ಬೆಂಗಳೂರು:ನಮ್ಮ ಹತ್ರ ದೀಪ ಇದೆ ಅಂತಾ ಮುತ್ತು ಕೊಡೋದಕ್ಕೆ ಆಗುತ್ತಾ? ಮುತ್ತು ಕೊಟ್ಟರೆ ನಮ್ಮ ತುಟಿಯೇ ಸುಡುತ್ತೆ ಎಂದು ಸರ್ಕಾರದ ಬಗ್ಗೆಯೇ ಬಿಜೆಪಿ ಶಾಸಕರೊಬ್ಬರು ವ್ಯಂಗ್ಯವಾಡಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಬುಧವಾರ ನೇಕಾರರ ಸಮಸ್ಯೆ ವಿಷಯ ಪ್ರಸ್ತಾಪಿಸಿದ ಹುನಗುಂದ ಬಿಜೆಪಿ ಶಾಸಕ ದೊಡ್ಡನಗೌಡ, ದೀಪದ ಕೆಳಗೆ ಇದ್ದೀವಿ. ನಮ್ಮದೇ ಸರ್ಕಾರ ಇದೆ, ದೀಪ ನಮ್ಮದೇ.. ನಮ್ಮ ಹತ್ರ ದೀಪ ಇದೆ ಅಂತಾ ಮುತ್ತು ಕೊಡೋದಕ್ಕೆ ಆಗುತ್ತಾ? ಮುತ್ತು ಕೊಟ್ಟರೆ ನಮ್ಮ ತುಟಿ ಸುಡುತ್ತೆ ಎಂದು ಛೇಡಿಸಿದರು.ಇದನ್ನೂ ಓದಿರಿಸಿಡಿ ಕೇಸ್​: ಹೆಗಲು ಮುಟ್ಟಿ ನೋಡಿಕೊಂಡದ್ದಕ್ಕೂ ಈ ಫೋಟೋಗೂ ಸಂಬಂಧವಿದೆಯಾ?
ನೇಕಾರರು ಸಿದ್ಧಪಡಿಸಿದ ಸೀರೆಗಳು ಖರೀದಿ ಆಗ್ತಿಲ್ಲ, ಅಧಿಕಾರಿಗಳು ಏನೂ ಮಾಡಲ್ಲ. ನೇಕಾರರ ಸಮಸ್ಯೆಗೆ ಸರ್ಕಾರ ಸ್ಪಂದನೆ ಮಾಡಬೇಕಿತ್ತು. ಆದರೆ, ಆ ಕೆಲಸ ಆಗಿಲ್ಲ. ನಾವು ಆಡಳಿತ ಪಕ್ಷದ ಶಾಸಕರಿರಬಹುದು. ಹಾಗೆಂದು ಸುಮ್ಮನಿರಲು ಸಾಧ್ಯವೇ? ವ್ಯವಸ್ಥೆ ಸರಿಯಾಗಬೇಕು ಎಂದು ಶಾಸಕ ದೊಡ್ಡನಗೌಡ ಆಗ್ರಹಿಸಿದರು.
ಈ ವೇಳೆ ಆಡಳಿತ ಪಕ್ಷದವರೇ ವಿಪಕ್ಷ ಶಾಸಕರ ರೀತಿ ಚರ್ಚೆ ಮಾಡ್ತೀರಾ ಎಂದು ಉಪಸಭಾಧ್ಯಕ್ಷ ಆನಂದ್ ಮಾಮನಿ ಹೇಳಿದರು. ಇದಕ್ಕೆ ಉತ್ತರಿಸಿದ ದೊಡ್ಡನಗೌಡ, ಸರ್ಕಾರದಲ್ಲೂ ತಪ್ಪಿದ್ರೆ ಹೇಳಬೇಕು. ನಮ್ಮನೆ ದೀಪ ಎಂದು ದೀಪಕ್ಕೆ ಮುತ್ತುಕೊಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಸಿಡಿ ಕೇಸ್​: ಹೆಗಲು ಮುಟ್ಟಿ ನೋಡಿಕೊಂಡದ್ದಕ್ಕೂ ಈ ಫೋಟೋಗೂ ಸಂಬಂಧವಿದೆಯಾ?

ಕದ್ದ ಕಾರಿನಲ್ಲಿದ್ದ ವಸ್ತು ನೋಡಿ ಬೆಚ್ಚಿದ ಖದೀಮರು, ಕಾರಿನಲ್ಲೇ ಚಿನ್ನಾಭರಣ ಬಿಟ್ಟು ಎಸ್ಕೇಪ್​!

ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

ಲಕ್ಷ್ಮೀ ಹೆಬ್ಬಾಳ್ಕರ್​ಗೆ ಯುವಕನಿಂದ ಹಿಗ್ಗಾಮುಗ್ಗಾ ತರಾಟೆ! ಶಾಸಕಿಯಿಂದ ಮೊಂಡು ಸಮರ್ಥನೆ

ಇದೇ ಗ್ಯಾಂಗ್​ ಕೈಯಲ್ಲಿದೆ ಕಾಂಗ್ರೆಸ್​ ನಾಯಕರ ಸಿಡಿ! ಲಕ್ಷ ಲಕ್ಷ ಕೊಟ್ಟು ಬಚಾವಾದ ಆ ನಾಯಕರು ಯಾರು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 1 =
Remember me
