ಬೆಂಗಳೂರು:ಹಿಜಾಬ್ ವಿರೋಧಿಸಿ ಮತ್ತು ಗೋ ಸಂರಕ್ಷಣಾ ಹೋರಾಟದ ದ್ವೇಷದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಹಿಂದು ಪರ ಸಂಘಟನೆ ಕಾರ್ಯಕರ್ತ ಹರ್ಷನ ಕೊಲೆ ಮಾಡಲಾಗಿದೆ ಎಂಬುದು ರಾಷ್ಟ್ರೀಯ ತನಿಖಾ ದಳ (ಎನ್​ಐಎ) ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇತ್ತೀಚೆಗೆ ನಗರದ ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ಸಾವಿರಕ್ಕೂ ಅಧಿಕ ಪುಟಗಳ ಆರೋಪ ಪಟ್ಟಿಯನ್ನು ಸಲ್ಲಿಸಿದೆ. ಶಿವಮೊಗ್ಗದಲ್ಲಿ ಹಿಂದು ಮತ್ತು ಮುಸ್ಲಿಂ ಸಮುದಾಯದ ನಡುವೆ ಕೋಮು ಸಾಮರಸ್ಯ ಕದಡುವ ದುರುದ್ದೇಶಕ್ಕೆ ಆರೋಪಿಗಳು ಹರ್ಷನ ಕೊಲೆ ನಡೆಸಿದ್ದರು ಎಂಬುದನ್ನು ಎನ್​ಐಎ ತನಿಖೆಯಲ್ಲಿ ಸ್ಪಷ್ಟಪಡಿಸಿದೆ. ಈ ಹತ್ಯೆಗೆ ಸಾಕ್ಷಿಯಾಗಿ ಕೃತ್ಯ ಬಳಸಿದ್ದ ಮಾರಕಾಸ್ತ್ರಗಳು, ಬಟ್ಟೆಗಳು ಮತ್ತು ಮೊಬೈಲ್ ಕರೆಗಳ ವಿವರವನ್ನು ಆರೋಪ ಪಟ್ಟಿಯಲ್ಲಿ ಎನ್​ಐಎ ಉಲ್ಲೇಖಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ನಾಗರಿಕ ಹಕ್ಕು ನೊಂದಣಿ (ಎನ್​ಆರ್​ಸಿ) ಕಾಯ್ದೆ, ಹಿಜಾಬ್ ವಿವಾದ ಹಾಗೂ ಗೋ ರಕ್ಷಣಾ ಹೋರಾಟದಲ್ಲಿ ತೊಡಗಿದ್ದ ಭಜರಂಗ ದಳದ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ದುಷ್ಕೃತ್ಯಕ್ಕೆ ಆರೋಪಿಗಳು ಸಂಚು ರೂಪಿಸಿದ್ದರು. ಶಿವಮೊಗ್ಗ ನಗರದಲ್ಲಿ ಹಿಂದು ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಕೋಮು ಸಾಮರಸ್ಯ ಕದಡುವುದು ಆರೋಪಿಗಳ ದುರುದ್ದೇಶವಾಗಿತ್ತು. ಶಿವಮೊಗ್ಗದ ನಗರದ ಹಿಂದು ಸಮುದಾಯದ ಸಂಘಟಿಸುವ ಮೆರವಣಿಗೆ, ಆಚರಣೆ ಹಾಗೂ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದ ನಾಯಕರ ಹತ್ಯೆಗೆ ಆರೋಪಿಗಳು ಹುಡುಕಾಟ ನಡೆಸಿದ್ದರು. ಸಿಗೇಹಟ್ಟಿ ಹಾಗೂ ಭಾರತಿ ಕಾಲನಿ ಪ್ರದೇಶದ ಹಿಂದು ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಹರ್ಷ ಕಣ್ಣಿಗೆ ಬಿದ್ದಿದ್ದಾನೆ. ಮನೆ ಮತ್ತು ಓಡಾಡುವ ಜಾಗ ಸೇರಿ ಆತನ ಚಲನವಲನದ ಮಾಹಿತಿ ಸಂಗ್ರಹಿಸಿ ಫೆ.20ರ ರಾತ್ರಿ ಕೃತ್ಯ ಎಸಗಿದ್ದರು.
ಹರ್ಷ ತಪ್ಪಿಸಿಕೊಳ್ಳಲು ಓಡುತ್ತಿದ್ದಾಗ ಆರೋಪಿಗಳು ‘ಕಾಫಿರ್ ಭಜರಂಗ ದಳ ವಾಲೆ ಕೋ ಮಾರೋ’ ಎಂದು ಕೂಗಿಕೊಂಡು ಹಲ್ಲೆ ನಡೆಸಿದ್ದರು. ಈ ಕೃತ್ಯಕ್ಕೆ ಸಾಕ್ಷಿಯಾಗಿ ಸಿಸಿ ಕ್ಯಾಮರಾ ದೃಶ್ಯಾವಳಿಗಳು, ಪ್ರತ್ಯಕ್ಷದರ್ಶಿಗಳ ಹೇಳಿಕೆ, ಕೃತ್ಯಕ್ಕೆ ಬಳಸಿದ್ದ ರಕ್ತಮೆತ್ತಿದ ಮಾರಕಾಸ್ತ್ರಗಳು, ಮೊಬೈಲ್ ಕರೆಗಳ ವಿವರ ಸಿಕ್ಕಿವೆ. ಕೊಲೆ ಮಾಡಿದ ಬಳಿ ಬಟ್ಟೆಗಳು ಹಾಗೂ ಸಿಮ್ ಕಾರ್ಡ್​ಗಳನ್ನು ಆರೋಪಿ ಅಬ್ದುಲ್ ನಾಶಗೊಳಿಸಿದ್ದ.
ಆರೋಪಿಗಳ ಪಟ್ಟಿ:ಶಿವಮೊಗ್ಗದ ಅಜಾದ್ ನಗರದ ರಿಹಾನ್ ಶರೀಫ್, ಬುದ್ಧ ನಗರದ ಮೊಹಮ್ಮದ್ ಕಾಶೀಫ್ ಅಲಿಯಾಸ್ ಕಾಶೀಫ್, ಅಬ್ದುಲ್ ಖಾದರ್ ಜಿಲಾನಿ, ಎ.ರೋಷನ್, ಫಾರಜ್ ಪಾಷ, ಆಶೀಫುಲ್ಲಾ ಖಾನ್ ಅಲಿಯಾಸ್ ಚಿಕು, ಅಬ್ದುಲ್ ಅಫ್ವಾನ್, ಸೈಯದ್ ಫಿರೋಜ್ ಅಲಿಯಾಸ್ ನಿಹಾಲ್, ನದೀಮ್ ಹಾಗೂ ಜಾಫರ್ ಸಿದ್ದಿಕ್.
ನಿದ್ರೆ ಬರುತ್ತಿಲ್ಲ ಎಂದು ಬೇಸತ್ತು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 4 =
Remember me
