| ಚಿತ್ರಮಿತ್ರ
ಚಿಕ್ಕವನಿದ್ದಾಗ ಒಂದು ಕನ್ನಡ ಸಿನಿಮಾ ನೋಡಿದ್ದೆ. ಅದರಲ್ಲಿ ತಾಯಿಯಿಲ್ಲದ ಪುಟ್ಟ ಪುಟ್ಟ ಮಕ್ಕಳು ಶಾಲೆಗೆ ಹೋಗುವ ಹಾದಿಯಲ್ಲಿ ಇರುವ ದೊಡ್ಡ ಹಸಿರು ಮೈಬಣ್ಣದ ಆಂಜನೇಯನ ವಿಗ್ರಹದ ಹತ್ತಿರ ತಮ್ಮ ಮಲತಾಯಿ ಕೊಡುವ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದರು. ಆತನು ನಿಜರೂಪದಲ್ಲಿ ಬಂದು ಆ ಮಕ್ಕಳ ಕಷ್ಟಗಳನ್ನು ಪರಿಹರಿಸಿದ್ದು ನನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿತ್ತು. ಅಂತೆಯೇ ಆಂಜನೇಯ ಸದಾ ನನ್ನ ಗೆಳೆಯನೂ ಆದ. ಅಲ್ಲಿಂದ ಹಿಡಿದು ಇವತ್ತಿನವರೆಗೂ ಆತ ನನ್ನ ಜೊತೆಗಿದ್ದು ಶಕ್ತಿಯಾಗಿ ಮುನ್ನಡೆಸಿದ್ದಾನೆ, ಮುನ್ನಡೆಸುತ್ತಲೇ ಇದ್ದಾನೆ.
6ನೇ ವಯಸ್ಸಿನಲ್ಲಿ ಇದ್ದಾಗ 4 ದಿನಗಳಲ್ಲಿ 1800 ಡ್ರಾಯಿಂಗ್​ಗಳನ್ನು 3 ಪುಸ್ತಕದಲ್ಲಿ ಬರೆದು ಕ್ಲಾಸ್​ಟೀಚರ್​ಗೆ ಕೊಟ್ಟಿದ್ದೆ. ಅದರಲ್ಲಿ ಹೆಚ್ಚಿನ ಸ್ಕೆಚ್ಚುಗಳು ಆಂಜನೇಯನದ್ದೇ ಆಗಿದ್ದವು. ಹೀಗೆಯೇ ಸಹಜವಾಗಿ ಆಂಜನೇಯ ಸದಾ ನನ್ನ ಜೊತೆಗಾರ ಎಂಬುದು ದೃಢವಾಗಿ ಬಿಟ್ಟಿತ್ತು. ಅಲ್ಲದೆ ಹಲವು ಬಾರಿ ನನ್ನ-ಆಂಜನೇಯನ ಸಂಬಂಧ ವಿಸ್ಮಯಕಾರಿಯಾಗಿಯೂ ಕಾಣುತ್ತಿತ್ತು. ಹೋಟೆಲ್ ಉದ್ಯಮಿ ಯಾದ ತಂದೆ ಅದೆಷ್ಟೋ ಬಾರಿ ಜ್ಯೋತಿಷಿಗಳ ಹತ್ತಿರ ನನ್ನ ಜಾತಕವನ್ನು ತೋರಿಸಿದಾಗಲೂ ಅವರೆಲ್ಲರೂ ಮೊದಲು ಹೇಳಿದ್ದು ಒಂದೇ ಮಾತು: ‘ನಿಮ್ಮ ಮಗನ ಬೆನ್ನಹಿಂದೆ ಆಂಜನೇಯನಿದ್ದಾನೆ. ಚಿಂತೆ ಬೇಡ’ ಅಂತ. ಇದು ನನಗೂ ಧೈರ್ಯ, ನೆಮ್ಮದಿ ಕೊಟ್ಟ ವಿಷಯ. ಇನ್ನು ಆ ಆಂಜನೇಯನ ಬಗ್ಗೆ ಏನು ಅಂತ ಹೇಳಲಿ, ಅಂದು ಲಂಕೆಗೆ ತೆರಳಿ ಅಲ್ಲಿಯ ಅನ್ಯಾಯ, ಅನಾಚಾರವನ್ನು ಕಂಡು ಸಣ್ಣ ಪ್ರಮಾಣದಲ್ಲಿ ಲಂಕೆಯನ್ನೇ ಧ್ವಂಸ ಮಾಡಿದವ ಇಂದಿಗೂ ನಮ್ಮನ್ನು, ನಮ್ಮೆಲ್ಲರ ಒಳಗಿದ್ದು ಗಮನಿಸುತ್ತಿದ್ದಾನೆ. ಪ್ರತಿಯೋರ್ವನ ಒಳಗಿರುವ ಪ್ರಾಣಚೈತನ್ಯ ಅವನು. ನಾವು ಸರಿದಾರಿಯಲ್ಲಿದ್ದರೆ ಗಟ್ಟಿಯಾಗಿ ನಮ್ಮೊಳಗಿದ್ದು ಬಲ ನೀಡುತ್ತಾನೆ. ಅನ್ಯಾಯದ ಹಾದಿಯಲ್ಲಿ ನಡೆಯುತ್ತಿರುವವರ ಒಳಗಿದ್ದೂ ಮೌನ ವಾಗಿ ಅವರು ತಾವೇತಾವಾಗಿ ಧ್ವಂಸವಾಗುವುದನ್ನು ಸುಮ್ಮನೆ ಕೂತು ನೋಡುತ್ತಾನೆ. ಚಿರಂಜೀವಿಯಾದ ಆಂಜನೇಯ ಅಂದಿನ ರಾಮಾಯಣದ ಕಾಲವನ್ನೂ ಜೊತೆಜೊತೆಗೆ ಇಂದಿನ ನಮ್ಮ ಕಾಲವನ್ನೂ ಗಮನಿಸುತ್ತಲೇ ಬಂದಿದ್ದಾನೆ. ಒಳ್ಳೆಯ ಕಾರ್ಯವನ್ನು ಮಾಡುವವರೊಳಗಿನ ಅದ್ಭುತ ಶಕ್ತಿಯಾಗಿ ಮತ್ತು ಲೋಕಕ್ಕೆ ಕೆಟ್ಟದ್ದನ್ನೇ ಮಾಡುವ ಕುತ್ಸಿತ ಮನಸ್ಸಿನವರನ್ನು ಅವರು ಮಾಡುವ ದುರ್ಬುದ್ಧಿಯ ಲಗಾಮನ್ನೇ ಅವರಿಗೆ ತೊಡಿಸುತ್ತ ಲೋಕವನ್ನು ಸಮತೋಲನದಲ್ಲಿಡುತ್ತ ಕಾಯುತ್ತಿದ್ದಾನೆ.
ಅಂದಿನ ಕಾಲದಲ್ಲಿ ಒಬ್ಬನೇ ರಾವಣನಿದ್ದ. ಇವತ್ತು ಲೆಕ್ಕವಿಲ್ಲದಷ್ಟಿದ್ದಾರೆ. ಭೂಮಿತಾಯಿಯ ಒಡಲನ್ನೇ ಬಗೆವ ರಾವಣರು, ಮರಕಡಿದು ಪ್ರಕೃತಿಯನ್ನೇ ನಾಶಗೈಯುವ ರಾವಣರು, ಮೂಕಪ್ರಾಣಿಗಳನ್ನು ಹಿಂಸಿಸುವ ರಾವಣರು, ಹೀಗೆ ಲೆಕ್ಕವಿಲ್ಲದಷ್ಟು ದುರಾಚಾರವೆಸಗುವ ರಾವಣರು… ಇವರೆಲ್ಲರ ನಾಶಕ್ಕಾಗಿ ಯಾರು ರಾಮನಾಗಿ ಬರಬೇಕು ಎಂಬುದನ್ನು ಪ್ರೇರೇಪಿಸುವವನೂ ನಮ್ಮ ಆಂಜನೇಯನೇ. ಪ್ರಕೃತಿ ಪ್ರತಿಯೊಬ್ಬರಿಗೂ ಸಾಧಿಸಲು ಒಂದೊಂದು ಕೆಲಸವನ್ನು ಕೊಟ್ಟಿದೆ. ತುಂಬ ಪ್ರಾಮಾಣಿಕತೆಯಿಂದ ಅದನ್ನು ಮಾಡುವುದೇ ನಾವು ಆ ಚಿರಂಜೀವಿಗೆ ಸಲ್ಲಿಸುವ ಸೇವೆ. ಅಷ್ಟನ್ನು ಮಾಡಿದೆವಾದರೆ ಆ ಆಂಜನೇಯ ಮೆಲ್ಲನೆ ತನ್ನ ಬಾಲದಿಂದ ರುಚಿಯಾದ ಹಣ್ಣನ್ನು ನಮ್ಮ ಮಡಿಲಿಗೇ ಎಸೆಯುತ್ತಾನೆ. ಅದಷ್ಟೇ ಇನ್ನಿಲ್ಲದ ಸಾರ್ಥಕತೆ!
(ಲೇಖಕರು ಖ್ಯಾತ ಚಿತ್ರ ಕಲಾವಿದ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 4 =
Remember me
