ಬೆಂಗಳೂರು:ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರಿಗೆ ಹುಟ್ಟುಹಬ್ಬದ ಸಂದರ್ಭದಲ್ಲಿ ವಿವಿಧ ಮಠಾಧೀಶರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿ ಅನೇಕ ಗಣ್ಯರು ಶುಭ ಹಾರೈಸಿದ್ದಾರೆ.
ಕಾಶೀ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಜಗದ್ಗುರುಗಳು ಕರೆ ಮಾಡಿ ಶುಭಾಶೀರ್ವಾದ ಮಾಡಿದ್ದಾರೆ. ಶ್ರೀರಾಮ ಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಹಾರೈಕೆಯ ಆಡಿಯೋ ಸಂದೇಶ ಕಳಿಸಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರ ಗಳ ಸಚಿವ ಪ್ರಲ್ಹಾದ ಜೋಶಿ, ‘ಸಾಧನೆಯ ಮೆಟ್ಟಿಲುಗಳನ್ನ ಒಂದೊಂದಾಗಿ ಏರಿ, ಈಗ ಶಿಖರವನ್ನೇ ತಲುಪಿರುವ, ಮಾಜಿ ಸಂಸದರು, ನನ್ನ ಮಾರ್ಗದರ್ಶಕರು, ಪಕ್ಷದ ಹಿರಿಯ ನಾಯಕರು, ದೇಶದ ಅತ್ಯಂತ ದೊಡ್ದ ಟ್ರಾನ್ಸ್​ಪೋರ್ಟೆಷನ್ ಸಂಸ್ಥೆ ವಿಆರ್​ಎಲ್ (ಲಿ.) ಸಂಸ್ಥೆಯ ಸಂಸ್ಥಾಪಕರಾದ ವಿಜಯ ಸಂಕೇಶ್ವರ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು’ ಎಂದು ಟ್ವೀಟ್ ಮಾಡಿದ್ದಾರೆ.
ಸುದೀರ್ಘವಾಗಿ ಈ ನಾಡಿನ ಜನಸೇವೆ ಮಾಡಲು ದೇವರು ನಿಮಗೆ ಹೆಚ್ಚಿನ ಆಯುರಾರೋಗ್ಯ ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುವುದಾಗಿ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಹಾರೈಕೆ ಸಂದೇಶ ಕಳಿಸಿದ್ದಾರೆ. ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಆರೋಗ್ಯ ಸಚಿವ ಬಿ.ಶ್ರೀರಾಮುಲು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಬಿ.ವೈ.ರಾಘವೇಂದ್ರ, ಪಿ.ಸಿ.ಮೋಹನ್ ಸೇರಿ ಹಲವು ಜನಪ್ರತಿನಿಧಿಗಳು,ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಎಂ.ಆರ್.ಎನ್. ಗ್ರೂಪ್ ಎಂಡಿ ವಿಜಯ ಎಂ.ನಿರಾಣಿ ಶುಭಹಾರೈಸಿದ್ದಾರೆ.
ರಾಘವೇಶ್ವರ ಶ್ರೀಗಳ ಅನುಗ್ರಹ ಸಂದೇಶ:ಸಂಕೇಶ್ವರರೇ, ನಾವು ಪೂಜೆ ಮಾಡುವಂತಹ ದೇವರುಗಳಲ್ಲಿ, ನಮ್ಮ ಗುರು ಪರಂಪರೆಯಲ್ಲಿ ಮನಸಾರೆ ಪ್ರಾರ್ಥನೆ ಮಾಡುತ್ತೇವೆ, ನಿಮಗೆ ದೀರ್ಘಾಯಸ್ಸು, ಆರೋಗ್ಯ ಮತ್ತು ಸೌಭಾಗ್ಯ ದೊರೆಯಲಿ. ಸಮಾಜವನ್ನು ಒಳ್ಳೆಯದು ಮಾಡುವ ಮನಸ್ಥಿತಿಯವರು ನೀವು. ಸಮಾಜಕ್ಕೆ ತುಂಬಾ ಒಳ್ಳೆಯದು ಮಾಡಿದ್ದೀರಿ, ಶಿಸ್ತಲ್ಲಿ ಮಾಡಿದ್ದೀರಿ. ಅದೇ ದಾರಿಯಲ್ಲಿ ಸಮಾಜಕ್ಕೆ ಇನ್ನಷ್ಟು ಒಳ್ಳೆಯದು ಮಾಡುವಂತಹ ಯೋಗ, ಸೌಭಾಗ್ಯವನ್ನು ದೇವರು ಇನ್ನಷ್ಟು, ಮತ್ತಷ್ಟು ನಿಮಗೆ ಕೊಡಲಿ ಎಂದು ಆಶಿಸುತ್ತೇವೆ. ಸುಖವಾಗಿ ಬಾಳಿ. ನೀವು, ನಿಮ್ಮ ಕುಟುಂಬ, ನಿಮ್ಮ ಮುಂದಿನ ಪೀಳಿಗೆ, ನಿಮ್ಮ ಇಡೀ ಬಳಗ ಎಲ್ಲಕ್ಕೂ ಶ್ರೀರಾಮಚಂದ್ರಾಪುರ ಮಠದ ಕಡೆಯಿಂದ ಹೃದಯಾಂತರಾಳದಿಂದ ಮಾಡುವ ಆಶೀರ್ವಾದಗಳು. ಒಳಿತಾಗಲಿ.
ನಾಡಿನ ಹೆಮ್ಮೆಯ ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಶ್ರೀಕ್ಷೇತ್ರದ ಕಾಲಭೈರವೇಶ್ವರನ ಅನುಗ್ರಹ ಸದಾ ನಿಮ್ಮ ಮೇಲಿರಲಿ.
| ಡಾ. ನಿರ್ಮಲಾನಂದನಾಥ ಸ್ವಾಮೀಜಿ,ಆದಿಚುಂಚನಗಿರಿ ಶ್ರೀಕ್ಷೇತ್ರ
ಆತ್ಮೀಯ ವಿಜಯ ಸಂಕೇಶ್ವರ ಅವರೇ, ಜೀವನದಲ್ಲಿ ಹೇಗೆ ಪ್ರಭಾವಶಾಲಿಯಾಗಿ ಬೆಳೆಯಬೇಕೆಂದು ಅರ್ಥ ಮಾಡಿಕೊಳ್ಳಲು ಬಯಸುವ ಎಲ್ಲರಿಗೂ ನೀವು ಅದ್ಭುತ ಆದರ್ಶಪ್ರಾಯರಾಗಿದ್ದೀರಿ. ನಿಮ್ಮ ಸೇವೆಗೆ ಧನ್ಯವಾದಗಳು ಹಾಗೂ ಹುಟ್ಟುಹಬ್ಬದ ಶುಭಾಶಯಗಳು.
| ಎಚ್.ಡಿ.ದೇವೇಗೌಡಮಾಜಿ ಪ್ರಧಾನಿ
ಸಾರಿಗೆ, ಪತ್ರಿಕೋದ್ಯಮ ಸೇರಿ ಅನೇಕ ಯಶಸ್ವಿ ಉದ್ದಿಮೆಗಳನ್ನು ಸ್ಥಾಪಿಸಿ ಉದ್ಯಮಶೀಲತೆಗೆ ಮಾದರಿಯಾಗಿರುವ ವಿಜಯ ಸಂಕೇಶ್ವರ ಅವರಿಗೆ ದೇವರು ಉತ್ತಮ ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
| ಡಾ.ಕೆ.ಸುಧಾಕರ್ವೈದ್ಯಕೀಯ ಶಿಕ್ಷಣ ಸಚಿವ
https://www.vijayavani.net/rich-countries-lock-up-covid-vaccines-supplies/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + seventeen =
Remember me
