ಬೆಂಗಳೂರು:ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಹಲಾಲ್ ಮುಕ್ತ ಅಭಿಯಾನ ಆರಂಭವಾಗಿದೆ. ಈ ಬಗ್ಗೆ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ದು, ಹಲಾಲ್ ಯಾವುದೋ ಮತ ಪಂಥಕ್ಕೆ ಸೀಮಿತವಾಗಿಲ್ಲ. ಎಕನಾಮಿಕ್ ಆಗಿ ಬೆಳೆಯುತ್ತಿದೆ. ಹಲಾಲ್ ಎಂಬುವುದು ಊಟದ ವಿಚಾರವಾಗಿ ಇತ್ತು. ಆದರೆ ಈಗ ಪ್ರತಿಯೊಂದು ವಸ್ತುವಿನ ಮೇಲೂ ಹಲಾಲ್ ಸರ್ಟಿಫಿಕೇಟ್ ಇದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ತಯಾರಿ ಆಗುವ ಎಲ್ಲಾ ವಸ್ತುಗಳಿಗೆ ಹಲಾಲ್ ಸರ್ಟಿಫಿಕೇಟ್ ಹಾಕಲು ಪ್ರಾರಂಭ ಮಾಡಿದ್ದಾರೆ. ಇದು ನಮ್ಮ ಉದ್ಯೋಗವನ್ನು ಕಸಿದು, ಮುಸ್ಲಿಮರಿಗೆ ಉದ್ಯೋಗ ಹಂಚಿಕೆ ಮಾಡಲಾಗುತ್ತಿದೆ. ಅವರು ಅವರ ದೇವರಿಗೆ ಅರ್ಪಿಸಿದ ಆಹಾರವನ್ನು ನಾವು ಯಾಕೆ ನಮ್ಮ ದೇವರಿಗೆ ಕೊಡಬೇಕು. ಹಲಾಲ್ ಪ್ರಾಡಕ್ಟ್ ತೆಗೆದುಕೊಳ್ಳುವುದಿಲ್ಲ ಎಂದು ಎಲ್ಲರೂ ತೀರ್ಮಾನ ಮಾಡಬೇಕು.
ಹಲಾಲ್ ಜಗತ್ತನ್ನು ತಿನ್ನುತ್ತಿದೆ. ಹಲಾಲ್ ಕಟ್ ಇದು ಕೇವಲ ಮಾಂಸಕ್ಕೆ ಮಾತ್ರ ಸೀಮಿತವಾಗಿಲ್ಲ. ತಮಿಳುನಾಡಿನ ಹಪ್ಪಳದ ಮೇಲೆ ಹಲಾಲ್ ಮಾರ್ಕ್ ಇದೆ. ಈ ಬಗ್ಗೆ ವಿಸ್ತಾರವಾದ ಹೋರಾಟ ಆಗಬೇಕು. ಹಲಾಲ್ ಮಾರ್ಕ್ ಕಂಪನಿ ಭಾರತದ ಎಕನಾಮಿಯನ್ನು ನುಂಗಿಹಾಕುತ್ತಿದೆ. ಭಾರತೀಯ ಉದ್ಯೋಗವನ್ನು ಕಸಿಯುವ ಕೆಲಸ ಮಾಡುತ್ತಿದೆ ಎಂದರು.
ಹಲಾಲ್ ಮಾಡಿರುವುದನ್ನು ನಮ್ಮ ದೇವರಿಗೆ ಇಡಬೇಡಿ. ಸರ್ಕಾರ ಕೊಡುವ ಸರ್ಟಿಫಿಕೇಟ್​ಗಿಂತ ಬೇರೆ ಯಾವ ಸರ್ಟಿಫಿಕೇಟ್ ಇಲ್ಲ. ಬಾಯ್ಕಟ್ ಹಿಂದುಗಳು ಮಾತ್ರ ಮಾಡುತ್ತಿಲ್ಲ, ಬೇರೆ ಕೋಮಿನವರು ಮಾಡುತ್ತಿದ್ದಾರೆ. ಹಲಾಲ್ ಇರುವಲ್ಲಿ ಹಿಂದೂ ಯುವಕರನ್ನು ಕೆಲಸದಿಂದ ತೆಗೆಯುತ್ತಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 9 =
Remember me
