರುವ ಅಲೆಮಾರಿ ಜನಾಂಗದವರಿಗೆ ಕಾಯಂ ಸೂರು ಸಿಕ್ಕಿದೆ.
ಕಲಬುರಗಿ ಜಿಲ್ಲೆಯ 27,267 ಕುಟುಂಬಕ್ಕೆ, ಬೀದರ್​ನ 7,500, ರಾಯಚೂರಿನ 3,500, ಯಾದಗಿರಿಯ 11,200, ವಿಜಯಪುರ ಜಿಲ್ಲೆಯ 2,605 ಜನರು ಸೇರಿದಂತೆ 51,900 ಜನರಿಗೆ ಹಕ್ಕುಪತ್ರ ವಿತರಣೆ ಮಾಡಲಾಯಿತು. 342 ತಾಂಡಾಗಳನ್ನು ಕಂದಾಯ ಗ್ರಾಮವಾಗಿ ಘೋಷಣೆ ಮಾಡಲಾಯಿತು. ಇದು ಗಿನ್ನೆಸ್ ಪುಟ ಸೇರಿತು.
ರಾಜ್ಯಪಾಲ ಥಾವರ್​ಚಂದ್​ ಗೆಲ್ಹೋಟ್​, ಸಿಎಂ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್​, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್​ ನಿರಾಣಿ, ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಪಿ.ರಾಜೀವ್‌ ಕುಡಚಿ, ಸಂಸದ ಡಾ.ಉಮೇಶ ಜಾಧವ್​, ಕೆಕೆಆರ್​ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್, ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ, ಬಸವರಾಜ ಮತ್ತಿಮೂಡ, ಡಾ.ಅವಿನಾಶ್ ಜಾಧವ, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಇತರರು ಇದ್ದರು.
ಕಲ್ಯಾಣ ಕರ್ನಾಟಕದಲ್ಲಿ ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ ಸಾಮಾಜಿಕ ನ್ಯಾಯ ಪ್ರತಿಪಾದಿಸಿದ ನಮೋ

ಸ್ಯಾಂಡಲ್​ವುಡ್​ ನಟ ಧನುಷ್​ ನಿಧನ; ಇಂದು ಅಂತ್ಯಕ್ರಿಯೆ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:17 − six =
Remember me
