ಬೆಳಗಾವಿ:ವಾಯವ್ಯ ‌ಪದವೀಧರ ಮತ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಣುಮಂತ ನಿರಾಣಿ ಎರಡನೇ ಬಾರಿ ಗೆಲುವು ಸಾಧಿಸಿದರು. ಬೆಳಗಾವಿ ನಗರದ ಜ್ಯೋತಿ ಪಿಯು ಕಾಲೇಜಿನಲ್ಲಿ ಬೆಳಗ್ಗೆ 8ರಿಂದ ಮತ ಎಣಿಕೆ ಕಾರ್ಯ ಆರಂಭದಿಂದ ಮುನ್ನಡೆ ಕಾಯ್ದುಕೊಂಡು ಬಂದಿರುವ ಅಭ್ಯರ್ಥಿ ಹಣಮಂತ ನಿರಾಣಿ, 34 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಪ್ರತಿ ಸ್ಪರ್ಧಿ ಕಾಂಗ್ರೆಸ್​ನ ಸುನೀಲ ಸಂಕ್ 9008 ಮತಗಳನ್ನು ಪಡೆದು ಸೋಲು ಅನುಭವಿಸಿದರು. ಪದವೀಧರ ‌ಮತ ಕ್ಷೇತ್ರದಲ್ಲಿ ಒಟ್ಟು 99,150 ಮತಗಳ ಪೈಕಿ 65914‌ ಮತಗಳು ಚಲಾವಣೆ ಆಗಿವೆ.
8 ಸಾವಿರಕ್ಕೂ ಅಧಿಕ ಮತಗಳು ತಿರಸ್ಕೃತ:ವಾಯವ್ಯ ಪದವೀಧರ ‌ಮತ ಕ್ಷೇತ್ರದ ಚುನಾವಣೆ ಯಲ್ಲಿ ಮತದಾರರು ಮತ ಪತ್ರದಲ್ಲೊ ಅಂಕಿ ಹಾಕುವ ಬದಲು ರೈಟ್ ಗುರುತು ಹಾಕಿದ್ದಾರೆ. ಕೆಲವರು ಮತ ಪತ್ರದಲ್ಲಿ ಉದ್ದ ಗೆರೆ ಹಾಕಿದ್ದಾರೆ. ‌ಇದರಿಂದಾಗಿ 8237 ಮತಗಳು ತಿರಸ್ಕೃತಗೊಂಡಿವೆ. ಈ ಎಲ್ಲ ಮತಗಳು ಬಿಜೆಪಿ ಅಭ್ಯರ್ಥಿಗೆ ಬಿದ್ದಿರುವುದು ವಿಶೇಷ ಎನ್ನಲಾಗಿದೆ.
ಈ ಬಾರಿ ಚುನಾವಣೆಯಲ್ಲಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ. ಬಿ.ಎಸ್. ಯಡಿಯೂರಪ್ಪ, ಸಿಎಂ ಬೊಮ್ಮಾಯಿ, ಪಕ್ಷದ ಕಾರ್ಯಕರ್ತರು, ‌ಮುಖಂಡರಿಗೆ ಅಭಿನಂದನೆಗಳು.
|ಹಣಮಂತ ನಿರಾಣಿವಿಜೇತ ಬಿಜೆಪಿ ಅಭ್ಯರ್ಥಿ
ಅಭ್ಯರ್ಥಿಗಳು: ಪಡೆದ ಮತ
ಹಣಮಂತ ನಿರಾಣಿ: 44815ಸುನೀಲ ಸಂಕ: 10122ಜಿ.ಸಿ.‌ಪಾಟೀಲ: 194ವೈ. ಎಂ.‌ಕಲಕುಟ್ರಿ: 221ಎ.ಎಸ್. ಪೂಜಾರ: 370ಜಿ.ಎಂ. ಮುಗದುಮ್ಮ: 68ಎಸ್. ದೀಪಿಕಾ: 453ಎಂ.‌ಎನ್. ಭಜಂತ್ರಿ: 167ಬಿ.ಬಿ. ಭಾಗಿ: 168ಆರ್.‌ಆರ್. ಪಾಟೀಲ: 172ಸುಭಾಸ ಆರ್. ಕೊಟೆಕಲ್: 166
ಗೆಲುವಿನ ಹುಮ್ಮಸ್ಸು ಉಕ್ಕೇರಿ, ಪೊಲೀಸ್ ಅಧಿಕಾರಿಗೇ ಧಮ್ಕಿ ಹಾಕಿದ ಹುಕ್ಕೇರಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
