ಬೆಂಗಳೂರು :ವಿಧಾನಸೌಧದಲ್ಲಿ ಒಂದೆಡೆ ಕರ್ನಾಟಕ ರಾಜ್ಯೋತ್ಸವ ಆಚರಣೆಯ ಖುಷಿ. ಇನ್ನೊಂದೆಡೆ ಕನ್ನಡ ಸಾರಸ್ವತ ಲೋಕವನ್ನು ಉನ್ನತಿಗೇರಿಸಿದ ರಾಷ್ಟ್ರಕವಿ ಕುವೆಂಪು ಸಮಗ್ರ ಸಾಹಿತ್ಯ ಪುಸ್ತಕಗಳ ಸರಣಿ ಮತ್ತು ಡಿಜಿಟಲ್ ಆವೃತ್ತಿ ಲೋಕಾರ್ಪಣೆಗೆ ಸಾಕ್ಷಿಯಾಯಿತು. ಇದರಿಂದ ಸಡಗರ ಕೂಡ ಇಮ್ಮಡಿಗೊಂಡಿತು.  ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವ ಕುವೆಂಪು ಸಮಗ್ರ ಸಾಹಿತ್ಯ ಪುಸ್ತಕಗಳ ಸರಣಿ ಮತ್ತು ಡಿಜಿಟಲ್ ಆವೃತ್ತಿಯನ್ನು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕುವೆಂಪು ಸಮಗ್ರ ಸಾಹಿತ್ಯ ಸರಣಿ ಡಿಜಿಟಲ್ ವೇದಿಕೆಗೆ ಬಂದಿರುವುದು ಮಹತ್ವದ ಬೆಳವಣಿಗೆ. ಇದರಿಂದಾಗಿ ಸಾಹಿತ್ಯದ ಓದುಗರು ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ಕುವೆಂಪು ಅವರ ಬರವಣಿಗೆಯನ್ನು ತಮಗೆ ಬೇಕೆನ್ನಿಸಿದ ಕ್ಷಣದಲ್ಲಿ ಸವಿಯಬಹುದಾಗಿದೆ. ಕನ್ನಡಿಗರು ಕನ್ನಡೇತರರ ನಡುವೆ ಹಾಗೆಯೇ ಜಗತ್ತಿನ ಬೇರಾವುದೇ ಭಾಷೆಯ ಜನರು ಕನ್ನಡಿಗರ ಜತೆ ದಿನನಿತ್ಯದ ಸಂವಹನ ಹಾಗೂ ವ್ಯವಹಾರಗಳನ್ನು ಅಡೆತಡೆಯಿಲ್ಲದೆ ಕನ್ನಡ ಮೂಲಕವೇ ನಡೆಸಲು ಸಾಧ್ಯವಾಗುವಂತೆ ಮಾಡಲು ಕನ್ನಡ ತಂತ್ರಜ್ಞಾನ ಅಭಿವೃದ್ಧಿ ತಂಡ ರಚಿಸಲಾಗುವುದು. ಸ್ಟಾರ್ಟ್‌ಅಪ್ ವಿಷನ್ ಗ್ರೂಪ್ ನೇತೃತ್ವದಲ್ಲಿ ಈ ತಂಡ ಕೆಲಸ ಮಾಡಲಿದೆ. ತಂತ್ರಜ್ಞಾನ ಯುಗದಲ್ಲಿ ಕನ್ನಡ ಭಾಷೆ ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ, ಪರಿಹಾರ ನೀಡಲು ವಿಷನ್ ಗ್ರೂಪ್ ನೇತೃತ್ವದಲ್ಲಿ ಕನ್ನಡ ತಂತ್ರಜ್ಞಾನ ಅಭಿವೃದ್ಧಿ ತಂಡ ಕೆಲಸ ಮಾಡಲಿದೆ ಎಂದರು.
ಈ ತಂಡದ ಉದ್ದೇಶಗಳನ್ನು ವಿಷನ್ ಗ್ರೂಪ್ ಸದಸ್ಯ ಡಾ.ಸಮೀರ್ ಕಾಗಲ್ಕರ್ ಅವರು ಈ ಸಂದರ್ಭದಲ್ಲಿ ವಿವರಿಸಿದರು.  ಹಂಪಿ ಕನ್ನಡ ವಿ.ವಿ. ಕುಲಪತಿ ಡಾ.ಸ.ಚಿ.ರಮೇಶ ಅಧ್ಯಕ್ಷ ನುಡಿಗಳನ್ನಾಡಿದರು. ಕುವೆಂಪು ಸಾಹಿತ್ಯ ಸರಣಿ ಸಂಪಾದಕ ಡಾ.ಕೆ,ಸಿ.ಶಿವಾರೆಡ್ಡಿ, ಹಂಪಿ ಕನ್ನಡ ವಿ.ವಿ. ಪ್ರಸಾರಾಂಗ ನಿರ್ದೇಶಕ ಡಾ.ಎಚ್.ಡಿ.ಪ್ರಶಾಂತ್, ಭಾರತೀಯ ವಿಜ್ಞಾನ ಸಂಸ್ಥೆ ಪ್ರಾಧ್ಯಾಪಕ ಪ್ರೊ.ಎ.ಜಿ.ರಾಮಕೃಷ್ಣನ್, ಹಂಪಿ ಕನ್ನಡ ವಿ.ವಿ. ಕುಲಸಚಿವ ಡಾ.ಎ.ಸುಬಣ್ಣ ರೈ ಕುವೆಂಪು ಸಮಗ್ರವನ್ನು ಡಿಜಿಟಲ್ ಆವೃತ್ತಿಗೆ ತರುವ ಕೆಲಸ ಮಾಡಿರುವ ಭಾಷಿಣಿ ಡಿಜಿಟೈಸೇಷನ್ ಸಂಸ್ಥೆಯ ಡಾ.ಶಿವಕುಮಾರ್ ಮತ್ತು ಭಾರ್ಗವಿ ದಂಪತಿ ಪಾಲ್ಗೊಂಡಿದ್ದರು.
ಕುವೆಂಪು ಅವರನ್ನು ಎದೆ ಆಳದಲ್ಲಿ ಇಟ್ಟುಕೊಂಡು ಡಾ.ಕೆ.ಸಿ.ಶಿವಾರೆಡ್ಡಿ ಈ ಕೆಲಸ ಮಾಡಿದ್ದಾರೆ. ಡಿಜಿಟಲ್ ಆವೃತತತಿಯಾಗಿ ಹೊರ ಬರುತ್ತಿರುವುದು ಸೌಭಾಗ್ಯದ ವಿಷಯ. 20ನೇ ಶತಮಾನದ ಭಾರತೀಯ ಸಾಹಿತ್ಯ ಲೇಖಕರಲ್ಲಿ ಕುವೆಂಪು ಅಗ್ರಮಾನ್ಯರು. ಅವರು ವಿಶ್ವಮಾನ್ಯರು. ಭಾರತೀಯ ಸಾಕ್ಷಿ ಪ್ರಜ್ಞೆಗೆ ಕೇಂದ್ರ ರೂಪಕ. ಕುವೆಂಪು ಸಾಹಿತ್ಯ ಓದಿದರೆ ವಿಶ್ವಮಾನವರಾಗಬಹುದು.-ಡಾ.ಮಲ್ಲೇಪುರಂ ಜಿ.ವೆಂಕಟೇಶ್, ವಿಶ್ರಾಂತ ಕುಲಪತಿಗಳು, ಸಂಸ್ಕೃತ ವಿಶ್ವವಿದ್ಯಾಲಯ.
ಮಾನವೀಯ ಮೌಲ್ಯಗಳನ್ನು ಕಟ್ಟಿಕೊಟ್ಟ ಧೀಮಂತ ವ್ಯಕ್ತಿ ಕುವೆಂಪು. ನಅವು ಹಂಪಿ ವಿ.ವಿ. ಜತೆ ಕೈಜೋಡಿಸಿ, ಸಾಹಿತ್ಯ ಕನ್ನಡಕ್ಕೆ ಸೀಮಿತವಾಗಿದ್ದರೆ ಸಾಲದು. ಹೊರ ಪರರಪಂಚಕ್ಕೂ ಹೋಗಬೇಕು. ನಮ್ಮ ಸಾಹಿತ್ಯ ಬೇರೆಯವರಿಗೆ ತಲುಪದೆ ನೋಬೆಲ್ ಪ್ರೈಸ್ ಮಿಸ್. ಹೊರ ಜಗತ್ತಿಗೆ ಗೊತ್ತಾಗಬೇಕು. ಆ ಬಗ್ಗೆ ನಮ್ಮ ವಿ.ವಿ. ಹೆಚ್ಚಿನ ಕೆಲಸ ಮಾಡುತ್ತದೆ.-ಡಾ.ಕರಿಸಿದ್ದಪ್ಪ, ಕುಲಪತಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ.
ಕುವೆಂಪು ಸಮಗ್ರ ಸಾಹಿತ್ಯ ಇ-ಪುಸ್ತಕ ರೂಪದಲ್ಲಿ ಬರುತ್ತಿರುವುದು ಸ್ವಾಗತಾರ್ಹ. ಪುಸ್ತಕ, ಇ-ಪುಸ್ತಕ ಎರಡನ್ನೂ ಒಟ್ಟಿಗೆ ಲೋಕಾರ್ಪಣೆ ಮಾಡಿರುವುದು ವೈಶಿಷ್ಟ್ಯ. ತಂತ್ರಜ್ಞಾನದ ಯುಗವಿದು. ತಂತ್ರಜ್ಞಾನದ ಜತೆಗೆ ನಾವು ಸಾಗಬೇಕು. ಈ ನಿಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯ ಹೆಜ್ಜೆ ಇಟ್ಟಿರುವದುಉ ಶ್ಲಾಘನೀಯ.-ಡಾ.ಚಿದಾನಂದಗೌಡ, ವಿಶ್ರಾಂತ ಕುಲಪತಿ, ಕುವೆಂಪು ವಿಶ್ವವಿದ್ಯಾಲಯ.
ರಿಯಾಯಿತಿ ದರದ ಮಾರಾಟ: ಹತ್ತು ಸಾವಿರ ರೂ. ಮುಖಬೆಲೆಯ ಈ ಪುಸ್ತಕಗಳ ಸರಣಿ ಸೇರಿದಂತೆ ಹಂಪಿ ಪ್ರಸಾರಾಂಗ ಪ್ರಕಟಿಸಿರುವ ಎಲ್ಲ ಪ್ರಕಟಣೆಗಳನ್ನು ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ತಿಂಗಳಲ್ಲಿ ಶೇ.50 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಇದರ ಜತೆಗೆ, ಇ-ಪುಸ್ತಕಗಳನ್ನು ಗೂಗಲ್ ಪ್ಲೇ ಬುಕ್ಸ್ ಗೆ ಅಪ್ ಲೋಡ್ ಮಾಡಲಾಗಿದ್ದು 10 ದಿನಗಳ ನಂತರ ಓದುಗರಿಗೆ ಸಿಗುತ್ತವೆ. ಇ-ಪುಸ್ತಕದಲ್ಲಿ ಶೇ.20 ರಷ್ಟು ಪಠ್ಯವನ್ನು ಉಚಿತವಾಗಿ ಓದಬಹುದು. ಟ್ಯಾಬ್, ಲ್ಯಾಪ್ ಟಾಪ್, ಡೆಸ್ಕ್ ಟಾಪ್, ಆಂಡ್ರಾಯ್ಡ್ ಮೊಬೈಲ್ ಗಳ ಮೂಲಕ ಓದಬಹುದು.
ಇ-ಪುಸ್ತಕಗಳ ದರ:ಕುವೆಂಪು ಸಮಗ್ರ ಕಾವ್ಯ-1 (ಕವಿತೆ, ಸಾನೆಟ್‌ಗಳು)-349 ರೂ., ಕುವೆಂಪು ಸಮಗ್ರ ಕಾವ್ಯ-2 (ಕವಿತೆ, ಮಕ್ಕಳ ಕವಿತೆಗಳು)- 349 ರೂ., ಕುವೆಂಪು ಸಮಗ್ರ ಕಾವ್ಯ-3 (ಶ್ರೀ ರಾಮಾಯಣ ದರ್ಶನಂ, ಚಿತ್ರಾಂಗದಾ)-299 ರೂ., ಕುವೆಂಪು ಸಮಗ್ರ ನಾಟಕ-299 ರೂ., ಕುವೆಂಪು ಸಮಗ್ರ ಗದ್ಯ-1 (ವಿಮರ್ಶೆ, ದಾರ್ಶನಿಕ ಕಾವ್ಯ ಮೀಮಾಂಸೆ)- 349 ರೂ., ಕುವೆಂಪು ಸಮಗ್ರ ಗದ್ಯ-2 (ವೈಚಾರಿಕ ಸಾಹಿತ್ಯ, ಸಂದರ್ಶನ) 349 ರೂ., ಕುವೆಂಪು ಸಮಗ್ರ ಗದ್ಯ-3(ನೆನಪಿನ ದೋಣಿಯಲ್ಲಿ- ಆತ್ಮಕಥೆ) 349 ರೂ., ಕುವೆಂಪು ಸಮಗ್ರ ಗದ್ಯ-4 (ಮಲೆಗಳಲ್ಲಿ ಮದುಮಗಳು- ಕಾದಂಬರಿ)- 299 ರೂ., ಕುವೆಂಪು ಸಮಗ್ರ ಗದ್ಯ-5 (ಕಾನೂರು ಹೆಗ್ಗಡತಿ-ಕಾದಂಬರಿ)- 299 ರೂ., ಕುವೆಂಪು ಸಮಗ್ರ ಗದ್ಯ-6 (ಸಣ್ಣ ಕತೆಗಳು, ಮಲೆನಾಡಿನ ಚಿತ್ರಗಳು, ಜನಪ್ರಿಯ ವಾಲ್ಮೀಕಿ ರಾಮಾಯಣ- 299 ರೂ., ಕುವೆಂಪು ಸಮಗ್ರ ಗದ್ಯ-7 (ಶ್ರೀರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಗುರುವಿನೊಡನೆ ದೇವರೆಡೆಗೆ) -299 ರೂ., ಕುವೆಂಪು ಸಮಗ್ರ ಗದ್ಯ-8 (ಪತ್ರ, ನೆನಪು, ಮುನ್ನುಡಿ) 299 ರೂ.
Web Exclusive | ನೂರಾರು ಕನ್ನಡ ಸಂಘಗಳಿಂದ ‘ವಿಶ್ವ ಕನ್ನಡ ಸಾಂಸ್ಕೃತಿಕ ಹಬ್ಬ’
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − 17 =
Remember me
