|ಅವಿನಾಶ ಮೂಡಂಬಿಕಾನಬೆಂಗಳೂರು
ಮಹಿಳಾ ಸಬಲೀಕರಣಕ್ಕಾಗಿ ರಾಜ್ಯದಲ್ಲಿ ಸಾಕಷ್ಟು ಕಠಿಣ ಕ್ರಮ ಜಾರಿಗೆ ತಂದರೂ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಬಿದ್ದಿಲ್ಲ! ಉದ್ಯೋಗದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಆಸ್ತಿ ವಿವಾದ, ಪೊಲೀಸ್ ದೌರ್ಜನ್ಯ, ಪ್ರೇಮ ಪ್ರಕರಣ, ಹಣ ವಂಚನೆ, ಲೈಂಗಿಕ ಕಿರುಕುಳ ಹಾಗೂ ತಮ್ಮನ್ನು ರಕ್ಷಣೆ ಮಾಡುವಂತೆ ಕೋರಿ ಸಾಲು-ಸಾಲು ದೂರು ಮಹಿಳಾ ಆಯೋಗಕ್ಕೆ ಬರುತ್ತಲೇ ಇವೆ. 2020 ಮಾರ್ಚ್​ನಿಂದ 2021 ನವೆಂಬರ್​ವರೆಗೆ 4,041 ಪ್ರಕರಣ ಮಹಿಳಾ ಆಯೋಗದ ಮೆಟ್ಟಿಲೇರಿದ್ದು, ಈ ಪೈಕಿ 1,675 ಪ್ರಕರಣ ಮುಕ್ತಾಯಗೊಂಡಿದರೆ, 2,366 ಕೇಸ್ ಇನ್ನೂ ತನಿಖಾ ಹಂತದಲ್ಲೇ ಇವೆ. ಇನ್ನು ದೂರು ನೀಡಲು ಹಿಂಜರಿಕೆ ಹಿನ್ನೆಲೆಯಲ್ಲಿ ಶೇ.80 ಪ್ರಕರಣ ಬೆಳಕಿಗೆ ಬರುವುದೇ ಇಲ್ಲ.
ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿರುವುದಕ್ಕೆ ಸಂಬಂಧಿಸಿದ 161 ಪ್ರಕರಣಗಳಲ್ಲಿ 133 ಕೇಸ್ ಇತ್ಯರ್ಥಗೊಂಡಿಲ್ಲ. ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದ 929 ಕೇಸ್​ಗಳಲ್ಲಿ 288 ಪ್ರಕರಣ ಇತ್ಯರ್ಥಗೊಂಡರೂ, 641 ಪ್ರಕರಣಕ್ಕೆ ಪರಿಹಾರ ಸಿಕ್ಕಿಲ್ಲ. ದೌರ್ಜನ್ಯಕ್ಕೊಳಗಾದ ಮಹಿಳೆಯರು ರಕ್ಷಣೆ ಕೋರಿ ಮಹಿಳಾ ಆಯೋಗದ ಮೊರೆ ಹೋಗಿರುವುದಕ್ಕೆ ಸಂಬಂಧಿಸಿದ 1,163 ಪ್ರಕರಣ ದಾಖಲಾಗಿವೆ. ಈ ಪೈಕಿ 495 ಕೇಸ್ ಇನ್ನೂ ಇತ್ಯರ್ಥವಾಗಬೇಕಿದೆ. ಪೊಲೀಸ್ ದೌರ್ಜನ್ಯ-121, ಆಸ್ತಿ ವಿವಾದ-134, ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದ 67 ಕೇಸ್ ದಾಖಲಾಗಿದೆ.
ಆಯೋಗದ ನೋಟಿಸ್​ಗೆ ಕಿಮ್ಮತ್ತಿಲ್ಲ:ವಿಶಾಖಾ ಗೈಡ್​ಲೈನ್ಸ್ ಪ್ರಕಾರ ಜಾರಿಗೆ ತರಲಾದ ಪಾಶ್(ಪಿಒಎಸ್​ಎಚ್) 2013ರ ಅಧಿನಿಯಮದಡಿ ಯಾವುದೇ ಸರ್ಕಾರಿ, ಖಾಸಗಿ ಸಂಸ್ಥೆಯಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರೆ, ಕಡ್ಡಾಯವಾಗಿ ಆಂತರಿಕ ದೂರು ಸಮಿತಿ, ಸ್ಥಳೀಯ ದೂರು ಸಮಿತಿ ರಚಿಸಿ, ತಿಳಿವಳಿಕೆ ಶಿಬಿರ ನಡೆಸಬೇಕು. ಈ ಎಲ್ಲ ವರದಿಗಳನ್ನೂ ರಾಜ್ಯ ಮಹಿಳಾ ಆಯೋಗಕ್ಕೆ ಸಲ್ಲಿಸಬೇಕು ಎಂಬ ನಿಯಮಗಳಿವೆ. ರಾಜ್ಯದಲ್ಲಿರುವ 5,500 ಸಂಸ್ಥೆಗಳಿಗೆ ಈ ಬಗ್ಗೆ ವರದಿ ನೀಡುವಂತೆ ಮಹಿಳಾ ಆಯೋಗ ನೋಟಿಸ್ ಕೊಟ್ಟಿದೆ. ಈ ಪೈಕಿ ಕೇವಲ 1,114 ಖಾಸಗಿ ಸಂಸ್ಥೆಗಳು ಹಾಗೂ 389 ಸರ್ಕಾರಿ ಕಚೇರಿಗಳು ಆಯೋಗಕ್ಕೆ ವರದಿ ಸಲ್ಲಿಸಿವೆ. ಉಳಿದ ಸಂಸ್ಥೆಗಳು ನೋಟಿಸ್​ಗೆ ಕ್ಯಾರೆ ಎಂದಿಲ್ಲ.
ಉದ್ಯೋಗ ಸ್ಥಳಗಳಲ್ಲಿ ಟಾರ್ಚರ್:ಉದ್ಯೋಗ ಸ್ಥಳವೂ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುದಕ್ಕೆ ಅನೇಕ ಪ್ರಕರಣ ಜ್ವಲಂತ ಸಾಕ್ಷಿಯಾಗಿ ನಮ್ಮ ಮುಂದೆ ನಿಂತಿವೆ. ಮಾನಕ್ಕೆ ಅಂಜಿ, ಕೆಲಸ ಕಳೆದುಕೊಳ್ಳುವ ಭೀತಿಯಿಂದ ಮಹಿಳೆಯರು ದೂರು ನೀಡದ ಹಿನ್ನೆಲೆಯಲ್ಲಿ ಶೇ.80 ಪ್ರಕರಣ ಬೆಳಕಿಗೆ ಬಂದಿಲ್ಲ. ಶಿಕ್ಷಣ, ಪೊಲೀಸ್, ಆರೋಗ್ಯ, ಸಾರಿಗೆ, ಗ್ರಾಮ ಪಂಚಾಯಿತಿ, ಕಂದಾಯ, ಲೋಕೋಪಯೋಗಿ, ತೋಟಗಾರಿಕೆ ಇಲಾಖೆ ಸೇರಿ ಬಹುತೇಕ ಸರ್ಕಾರಿ ಇಲಾಖೆ ಕಚೇರಿಗಳಲ್ಲಿ ಮೇಲಧಿಕಾರಿಗಳಿಂದ ಮಹಿಳಾ ನೌಕರರು ಲೈಂಗಿಕ ಕಿರುಕುಳ ಅನುಭವಿಸುತ್ತಿರುವ ಸಂಗತಿ ಮಹಿಳಾ ಆಯೋಗದ ಗಮನಕ್ಕೆ ಬಂದಿದೆ.
ಲೈಂಗಿಕ ಕಿರುಕುಳಕ್ಕೆ ಶಿಕ್ಷೆ ಏನು?:ಮಹಿಳೆಯನ್ನು ಅನುಚಿತವಾಗಿ ರ್ಸ³ಸುವ ಅಪರಾಧಕ್ಕೆ 1ರಿಂದ 5 ವರ್ಷ ಜೈಲು ಮತ್ತು ದಂಡ ವಿಧಿಸಬಹುದು. ಮಹಿಳೆಯ ಗಮನಕ್ಕೆ ಬಾರದಂತೆ ಆಕೆಯ ಚಿತ್ರ ನೋಡು ವುದು, ತೆಗೆಯುವುದು ಮತ್ತು ಹಂಚುವುದನ್ನು ಮಾಡಿದರೆ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ರ ಅಡಿ 1 ರಿಂದ 7 ವರ್ಷ ಜೈಲು ಮತ್ತು ದಂಡ ವಿಧಿಸಬಹುದು. ಮಹಿಳೆಯ ಗೌರವಕ್ಕೆ ಕುಂದು ತರುವಂತೆ ಪದಗಳ ಬಳಕೆ, ಹಾವಭಾವ ಪ್ರದರ್ಶನಕ್ಕೆ 3 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶಗಳಿವೆ.
ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರು ಮಹಿಳಾ ಆಯೋಗಕ್ಕೆ ದೂರು ನೀಡಬಹುದು. ನಾವು ಈ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
|ಪ್ರಮೀಳಾ ನಾಯ್ಡುಅಧ್ಯಕ್ಷೆ, ಮಹಿಳಾ ಆಯೋಗ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × five =
Remember me
