ಮಂಜುನಾಥ ಅಯ್ಯಸ್ವಾಮಿಹೊಸಪೇಟೆ
ಕಳೆದ ತಿಂಗಳ ರಾಜ್ಯ ಸೇರಿದಂತೆ ವಿವಿಧ ಕಡೆ ಮಳೆ ಪ್ರವಾಹದ ಬಳಿಕ ಹಂಪಿ ಪ್ರವಾಸೋದ್ಯಮದಲ್ಲಿ ಚೇತರಿಕೆ ಕಾಣುತ್ತಿದ್ದು, ದಿನದಿಂದ ದಿನಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು ಪ್ರವಾಸೋದ್ಯಮದಲ್ಲಿ ಚೇತರಿಕೆ ಕಂಡಿದೆ. ಆ.15 ರಿಂದ ಆ.18ರ ವರೆಗೆ ಎರಡು ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿ ಐತಿಹಾಸಿಕ ಸ್ಮಾರಕಗಳನ್ನು ಕಣ್ತುಂಬಿಕೊಂಡಿದ್ದಾರೆ.
ವಿಶ್ವದ ಅಚ್ಚುಮೆಚ್ಚಿನ ತಾಣಗಳಲ್ಲಿ ಹಂಪಿ ಕೂಡ ಒಂದು. ಇಲ್ಲಿ ಬೇಸಿಗೆಯಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ. ಮಳೆಗಾಲದಲ್ಲಿ ಹಂಪಿ ವೀಕ್ಷಣೆಗೆ ಬರುವವರ ಸಂಖ್ಯೆ ಆರಂಭವಾಗುತ್ತದೆ. ತಂಪಿನ ವಾತವರಣದಲ್ಲಿ ಹಂಪಿ ನೋಡಲು ಭಾರಿ ವಿಶೇಷವಿರುತ್ತದೆ. ಇನ್ನೂ ವಿಕೇಂಡ್ ವೇಳೆ ಸ್ನಾರಕಗಳ ವೀಕ್ಷಣೆಗೆ ಜನಸಾಗರವೇ ಹರಿದು ಬರುತ್ತಿದೆ. ಈ ಬಾರಿ ಜೂನ್ ತಿಂಗಳ ನಂತರ ಆರಂಭವಾಗಿದ್ದ ಪ್ರವಾಸಿಗರು, ಕರ್ನಾಟಕ, ಕೆರಳ, ಮಹಾರಾಷ್ಟ್ರ ಸೇರಿದಂತೆ ಇತರೆ ಕಡೆ ಮಳೆಯ ಪ್ರವಾಹದಿಂದ ಹಂಪಿಗೆ ಪ್ರವಾಸಿಗರ ಸಂಖ್ಯೆ ಭಾರಿ ಕಡಿಮೆಯಾಗಿತ್ತು. ಸದ್ಯ ಮಳೆ ಪ್ರವಾಹ ಕಡಿಮೆಯಾಗಿದ್ದು ಪ್ರವಾಸಿ ಸಂಖ್ಯೆ ಏರುತ್ತಿದೆ. ಜತೆಗೆ ದರೋಜಿ ಕರಡಿಧಾಮ, ಹಂಪಿ ಜೂ, ಕೊಪ್ಪಳದ ಅಂಜನಾದ್ರಿ, ಆನೆಗುಂದಿ ಸೇರಿದಂತೆ ಇತರೆ ಕಡೆ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ.
ಆ.15 ಸ್ವಾತಂತ್ರ‍್ಯ ದಿನಾಚರಣೆ, ಮೂರು ದಿನಗಳ ನಂತರ ವಿಕೇಂಡ್ ಹಿನ್ನೆಲೆಯಲ್ಲಿ ಹಂಪಿಗೆ ಪ್ರವಾಸಿಗರ ಅಂಖ್ಯೆ ಹೆಚ್ಚಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ನಾಲ್ಕು ದಿನದೊಳಗೆ ಎರಡು ಲಕ್ಷಕ್ಕೂ ಲಕ್ಷಕ್ಕೂ ಅಧಿಕ ಪ್ರವಾಸಿಗರು ಹಂಪಿ ಸೇರಿದಂತೆ ಸುತ್ತಮುತ್ತಲಿನ ಪ್ರವಾಸಿ ತಾಣಗಳಲ್ಲಿ ಎರಡು ಲಕ್ಷ ಕ್ಕೂ ಅಧಿಕ ಜನರು ಭೇಟಿ ನೀಡಿದ್ದಾರೆ. ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನ, ವಿಜಯ ವಿಠ್ಠಲ ದೇವಸ್ಥಾನ, ಲೋಟಸ್ ಮಹಲ್ ದೇಶ – ವಿದೇಶಿಗರ ಸಂಖ್ಯೆ ಲಭ್ಯವಾಗುತ್ತದೆ. ಇನ್ನು ಸಾಕಷ್ಟು ಪ್ರವಾಸಿಗರು ರಾಣಿಸ್ನಾನಗೃಹ, ಮಹಾನವಮಿ ದಿಬ್ಬ, ಸಾಸುವೆಕಾಳು, ಕಡಲೆಕಾಳು, ಉಗ್ರನರಸಿಂಹ, ಕೃಷ್ಣ ಬಜಾರ್ ಸೇರಿದಂತೆ ಹಲವು ಸ್ಮಾರಕ ಕಡೆ ಪ್ರವಾಸಿಗರಿಗೆ ಬಂದು ಹೋಗುತ್ತಾರೆ. ಈ ಕುರಿತು ನಿಖರವಾದ ಅಂಕಿ ಸಂಖ್ಯೆಗಳು ಲಭ್ಯವಾಗುವುದಿಲ್ಲ.
ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲ, ಮುಖ್ಯ ಗೋಪುರ, ವಿಜಯ ವಿಠ್ಠಲ ದೇಗುಲ, ಕಮಲ ಮಹಲ್, ಕಲ್ಲಿನ ತೇರು, ಮಹಾನವಮಿ ದಿಬ್ಬ, ಹಜಾರ ರಾಮ ದೇಗುಲ, ಬಡವಿ ಲಿಂಗ, ಉಗ್ರ ನರಸಿಂಹ ಸ್ಮಾರಕ, ಕಡಲೆ ಕಾಳು, ಸಾಸಿವೆ ಕಾಳು ಗಣೇಶ ಮಂಟಪಗಳು, ಆನೆಲಾಯ ಸೇರಿ ಇಲ್ಲಿನ ಇತರ ಸ್ಮಾರಕಗಳು ದೇಶ, ವಿದೇಶಿ ಪ್ರವಾಸಿಗರ ಫೆವರೇಟ್ ಸ್ಮಾರಕಗಳಾಗಿವೆ.
ಹಂಪಿಯಲ್ಲಿ ಪ್ರವಾಸಿಗರು ವಾಸ್ತವ್ಯ ಹೂಡಲು ಸಮರ್ಪಕ ಹೋಟೆಲ್‌ಗಳಿಲ್ಲ. ಯಾತ್ರಿ ನಿವಾಸವಿಲ್ಲ. ಅಗತ್ಯ ಸಂಖ್ಯೆಯಲ್ಲಿ ಶೌಚಾಲಯಗಳಿಲ್ಲ. ಹಂಪಿಯ ಸ್ಮಾರಕಗಳ ಗುಚ್ಛವನ್ನು ಯುನೆಸ್ಕೊ, 1986ರಲ್ಲೇ ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದರೂ, ಮೂಲ ಸೌಲಭ್ಯಗಳು ಮಾತ್ರ ಅಷ್ಟಕ್ಕಷ್ಟೇ ಎಂಬ ಕೊರಗು ಪ್ರವಾಸಿಗರು ಹಾಗೂ ಸ್ಥಳೀಯರನ್ನು ಈಗಲೂ ಕಾಡುತ್ತಿದೆ.
ಪ್ರತಿ ದಿನ ಸಾವಿರಾರು ಪ್ರವಾಸಿಗರು ಹಂಪಿಗೆ ಭೇಟಿ ನೀಡುತ್ತಾರೆ. ಅಲ್ಲಿನ ಸೊಬಗನ್ನು ಕಣ್ತುಂಬಿಕೊಳ್ಳುತ್ತಾರೆ. ಸದ್ಯ ಮಳೆಯಲ್ಲಿ ಹಂಪಿಯ ಸ್ಮಾರಕಗಳ ಸೊಬಗು ಇನ್ನಷ್ಟು ಕಂಗೊಳಿಸುತ್ತಿದೆ. ಕೆಲ ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಎಲ್ಲಿನೋಡಿದರೂ ಅಚ್ಚಹಸರಿನ ಪ್ರದೇಶ. ಹೀಗಾಗಿ ಹಂಪಿಯಲ್ಲಿ ಸ್ಮಾರಕಗಳು ಮಳೆಯಲ್ಲಿ ಕಂಗೊಳಿಸುತ್ತಿವೆ. ಜತೆಗೆ ಈ ಮಳೆ ಪ್ರವಾಸಿಗರಿಗೂ ಮುದ ನೀಡುತ್ತಿದೆ. ಕಲ್ಲಿನ ತೇರು ಸೇರಿದಂತೆ ಸಾಲು ಮಂಟಪಗಳು ನೋಡಲು ಅತ್ಯಾಕರ್ಷಕವಾಗಿ ಕಾಣಿಸುತ್ತಿವೆ. ಶ್ರೀ ವಿರೂಪಾಕ್ಷ ದೇಗುಲದ ಆವರಣದೊಳಗಡೆಯೂ ಮಳೆ ನೀರು ತುಂಬಿಕೊAಡಿದೆ. ಇನ್ನೂ ಕೋದಂಡರಾಮ ದೇಗುಲದ ಬಳಿಯಿಂದ ಅಂಜನಾದ್ರಿಯ ದೃಶ್ಯ ರೋಮಾಂಚನವಾಗಿದ್ದು, ಮೋಡಗಳ ನಡುವೆ ಅಂಜನಾದ್ರಿ ಬೆಟ್ಟ ಕಂಡ ಪ್ರವಾಸಿಗರು ಖುಷ್ ಆಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + three =
Remember me
