| ಪಂಕಜ ಕೆ.ಎಂ. ಬೆಂಗಳೂರುರಾಜ್ಯದಲ್ಲಿ ಎಚ್​ಐವಿ ಸೋಂಕಿತರು ಅರ್ಧದಲ್ಲೇ ಔಷಧ ನಿಲ್ಲಿಸುತ್ತಿದ್ದು, ಚಿಕಿತ್ಸೆಗೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ 2030ರ ವೇಳೆಗೆ ಎಚ್​ಐವಿ/ಏಡ್ಸ್​ ಶೂನ್ಯಕ್ಕೆ ತರುವ ಗುರಿ ತಲುಪಲು ಆರೋಗ್ಯ ಇಲಾಖೆಗೆ ಸವಾಲಾಗಿದೆ. ಎಚ್​ಐವಿ ಸೋಂಕಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಕೆಯಾದರೂ ಬೆಂಗಳೂರು ನಗರ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆ ಸೇರಿ ಕೆಲ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಕೆಲ ದಿನಗಳ ಔಷಧ ಸೇವನೆಯಿಂದ ಚೇತರಿಕೆ ಹೊಂದುತ್ತಿದ್ದಂತೆ ಗುಣಮುಖರಾಗಿದ್ದೇವೆ ಎಂಬ ಭಾವನೆಯಿಂದ ಕೆಲವರು ಔಷಧ ನಿಲ್ಲಿಸಿದರೆ, ಜೀವನ ಪರ್ಯಂತ ಯಾರು ಈ ಔಷಧ ಸೇವಿಸುವವರು ಎಂಬ ಕಾರಣಕ್ಕೆ ಕೆಲವರು ಔಷಧಿ ಕೈಬಿಡುತ್ತಿದ್ದಾರೆ. ಇದರ ಹೊರತಾಗಿ ಕಳಂಕ ತಾರತಮ್ಯದಿಂದಾಗಿ ಸೋಂಕು ಪರೀೆ ಮತ್ತು ಚಿಕಿತ್ಸೆಯಿಂದಲೂ ಬಹಳಷ್ಟು ಮಂದಿ ದೂರ ಉಳಿಯುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಸೋಂಕಿತರನ್ನು ಪತ್ತೆ ಹೆಚ್ಚುವ ಹಾಗೂ ಅವರಿಗೆ ನಿಯಮಿತವಾಗಿ ಚಿಕಿತ್ಸೆ ಮತ್ತು ಔಷಧ ಕೊಡಿಸುವಲ್ಲಿ ಕಾರ್ಯದಲ್ಲಿ ಹಿನ್ನಡೆಯಾಗುತ್ತಿದೆ.
ಒಮ್ಮೆ ಎಚ್​ಐವಿ ( ಹ್ಯೂಮನ್​ ಇಮ್ಯೂನೋ ಡೆಫಿಷಿಯನ್​ಸ್ಸಿ ವೈರಸ್​) ದೃಢಪಟ್ಟರೆ ದೇಹದಲ್ಲಿ ವೈರಸ್​ ಪ್ರಮಾಣ ಹೆಚ್ಚಳವಾಗದಂತೆ ಜೀವನಪೂರ್ತಿ ಔಷಧ ಪಡೆಯಬೇಕು. ಆದರೆ, ಸೋಂಕಿನ ಬಗೆಗೆ ರ್ನಿಲ್ಯ ಹಾಗೂ ಸೋಂಕಿತರು ಎಂಬ ಕಳಂಕವನ್ನು ಹೊತ್ತುಕೊಳ್ಳಬೇಕು ಎಂಬ ಹಿಂಜರಿಕೆಯಿಂದಾಗಿ ಬಹಳಷ್ಟು ಮಂದಿ ಚಿಕಿತ್ಸೆಯಿಂದ ದೂರ ಉಳಿಯುತ್ತಿದ್ದಾರೆ. ಇದರಿಂದ ಎಚ್​ಐವಿ ಸೋಂಕು ಏಡ್ಸ್​ ಆಗಿ ಪರಿವರ್ತನೆಯಾಗುತ್ತಿದೆ. ಇದರಿಂದ ಸೋಂಕು ನಿಯಂತ್ರಣ ಸವಾಲಾಗಿ ಪರಿಣಮಿಸಲಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಸೋಂಕಿತರನ್ನು ಪತ್ತೆ ಮಾಡುವ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಲು ಚಿಂತನೆ ನಡೆಸಿದೆ.
ಚಿಕಿತ್ಸೆ ನಿರಾಕರಣೆ:ಸೋಂಕಿತರಲ್ಲಿ ಬಹಳಷ್ಟು ಮಂದಿ ಚಿಕಿತ್ಸೆ ಹಾಗೂ ಔಷಧ ನಿರಾಕರಿಸಿ ಪತ್ರ ಬರೆದುಕೊಟ್ಟಿದ್ದಾರೆ. ಕೆಲವರು ಜೀವನ ಪರ್ಯಂತ ಔಷಧ ಸೇವಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಆಯುರ್ವೇದ, ಯುನಾನಿ ಸೇರಿ ಪರ್ಯಾಯ ಚಿಕಿತ್ಸಾ ಪದ್ಧತಿ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಔಷಧ ಪಡೆಯುವವರ ಸಂಖ್ಯೆ ಕಡಿಮೆಯಾಗಿದೆ. ಅಂತಹವರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ಏಡ್ಸ್​ ನಿಯಂತ್ರಣ ಸೊಸೈಟಿ ಅಧಿಕಾರಿಗಳು ತಿಳಿಸಿದ್ದಾರೆ.ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ 71 ಆ್ಯಂಟಿ ರೆಟ್ರೋವೈರಲ್​ಥೆರಪಿ ಕೇಂದ್ರಗಳು, 303 ಲಿಂಕ್​ ಆ್ಯಂಟಿರೆಟ್ರೋವೈರಲ್​ ಥೆರಪಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, 3,73,317 (1,81,079 ಪುರುಷರು, 1,72,412 ಮಹಿಳೆಯರು, 1,063 ತೃತೀಯಲಿಂಗಿಗಳು, 10,254 ಗಂಡು ಮಕ್ಕಳು ಹಾಗೂ 8,509 ಹೆಣ್ಣು ಮಕ್ಕಳಿದ್ದಾರೆ.) ಎಚ್​ಐವಿ ಸೋಂಕಿತರು ಈವರೆಗೂ ಆ್ಯಂಟಿರೆಟ್ರೋವೈರಲ್​ ಥೆರಪಿ ಕೇಂದ್ರಗಳಲ್ಲಿ ನೋಂದಣಿಯಾಗಿದ್ದಾರೆ. ಆದರೆ, ಇವರಲ್ಲಿ 1,76,113 ಮಂದಿ ಮಾತ್ರವೇ ರೆಟ್ರೋವೈರಲ್​ಥೆರಪಿ ಔಷಧ ತೆಗೆದುಕೊಳ್ಳುತ್ತಿದ್ದಾರೆ. ಈವರೆಗೂ 94,315 ಸೋಂಕಿತರು ಮೃತಪಟ್ಟಿದ್ದಾರೆ.
ಈಡೇರದ ಟೆಸ್ಟಿಂಗ್​ ಗುರಿಕೋವಿಡ್​ ಸಂದರ್ಭದಲ್ಲಿ (2020) ತಗ್ಗಿದ ಎಚ್​ಐವಿ ಪರೀೆ ನಂತರದಲ್ಲಿ ಹೆಚ್ಚಳವಾದರೂ ವಾರ್ಷಿಕ ಶೇ.100 ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ನಿಗದಿತ ಗುರಿಯಲ್ಲಿ 2020&21 ರಲ್ಲಿ ಶೇ. 62.03ರಷ್ಟು, 2021&22ರಲ್ಲಿ ಶೇ. 84.77ರಷ್ಟು ಹಾಗೂ 2022&23ರಲ್ಲಿ ಈವರೆಗೂ ಶೇ. 70.79ರಷ್ಟು ಪರೀೆ ನಡೆದಿದೆ. ಜನರು ಪರೀೆಗೆ ಹಿಂದೇಟು ಹಾಕುತ್ತಿರುವುದರಿಂದ ಸೋಂಕಿತರ ಪತ್ತೆ ಕಾರ್ಯದಲ್ಲಿ ಹಿನ್ನಡೆಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.
7 ಸಾವಿರ ಹೊಸ ಸೋಂಕಿತರು2022&23ಕ್ಕೆ 26,34,744 ಮಂದಿ ಹಾಗೂ 12,09,010 ಗರ್ಭಿಣಿಯರನ್ನು ಪರೀಸುವ ಗುರಿ ಹೊಂದಲಾಗಿತ್ತು. ಈವರೆಗೂ 18,65,141 ಮಂದಿ ಹಾಗೂ 8,37,709 ಗರ್ಭಿಣಿಯರಿಗೆ ಪರೀೆ ನಡೆಸಲಾಗಿದ್ದು, ಈ ಪೈಕಿ ಕ್ರಮವಾಗಿ 7,696 ಹಾಗೂ 327 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ.
ಎಲ್ಲೆಲ್ಲಿ ಹೆಚ್ಚು ಕೇಸ್​?ರಾಜ್ಯದಲ್ಲಿ ಎಚ್​ಐವಿ/ಏಡ್ಸ್​ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ನಿರಂತರ ಕ್ರಮ ಕೈಗೊಳ್ಳುತ್ತಿದ್ದು, ವರ್ಷದಿಂದ ವರ್ಷಕ್ಕೆ ಒಟ್ಟಾರೆ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆಯಾದರೂ, ಕೆಲ ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. 2022&23ರಲ್ಲಿ ಈವರೆಗೂ ಬೆಂಗಳೂರು ನಗರ (737), ಬೆಳಗಾವಿ (733), ಬಿಬಿಎಂಪಿ (567), ಬಾಗಲಕೋಟೆ (543), ಮೈಸೂರು (439), ವಿಜಯಪುರ (378), ಬಳ್ಳಾರಿ (311) ಜಿಲ್ಲೆಗಳಲ್ಲಿ ಅತೀ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಹಾವೇರಿ (99), ರಾಮನಗರ (79), ಕೊಡಗು (57), ಉತ್ತರ ಕನ್ನಡ (42) ಕಡಿಮೆ ಪ್ರಕರಣಗಳು ಪತ್ತೆಯಾಗಿವೆ. ಗರ್ಭಿಣಿಯರಲ್ಲಿ ಬೆಳಗಾವಿ (45), ಬೆಂಗಳೂರು ನಗರ (33), ಬಾಗಲಕೋಟೆ (27), ಬಳ್ಳಾರಿ (21), ವಿಜಯಪುರ (18), ಬಿಬಿಎಂಪಿ (16)ವ್ಯಾಪ್ತಿಯಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಉಡುಪಿ ಜಿಲ್ಲೆ ಶೂನ್ಯವಿದೆ.
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಲು ವಲಸೆ ಹಾಗೂ ಅಸುರತ ಲೈಂಗಿಕತೆ ಕಾರಣವಾಗಿದೆ. ಹೆಚ್ಚಿನ ಜಾಗೃತಿಯ ಅಗತ್ಯವಿದೆ. 2030ರ ವೇಳೆಗೆ ರಾಜ್ಯದಲ್ಲಿ ಎಚ್​ಐವಿ/ಏಡ್ಸ್​ ಶೂನ್ಯಕ್ಕೆ ತರುವ ಗುರಿ ಹೊಂದಿದ್ದು, ಸೋಂಕಿತರ ಪತ್ತೆ ಹಾಗೂ ಚಿಕಿತ್ಸೆ ಕಾರ್ಯದೊಂದಿಗೆ ಕಳಂಕ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
| ಗೋವಿಂದರಾಜು ಉಪನಿರ್ದೇಶಕರು, ಕರ್ನಾಟಕ ರಾಜ್ಯ ಏಡ್ಸ್​ ನಿಯಂತ್ರಣ ಸೊಸೈಟಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
