ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಪವಿತ್ರ ತುಂಗಾನದಿಯ ತೀರದಲ್ಲಿರುವ ದಿವ್ಯಕ್ಷೇತ್ರ ಹರಿಹರಪುರವು ಸ್ಕಾಂದ ಪುರಾಣದ ಸಹ್ಯಾದ್ರಿ-ತುಂಗಭದ್ರಾ ಕಾಂಡದ ಪ್ರಕಾರ ದಕ್ಷಬ್ರಹ್ಮನು ಯಾಗವನ್ನು ಮಾಡಿರುವ ಪುಣ್ಯಭೂಮಿಯಾಗಿದ್ದು, ಪರಮಶಿವನು ಯಜ್ಞಕುಂಡದಿಂದ ಪ್ರಕಟಗೊಂಡ ಪುಣ್ಯಸ್ಥಳವಾಗಿದೆ. ಈ ಪೌರಾಣಿಕ ಘಟನೆಗೆ ಸಾಕ್ಷಿಯಾಗಿ ಇಂದಿಗೂ ಇಲ್ಲಿ ಸ್ವಯಂಭೂ ದಕ್ಷಹರ ಸೋಮೇಶ್ವರ ಸ್ವಾಮಿಯನ್ನು ಆರಾಧಿಸಿಕೊಂಡು ಬರಲಾಗುತ್ತಿದೆ. ಮುಂದೆ ಅಗಸ್ಱ ಮಹರ್ಷಿಗಳು ಈ ದಿವ್ಯಕ್ಷೇತ್ರದಲ್ಲಿ ತಪಸ್ಸನ್ನು ಮಾಡಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ಪ್ರತ್ಯಕ್ಷದರ್ಶನ ಹೊಂದಿದರು. ಅಗಸ್ಱ ಮಹರ್ಷಿಗಳು ಅರ್ಚನೆ ಮಾಡಿರುವ ಶ್ರೀ ಲಕ್ಷಿ ್ಮನರಸಿಂಹಸ್ವಾಮಿ ಸಾಲಿಗ್ರಾಮ ಮತ್ತು ಮೂರ್ತಿಗಳು ಇಂದಿಗೂ ಹರಿಹರಪುರದಲ್ಲಿ ಪೂಜೆಯನ್ನು ಪಡೆಯುತ್ತಿವೆ.
ನಂತರದ ಕಾಲದಲ್ಲಿ ಜಗದ್ಗುರು ಆದಿಶಂಕರ ಭಗವತ್ಪಾದರು ಈ ಪುಣ್ಯಸ್ಥಳದಲ್ಲಿ ಶ್ರೀಚಕ್ರ ಯಂತ್ರೋದ್ಧಾರವನ್ನು ಮಾಡಿ, ಶ್ರೀ ಶಾರದಾ ಪರಮೇಶ್ವರೀ ದೇವಿಯನ್ನು ಪ್ರತಿಷ್ಠಾಪಿಸಿ, ಈ ಧರ್ಮಪೀಠದ ಮೊದಲ ಪೀಠಾಧಿಪತಿಗಳಾದ ಶ್ರೀಕೃಷ್ಣ ಯೋಗೀಂದ್ರರಿಗೆ ಮಂತ್ರದೀಕ್ಷೆಯನ್ನು ಅನುಗ್ರಹಿಸಿ ಇಲ್ಲಿಯ ಪೀಠ ಪರಂಪರೆಯನ್ನು ಆರಂಭಿಸಿದರು. ಮುಂದೆ ಕ್ರಿಸ್ತಶಕ 1392ರಲ್ಲಿ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿಗಳಾದ 2ನೆ ಹರಿಹರರಾಯರು ಅಗ್ರಹಾರವನ್ನು ಕಟ್ಟಿಸಿ, ಶ್ರೀಮಠಕ್ಕೆ ಅನೇಕ ಗ್ರಾಮಗಳನ್ನು ಕಾಣಿಕೆಯಾಗಿ ಸಮರ್ಪಣೆ ಮಾಡಿ, ಈ ದಕ್ಷಾಶ್ರಮಕ್ಕೆ ಹರಿಹರಪುರ ಎಂದು ನಾಮಕರಣ ಮಾಡಿದರು.
ಹೀಗೆ ಸಾವಿರಾರು ವರ್ಷಗಳ ಭವ್ಯವಾದ ಇತಿಹಾಸ ಮತ್ತು ಶ್ರೇಷ್ಠವಾದ ಗುರು ಪರಂಪರೆಯನ್ನು ಹೊಂದಿರುವ ಈ ಧರ್ಮಪೀಠವು ಅನಾದಿಕಾಲದಿಂದಲೂ ಯಾವುದೇ ಭೇದಭಾವವಿಲ್ಲದೆ ಆಯಾಯ ದೇಶ, ಕಾಲ, ಪರಿಸ್ಥಿತಿಗೆ ತಕ್ಕಂತೆ ಜನರಿಗೆ ಸನ್ಮಾರ್ಗವನ್ನು ಬೋಧಿಸುತ್ತ ಹತ್ತು-ಹಲವು ರೀತಿಯಲ್ಲಿ ಸಮಾಜಸೇವೆಯನ್ನು ಮಾಡಿಕೊಂಡು ಬರುತ್ತಿದೆ. ಇಂತಹ ಧರ್ಮಪೀಠದ ಪ್ರಸ್ತುತ ಪೀಠಾಧಿಪತಿಗಳಾಗಿರುವ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ಸಂಕಲ್ಪಿಸಿರುವ ಈ ಧರ್ಮಪೀಠದ ದೇವಾಲಯಗಳ ಪುನರ್ನಿರ್ವಣ ಮಹಾಕಾರ್ಯ ಕಳೆದ ಹನ್ನೊಂದು ವರ್ಷಗಳಿಂದ ಜರುಗುತ್ತಿದ್ದು, ಈ ಮಹತ್ಕಾರ್ಯವು ಸಾಂಗವಾಗಿ ಸಂಪನ್ನಗೊಂಡಿದೆ. ಆದ್ದರಿಂದ ಅಗಸ್ಱ ಮಹರ್ಷಿ ಕರಾರ್ಚಿತ ಶ್ರೀ ಲಕ್ಷಿ ್ಮನರಸಿಂಹಸ್ವಾಮಿ ಮತ್ತು ಜಗದ್ಗುರು ಆದಿಶಂಕರ ಭಗವತ್ಪಾದರು ಪ್ರತಿಷ್ಠಾಪಿಸಿರುವ ಶ್ರೀಶಾರದಾ ಪರಮೇಶ್ವರೀ ದೇವಸ್ಥಾನಗಳ ಪುನರ್ ಪ್ರತಿಷ್ಠಾ, ಮಹಾಕುಂಭಾಭಿಷೇಕವು ಏಪ್ರಿಲ್ 15ರಂದು ನೆರವೇರಲಿದೆ. ಈ ಮಹಾ ಕುಂಭಾಭಿಷೇಕ ಮಹೋತ್ಸವವು ಲೋಕಕಲ್ಯಾಣಕ್ಕಾಗಿ ಧಾರ್ವಿುಕ ವಿಧಿ ವಿಧಾನಗಳೊಂದಿಗೆ ಏಪ್ರಿಲ್ 10ರಿಂದ 24ರವರೆಗೆ ಸಂಭ್ರಮದಿಂದ ನಡೆಯಲಿದೆ. ಮಲೆನಾಡಿನ ಹತ್ತು ತಾಲೂಕಿನ ಎಲ್ಲ ಸಮುದಾಯದ ಸುಮಾರು ಎರಡು ಲಕ್ಷ ಮನೆಗಳಿಗೆ ಅಕ್ಷತೆಯೊಂದಿಗೆ ಆಹ್ವಾನ ಪತ್ರಿಕೆ ಕೊಟ್ಟು ಮಹೋತ್ಸವಕ್ಕೆ ಆಮಂತ್ರಿಸಲಾಗಿದೆ. ಮಹೋತ್ಸದಲ್ಲಿ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ದೇಶದ ಅನೇಕ ಗಣ್ಯರು ಸೇರಿದಂತೆ 10 ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.
ಸಾಮೂಹಿಕ ಶಿವದೀಕ್ಷಾ:ಯಾವುದೇ ಜಾತಿ-ಮತದ ಭೇದವಿಲ್ಲದೆ, ಆಹಾರಪದ್ಧತಿ ನಿರ್ಬಂಧವಿಲ್ಲದೆ ಎಂಟು ವರ್ಷ ಮೇಲ್ಪಟ್ಟ ಎಲ್ಲರಿಗೆ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ಶಿವದೀಕ್ಷೆಯನ್ನು ನೀಡುತ್ತಿದ್ದು, ಇದುವರೆಗೆ 10 ಲಕ್ಷ ಭಕ್ತರುಗಳಿಗೆ ದೀಕ್ಷೆ ನೀಡಿದ್ದಾರೆ. ಗಾಯತ್ರೀ ಉಪಾಸನೆಯ ಶಾಸ್ತ್ರವನ್ನು ಇದುವರೆಗೂ 75 ಸಾವಿರ ಮಾತೆಯರಿಗೆ ಕಲ್ಪಿಸಿಕೊಡಲಾಗುತ್ತಿದೆ. ಇದಲ್ಲದೆ ಶ್ರೀಮಠದಲ್ಲಿ ನಿತ್ಯ ಅನ್ನದಾನ ನಡೆಯುತ್ತಿದೆ. ಹರಿಹರಪುರದಲ್ಲಿ ಆಯುರ್ವೆದ ಆಸ್ಪತ್ರೆ, ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಶಿಕ್ಷಣವನ್ನು ನೀಡಲಾಗುತ್ತಿದೆ.
ವೈಶಿಷ್ಟ್ಯಗಳು:ಕೇವಲ ಹನ್ನೆರಡು ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಶಿಲ್ಪಕಲಾಕೃತಿಯ ಭವ್ಯಶಿಲಾಮಯ ದೇವಾಲಯದ ನಿರ್ವಣವಾಗಿದೆ. ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ದಿವ್ಯಸಾನ್ನಿಧ್ಯದ ವಿಶೇಷತೆ ಏನೆಂದರೆ ಇಲ್ಲಿರುವ ಸ್ತಂಭರೂಪದ ಶ್ರೀ ಲಕ್ಷಿ ್ಮನರಸಿಂಹ ಮಹಾಯಂತ್ರ. ಈ ಯಂತ್ರದ ಬಿಂದುಸ್ಥಾನದಲ್ಲಿ ಶ್ರೀ ಲಕ್ಷಿ ್ಮನರಸಿಂಹ ಸ್ವಾಮಿಯ ದಿವ್ಯಸಾನ್ನಿಧ್ಯ, ಮಹಾಯಂತ್ರದ ಕೆಳಗೆ ಮತ್ಸಯಂತ್ರ, ಕೂರ್ಮಯಂತ್ರ ಮತ್ತು ಗರುಡಯಂತ್ರ. ಈ ಗರುಡ ಯಂತ್ರದ 108 ದಳಗಳಲ್ಲಿ 108 ಲಕ್ಷ್ಮೀ ನರಸಿಂಹ ಸಾಲಿಗ್ರಾಮಗಳ ಪ್ರತಿಷ್ಠಾಪನೆ, ಇದಲ್ಲದೆ 27 ಅಡಿ ಎತ್ತರದ ಏಕಶಿಲಾ ಆಂಜನೇಯ ಪ್ರತಿಷ್ಠಾಪನೆ ಆಗಲಿದೆ. ಶ್ರೀ ಲಕ್ಷ್ಮೀನರಸಿಂಹ ದೇವಾಲಯ ಹೊರಭಾಗ ಮಹಾವಿಷ್ಣುವಿನ ದಶಾವತಾರವನ್ನು ಕಲ್ಲಿನಿಂದ ಕೆತ್ತಲಾಗಿದೆ. ದೇವಾಲಯದ ಒಳಗಿರುವ ಕಂಬಗಳಲ್ಲಿ ಬೃಹತ್ತಾದ ವಿಗ್ರಹಗಳನ್ನು ಕೆತ್ತಲಾಗಿದೆ. ಊಟದ ಮನೆ, ಯಾತ್ರಿನಿವಾಸ, ದೇವಾಲಯದ ಮುಂಭಾಗ 50 ಅಡಿ ಎತ್ತರದ ಗೋಪುರ- ಹೀಗೆ 20ಕ್ಕೂ ಹೆಚ್ಚು ಕಟ್ಟಡಗಳ ನಿರ್ಮಾಣ ಮಾಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 3 =
Remember me
