|ಗೋವಿಂದರಾಜು ಚಿನ್ನಕುರ್ಚಿಬೆಂಗಳೂರು
ರಾಜಧಾನಿಯಲ್ಲಿರುವ ದ್ವಿಚಕ್ರವಾಹನ ಸವಾರರ ಪೈಕಿ ಶೇ.44 ಮಂದಿ ಮಾತ್ರ ಪೂರ್ತಿ ತಲೆ, ಮುಖ ರಕ್ಷಣೆ ಆಗುವಂತಹ ಹೆಲ್ಮೆಟ್ ಧರಿಸುತ್ತಾರೆಂಬ ಸಂಗತಿ ಬೆಳಕಿಗೆ ಬಂದಿದೆ. ಇನ್ನು ಶೇ.26.75 ಮಂದಿ ಅರ್ಧ ಹೆಲ್ಮೆಟ್ ಧರಿಸಿದರೆ ಒಟ್ಟಾರೆ ಸವಾರರಲ್ಲಿ ಶೇ.92.61 ಮಂದಿ ಜೀವರಕ್ಷಣೆಗೆ ಆದ್ಯತೆ ನೀಡದೆ ಬೇಕಾಬಿಟ್ಟಿ ಶಿರಸ್ತ್ರಾಣಗಳನ್ನು ಬಳಸಿ ವಾಹನ ಚಲಾಯಿಸುತ್ತಾರೆಂದು ನಗರ ಸಂಚಾರ ಪೊಲೀಸರು ಮತ್ತು ನಿಮ್ಹಾನ್ಸ್ ಸಹಯೋಗದಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರಲ್ಲಿ ನಾಲ್ಕು ಚಕ್ರ ವಾಹನಗಳಿಗೆ ಹೋಲಿಸಿದರೆ ದ್ವಿಚಕ್ರ ವಾಹನಗಳ (60 ಲಕ್ಷ ) ಸಂಖ್ಯೆ ಹೆಚ್ಚು. ಸವಾರರಿಗೆ ಹೆಲ್ಮೆಟ್ ಬಳಕೆ ಕಡ್ಡಾಯಗೊಳಿಸಲಾಗಿದೆ. ಕಾನೂನು ಪಾಲನೆ ಮಾಡುವರ ಸಂಖ್ಯೆ ಕಡಿಮೆಯಿದೆ. ಸಂಚಾರ ಪೊಲೀಸರನ್ನು ನೋಡಿದಾಗಷ್ಟೇ ಶಿರಸ್ತ್ರಾಣ ಧರಿಸುತ್ತಾರೆ. ಇಲ್ಲದಿದ್ದರೆ ತೊಡೆಯ ಮೇಲೆ ಅಥವಾ ಕೈಗಳ ಮಣಿಕಟ್ಟಿಗೆ ನೇತು ಹಾಕಿಕೊಂಡಿರುತ್ತಾರೆ.
ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಸಾವು-ನೋವಿಗೆ ಒಳಗಾಗುವವರು ದ್ವಿಚಕ್ರ ವಾಹನ ಸವಾರರು. ಹೆಲ್ಮೆಟ್ ಬಳಕೆಯಿಂದ ತಲೆಗೆ ಆಗುವ ಅಪಾಯಕಾರಿ ಗಾಯಗಳ ತೀವ್ರತೆಯನ್ನು ಶೇ.69 ಮತ್ತು ಶೇ.42 ಜೀವಹಾನಿ ಕಡಿಮೆ ಮಾಡಬಹುದಾಗಿದೆ. ಪ್ರತಿ ಗಂಟೆಗೆ ದ್ವಿಚಕ್ರ ವಾಹನಗಳು ಸರಾಸರಿ 55 ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತವೆ. ಅಂದರೆ ಸೆಕೆಂಡ್​ಗೆ 49 ಅಡಿ ಕ್ರಮಿಸುತ್ತಾರೆ ಎಂದರ್ಥ.
ಅಪಘಾತದ ಸಮಯದಲ್ಲಿ, ಹೆಲ್ಮೆಟ್ ಧರಿಸಿದವರಿಗಿಂತ ಹೆಲ್ಮೆಟ್ ರಹಿತ ಸವಾರರ ಮಿದುಳಿಗೆ ಆಗುವ ಗಾಯಗಳ ಪ್ರಮಾಣ 3 ಪಟ್ಟು ಹೆಚ್ಚು. ಹೆಲ್ಮೆಟ್ ಬಳಸಿದರೆ ಬುರುಡೆ ಮೂಳೆಗಳು ಮಿದುಳನ್ನು ಹೊಕ್ಕು ಹಾನಿ ಮಾಡುವುದನ್ನು ತಪ್ಪಿಸಬಹುದು. ಅದರಲ್ಲಿಯೂ ಐಎಸ್​ಐ ಮುದ್ರೆ ಹೆಲ್ಮೆಟ್ ಉತ್ತಮ. ಇದಲ್ಲದೆ, ಅಪಘಾತದಲ್ಲಿ ಮಿದುಳಿಗಾಗುವ ಗಾಯಗಳ ಚಿಕಿತ್ಸೆ ವೆಚ್ಚ ದುಬಾರಿ. ಆಜೀವಪರ್ಯಂತ ಅಂಗವೈಕಲ್ಯಕ್ಕೂ ಕಾರಣವಾಗಬಹುದು. ಹೆಲ್ಮೆಟ್ ಧರಿಸುವುದರಿಂದ ಮಿದುಳಿಗೆ ಆಗುವ ಗಾಯಗಳ ತೀವ್ರತೆಯನ್ನು ತಡೆಗಟ್ಟಬಹುದು. ಸವಾರರು ದ್ವಿಚಕ್ರ ವಾಹನ ಚಲಾಯಿಸುವಾಗ ಹೆಚ್ಚು ಜಾಗೃತಿ ವಹಿಸಬೇಕೆಂದು ಸಂಚಾರ ಪೊಲೀಸರ ಸಲಹೆಯಾಗಿದೆ.
337 ಗಂಟೆ ಅಧ್ಯಯನ:ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ. ನಗರದ 15 ಸ್ಥಳಗಳಲ್ಲಿ ಅಂದಾಜು 95 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. 225 ದಿನಗಳಲ್ಲಿ ವಿವಿಧ ಸಮಯದಲ್ಲಿ 90 ನಿಮಿಷಗಳ ಕಾಲ ಅಧ್ಯಯನ ನಡೆಸಲಾಗಿದ್ದು, ಒಟ್ಟು 337 ಗಂಟೆ ಸಮೀಕ್ಷೆ ನಡೆಸಲಾಗಿದೆ.
ಕಾನೂನು ಏನು ಹೇಳುತ್ತದೆ?:ಭಾರತೀಯ ಮೋಟಾರು ವಾಹನ ಕಾಯ್ದೆ 1988ರ ಕಲಂ 129, ಕರ್ನಾಟಕ ಮೋಟಾರು ವೆಹಿಕಲ್ ರೂಲ್ಸ್ 1989 ನಿಯಮ 23(1)ರಲ್ಲಿ ಹೆಲ್ಮೆಟ್ ಧರಿಸುವ ಬಗ್ಗೆ ಉಲ್ಲೇಖಿ ಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿ, ರಸ್ತೆ ಯಲ್ಲಿ ಮೋಟಾರು ಸೈಕಲ್ ಚಾಲನೆ ಮಾಡುವಾಗ ಅಥವಾ ಹಿಂಬದಿ ಸವಾರಿ ವೇಳೆ (4 ವರ್ಷ ಮೇಲ್ಪಟ್ಟ)ವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − five =
Remember me
