ರಾಣೆಬೆನ್ನೂರ:ಏನೂ ಅರಿಯದ ಕಂದಮ್ಮ ಮೇಲೆ ಕಾಮುಕನೊಬ್ಬ ಅಟ್ಟಹಾಸ ಮೆರೆದಿದ್ದು, ತೀವ್ರ ನೋವು-ರಕ್ತಸ್ರಾವದಿಂದ ಮಗು ನರಳಿದೆ.ರಾಣೆಬೆನ್ನೂರಿನ ವಸದವರ ಓಣಿಯ ಮನೆಯೊಂದರಲ್ಲಿ ಪಕ್ಕದ ಮನೆಯ ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಚನ್ನಪ್ಪ ಬಸವರಾಜಪ್ಪ ಎಮ್ಮೇರ (42) ಎಂಬಾತ ಅತ್ಯಾಚಾರ ಎಸಗಿದ್ದಾನೆ.
ಸಂತ್ರಸ್ತ ಮಗುವಿನ ತಂದೆ-ತಾಯಿ ಕೃಷಿ ಕೆಲಸಕ್ಕೆ ಹೋಗುವಾಗ ನಿತ್ಯವೂ ಮಗಳನ್ನು ಚನ್ನಪ್ಪನ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು. ಇದನ್ನೇ ದುರುಪಯೋಗ ಮಾಡಿಕೊಂದ ಚನ್ನಪ್ಪ, ಗುರುವಾರ ಮಗುವನ್ನು ತನ್ನ ರೂಮಿಗೆ ಕರೆದುಕೊಂಡು ಅತ್ಯಾಚಾರ ಎಸಗಿ ಎಸ್ಕೇಪ್​ ಆಗಿದ್ದ.
ಮಧ್ಯಾಹ್ನ ಪಾಲಕರು ಬಂದು ನೋಡಿದಾಗ ಮಗು ಚನ್ನಪ್ಪನ ಕೋಣೆಯಲ್ಲಿ ರಕ್ತಸ್ರಾವದಿಂದ ಒದ್ದಾಡುತ್ತಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ವಿಷಯ ತಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ.
ಲೈಂಗಿಕ ದೌರ್ಜನ್ಯ ಭೀತಿಗೊಳಗಾಗಿದ್ದ ಬಾಲಕಿ ಮನೆಗೆ ಸಚಿವೆ ಜೊಲ್ಲೆ ಭೇಟಿ

ನಿನ್ನ ಹೆಂಡ್ತಿ-ಮಕ್ಕಳನ್ನು ನನಗೇ ಬಿಟ್ಟುಕೊಡು ಎಂದು ಮನೆಗೆ ಬಂದ ಭೂಪ! ಆ ರಾತ್ರಿ ನಡೆದೇ ಹೋಯ್ತು ಘೋರ ಕೃತ್ಯ

ರಾತ್ರೋರಾತ್ರಿ ಮನೆಗೆ ಬಂದ ಪರ ಪುರುಷನೊಂದಿಗೆ ಸೊಸೆ ಲವ್ವಿ-ಡವ್ವಿ! ಎಚ್ಚರಗೊಂಡ ಅತ್ತೆಗೆ ಕಾದಿತ್ತು ಗಂಡಾಂತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + eighteen =
Remember me
