ಬೆಂಗಳೂರು:ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ದಿವಂಗತ ಐಎಎಸ್​ ಅಧಿಕಾರಿ ಡಿ.ಕೆ.ರವಿ ಪತ್ನಿ ಕುಸುಮಾರನ್ನು ಕಣಕ್ಕಿಳಿಸಲು ಕಾಂಗ್ರೆಸ್​ ಪ್ರಯತ್ನ ಮಾಡುತ್ತಿರುವ ಬೆನ್ನಲ್ಲೇ, ಡಿ.ಕೆ.ರವಿ ತಾಯಿ ಗೌರಮ್ಮ ಗರಂ ಆಗಿದ್ದಾರೆ.
ಕುಸುಮಾ ಡಿ.ಕೆ. ರವಿ ಹೆಂಡತಿ ಅನ್ನೋ‌ ಯೋಗ್ಯತೆ ಕಳೆದುಕೊಂಡಿದ್ದಾಳೆ. ನನ್ನ ಮಗನನ್ನು ಅವತ್ತು ಮಣ್ಣಲ್ಲಿ ಬಿಸಾಕಿ ಹೋದವಳು ಇಂದಿಗೂ ಬಂದಿಲ್ಲ. ಮಗನ ಜತೆ, ಅವಳೂ ಹೋಗಿಬಿಟ್ಟಳು ಎಂದು ತಿಳಿದುಕೊಂಡಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಚುನಾವಣೆಗೆ ನನ್ನ ಮಗನ ಫೋಟೋ, ಹೆಸರು ಬಳಸಿದರೆ ಬೆಂಕಿ ಹಚ್ಚಿಸ್ತೀನಿ ಎಂದು ಖಡಕ್​ ಎಚ್ಚರಿಕೆಯನ್ನೂ ನೀಡಿದ್ದಾರೆ.
ಅದಕ್ಕೆ ಪ್ರತಿಯಾಗಿ ಕುಸುಮಾ ತಂದೆ ಹನುಮಂತರಾಯಪ್ಪ ಇಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಡಿ.ಕೆ.ರವಿ ನನ್ನ ಮಗಳ ಗಂಡ. ನನ್ನ ಮಗಳು 25 ವರ್ಷಕ್ಕೇ ಗಂಡನನ್ನು ಕಳೆದುಕೊಂಡವಳು. ಗೌರಮ್ಮನವರಿಗೆ ಇನ್ನೊಬ್ಬ ಮಗ, ಮಗಳು, ಮೊಮ್ಮಕ್ಕಳು ಇದ್ದಾರೆ. ನನ್ನ ಮಗಳಿಗೆ ಈಗ ಯಾರಿದ್ದಾರೆ ಎಂದು ಪ್ರಶ್ನಿಸಿದ್ದಾರೆ.ಗೌರಮ್ಮ ಬ್ಲಾಕ್ ಮೇಲ್ ಮಾಡುವ ಕೆಲಸ ಬಿಡಲಿ. ನನ್ನ ಅಳಿಯ ತುಂಬ ಒಳ್ಳೆಯವನು. ಆತನನ್ನು ಬೀದಿಗೆ ತರಬಾರದು ಎಂದು ನಾನಂದುಕೊಂಡಿದ್ದೆ. ಆದರೆ ಇವರೇ ನಮ್ಮನ್ನು ಬೀದಿಗೆ ತರುತ್ತಿದ್ದಾರೆ. ಸಿಬಿಐ ರಿಪೋರ್ಟ್ ನೋಡಿ ಗೌರಮ್ಮ ಮಾತನಾಡಲಿ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ನನ್ನ ಮಗನ ಫೋಟೋ-ಹೆಸರು ಬಳಸಿದ್ರೆ ಬೆಂಕಿ ಹಚ್ಚಿಸ್ತೀನಿ: ಸೊಸೆ ವಿರುದ್ಧ ಸಿಡಿದೆದ್ದ ಡಿ.ಕೆ. ರವಿ ತಾಯಿ
ಇದೆಲ್ಲದರ ಹಿಂದೆ ಮುನಿರತ್ನ ಕೈವಾಡ ಇದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ನಾನು ಅಭ್ಯರ್ಥಿ ಆಗುತ್ತೇನೆ ಎಂದು ಸ್ಕ್ರಿಪ್ಟ್​ ರೆಡಿ ಮಾಡಿದ್ದ ಎಂದು ಆರೋಪಿಸಿದ್ದಾರೆ. ನಾನು ಟಿಕೆಟ್​ ಆಕಾಂಕ್ಷಿಯಲ್ಲ. ನನ್ನ ಮಗಳಿಗೆ ಕೊಟ್ಟರೆ ಆಕೆಯ ಪರವಾಗಿ ಕೆಲಸ ಮಾಡುತ್ತೇನೆ. ಒಬ್ಬ ಗುರುವಾಗಿ ನಿಂತು ಕೆಲಸ ಮಾಡ್ತೀನಿ ಎಂದು ಹನುಮಂತರಾಯಪ್ಪ ತಿಳಿಸಿದ್ದಾರೆ.
ನಮ್ಮ ಮಗಳ ಭವಿಷ್ಯ ಹಾಳಾಯ್ತು. ಆದರೆ ಮಾನಕ್ಕೆ ಹೆದರಿ ಸುಮ್ಮನಿದ್ದೆವು. ಸೋಮವಾರ ಅಥವಾ ಮಂಗಳವಾರ ಸುದ್ದಿಗೊಷ್ಠಿ ನಡೆಸಿ, ಸಿಬಿಐ ವರದಿಯನ್ನು ಜನರ ಎದುರು ಇಡುತ್ತೇನೆ. ಗೌರಮ್ಮನವರು ಆಡುತ್ತಿರುವ ಮಾತಿನ ಹಿಂದೆ ಮುನಿರತ್ನ ಇದ್ದಾರೆ. ನಾವಿನ್ನು ಸುಮ್ಮನೆ ಕೂರೋದಿಲ್ಲ ಎಂದು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)
ಗೌರಮ್ಮ ವಾಕ್ಸಮರಕ್ಕೆ ಬೆಚ್ಚಿದ ಕಾಂಗ್ರೆಸ್​: ಡಿ.ಕೆ. ರವಿ ಪತ್ನಿ ಕುಸುಮಾ ಆಸೆಗೆ ತಣ್ಣೀರು ಸಾಧ್ಯತೆ!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
