ಬೆಂಗಳೂರು:ಸಾರಿಗೆ ಬಸ್​ಗಳಲ್ಲಿ ಇತ್ತೀಚೆಗೆ ಸಾಕು ನಾಯಿಗಳನ್ನೂ ಸಾಗಣೆ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ನಾಯಿ ಕೊಂಡೊಯ್ಯಲು ರಿಯಾಯಿತಿ ನೀಡಿದೆ.ಈ ಮೊದಲು ಫುಲ್​ ಟಿಕೆಟ್​ ದರ ನೀಡಬೇಕಿತ್ತು. ಪರಿಷ್ಕೃತ ಸುತ್ತೋಲೆ ಅನ್ವಯ ನಾಯಿಗಳಿಗೆ ಅರ್ಧ ಟಿಕೆಟ್​ (ಮಕ್ಕಳಿಗೆ ವಿಧಿಸುವ ದರ) ನಿಗದಿ ಪಡಿಸಲಾಗಿದೆ. ಈ ಕುರಿತು ಕೆಎಸ್​ಆರ್​ಟಿಸಿ ಅಧಿಕೃತ ಮಾಹಿತಿ ನೀಡಿದೆ.
30 ಕೆಜಿ ಲಗೇಜ್​ ಸಾಗಣೆ ಉಚಿತ:ವಿಮಾನದಲ್ಲಿ ಮಾತ್ರ ನಿರ್ದಿಷ್ಟ ಲಗೇಜ್​ ಉಚಿತವಾಗಿ ಕೊಂಡೊಯ್ಯಲು ಅವಕಾಶವಿದೆ. ಇನ್ಮುಂದೆ ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಲಗೇಜ್​ ಕೊಂಡೊಯ್ಯುವ ಬಗ್ಗೆ ಸ್ಪಷ್ಟತೆ ನೀಡಲಾಗಿದೆ. ಈ ಬಗ್ಗೆ ಇದ್ದ ಗೊಂದಲವನ್ನು ನಿವಾರಿಸಲಾಗಿದೆ.
ವೈಯಕ್ತಿಕವಾಗಿ ಕೊಂಡೊಯ್ಯುವ ಲಗೇಜ್​ ತೂಕ 30 ಕೆಜಿವರೆಗೆ ಯಾವುದೇ ದರ ವಿಧಿಸುತ್ತಿಲ್ಲ. ಬ್ಯಾಗ್​, ಸೂಟ್​ಕೇಸ್​, ಕಿಟ್​ ಬ್ಯಾಗ್​ ದಿನಸಿ, ಅಕ್ಕಿ, ತೆಂಗಿನಕಾಯಿ, ರಾಗಿ, ಅಕ್ಕಿ ಹಿಟ್ಟು, ತರಕಾರಿ, ಹೂ ಹಣ್ಣು, ಸೀಲಿಂಗ್​ ಫ್ಯಾನ್​, ಒಂದು ಮಿಕ್ಸರ್​ ಗ್ರೈಂಡರ್​ ಬಾಕ್ಸ್​ ಇತ್ಯಾದಿ ವಸ್ತುಗಳು 30 ಕೆಜಿ ಒಳಗೆ ಪರಿಗಣಿಸಲಾಗುತ್ತದೆ. ಲಗೇಜ್​ 30 ಕೆಜಿ ಮೀರಿದರೆ ಅದರ ಮೇಲೆ ನಿಯಮದ ಪ್ರಕಾರ ದರ ವಿಧಿಸಲಾಗುತ್ತದೆ. ಈ ಕುರಿತು ಕೆಎಸ್​ಆರ್​ಟಿಸಿ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ.
ಸರ್ಕಾರಿ ಮಹಿಳಾ ನಿಲಯದ ಹುಡುಗಿಯ ಕೈಹಿಡಿದ ದಾವಣಗೆರೆ ಯುವಕ! ಶಾಸ್ತ್ರೋಕ್ತವಾಗಿ ಮದ್ವೆ ನಡೆಸಿಕೊಟ್ಟ ಅಧಿಕಾರಿಗಳು- ಶಾಸಕರು

ಶಾಸಕರ ಹೆಸರಲ್ಲೂ ಹಣಕ್ಕೆ ಪೀಡಿಸ್ತಿದ್ದಾರೆ… ಪ್ಲೀಸ್​ ನನಗೆ ದಯಾಮರಣ ಕೊಡಿ: ಹುಬ್ಬಳ್ಳಿ ಮೂಲದ ಗುತ್ತಿಗೆದಾರ ಅಳಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − one =
Remember me
