ಬೆಂಗಳೂರು:ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್​) ಮಂಗಳವಾರ 300ನೇ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಧ್ರುವವನ್ನು ಉತ್ಪಾದಿಸಿದೆ. ಇದು ಸಂಸ್ಥೆಯ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಈ ಸಂದರ್ಭವನ್ನು ಎಚ್​ಎಎಲ್ ವಿಭಿನ್ನವಾಗಿ ಆಚರಿಸಿ ಸಂಭ್ರಮಿಸಿಕೊಂಡಿದೆ.
ಧ್ರುವ ಎಲ್​ಎಎಚ್​ ಬೇಡಿಕೆ ಒಪ್ಪಂದ     ಯಾರ ಜತೆಗೆ ಎಷ್ಟು?
41 ಭಾರತೀಯ ಸೇನೆ
16 ಭಾರತೀಯ ನೌಕಾಪಡೆ
16 ಭಾರತೀಯ ಕರಾವಳಿ ರಕ್ಷಣಾ ಪಡೆ
(ಈ ಪೈಕಿ 38 ಹೆಲಿಕಾಪ್ಟರ್ ಅನ್ನು 2022ರೊಳಗೆ ಎಚ್​ಎಎಲ್ ಪೂರೈಸಬೇಕು)
ಸರಳ ಸಮಾರಂಭದಲ್ಲಿ ಎಚ್​ಎಎಲ್​ ಹೆಲಿಕಾಪ್ಟರ್ ಡಿವಿಷನ್​ನ ಡೈರೆಕ್ಟರೇಟ್​ ಜನರಲ್ ಆಫ್ ಏರೋನಾಟಿಕಲ್ ಕ್ವಾಲಿಟಿ ಅಶ್ಶೂರೆನ್ಸ್​ನ ದಕ್ಷಿಣ ವಲಯದ ಹೆಚ್ಚುವರಿ ಮಹಾನಿರ್ದೇಶಕ ವೈ.ಕೆ.ಶರ್ಮಾ ಅವರು 300ನೇ ಹೆಲಿಕಾಪ್ಟರ್​ನ ರೋಲ್ ಔಟ್ ಸರ್ಟಿಫಿಕೇಟ್ ಅನ್ನು ಹೆಲಿಕಾಪ್ಟರ್ ಕಾಂಪ್ಲೆಕ್ಸ್​ನ ಸಿಇಒ ಜಿವಿಎಸ್​ ಭಾಸ್ಕರ್ ಅವರಿಗೆ ಹಸ್ತಾಂತರಿಸಿದರು.
ಇದನ್ನೂ ಓದಿ:ಅಜಿತ್​ ಬರದಿದ್ದರೆ ಏನಾಯ್ತು? ಕಾಲೆಳೆದವರಿಗೆ ಚರಣ್​ ಪ್ರಶ್ನೆ
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸಿಎಂಡಿ ಆರ್. ಮಾಧವನ್​, ಮೊಟ್ಟ ಮೊದಲ ಬಾರಿಗೆ 1992ರ ಆಗಸ್ಟ್ 30ರಂದು ಎಎಲ್​ಎಚ್​ ಧ್ರುವದ ಪ್ರೊಟೋ ಟೈಪ್​ ಅನಾವರಣಗೊಳಿಸಿದಲ್ಲಿಂದ ಹಿಡಿದು ಇಲ್ಲಿಯ ತನಕ ಬೆಳವಣಿಗೆ ಒಂದು ಸಾಧನೆ. ಸರಿಸಾಟಿ ಇಲ್ಲದ ಕಾರ್ಯಕ್ಷಮತೆ ಹೊಂದಿರುವ ಈ ವಿಶ್ವದರ್ಜೆಯ ಹೆಲಿಕಾಪ್ಟರ್ ಸಂಸ್ಥೆಯ ಹೆಗ್ಗುರುತಾಗಿ ಮೂಡಿದೆ. ಎಎಲ್​ಎಚ್​ ಮಾರ್ಕ್​ I ರಿಂದ ಹಿಡಿದು ಮಾರ್ಕ್ IV ರ ತನಕದ ಬೆಳವಣಿಗೆಯೇ ಒಂದು ಸಾಧನೆ. ಹೆಲಿಕಾಪ್ಟರ್ ನಿರ್ಮಾಣದಲ್ಲಿ ಸ್ವದೇಶಿ ವಿನ್ಯಾಸ ಮತ್ತು ಅಭಿವೃದ್ಧಿಗೆ ಸಿಕ್ಕ ಉತ್ತೇಜನವೂ ಹೌದು ಎಂದು ಹೇಳಿದರು.
ಇದನ್ನೂ ಓದಿ:ಕಂಗನಾ ಬೆಂಬಲಿಸಿದ್ದಕ್ಕೆ ಅಕ್ಕಪಕ್ಕದ ಮನೆ ಮಂದಿಗೂ ನೋಟಿಸ್​; ಮನೆ ನೆಲಸಮ ಉಲ್ಲೇಖ!
ಎಎಲ್​ಎಚ್​ 2.8 ಲಕ್ಷ ಗಂಟೆಗೂ ಹೆಚ್ಚು ಕಾಲ ಹಾರಾಟ ನಡೆಸಿದ ಸಾಧನೆ ಮಾಡಿದ್ದು, ಯಾವುದೇ ಸ್ಥಳ, ಯಾವುದೇ ಸಮಯ, ಸಂದರ್ಭದಲ್ಲಿ ಬಹುಪಾತ್ರಗಳನ್ನು ನಿಭಾಯಿಸಬಲ್ಲ ಹೆಲಿಕಾಪ್ಟರ್ ಆಗಿ ಈಗಾಗಲೇ ಸಾಬೀತು ಮಾಡಿದೆ ಎಂದು ಭಾಸ್ಕರ್ ಹೇಳಿದ್ರು. (ಏಜೆನ್ಸೀಸ್)
ಕರೊನಾ ಸೋಂಕಿಗೆ ಆಯುರ್ವೇದ ಚಿಕಿತ್ಸೆ? ಕ್ಲಿನಿಕಲ್​ ಟ್ರಯಲ್​​ನಿಂದ ಹೊರಬಿತ್ತು ಅಚ್ಚರಿಯ ಫಲಿತಾಂಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − two =
Remember me
