ಹಾಸನ:ಹಾಸನಾಂಬೆ ಗರ್ಭಗುಡಿ ಬಾಗಿಲು ವರ್ಷಕ್ಕೊಮ್ಮೆ ಮಾತ್ರ ತೆರೆಯಲಾಗುತ್ತದೆ. ಇಂದು ಮಧ್ಯಾಹ್ನ 12 ಗಂಟೆಗೆ ಹಾಸನಾಂಬೆ ಬಾಗಿಲು ತೆರೆಯಲಿದ್ದು, ಬಾಗಿಲು ತೆರೆಯಲು ಕ್ಷಣ ಗಣನೆ ಆರಂಭವಾಗಿದೆ.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಹಾಸನ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ, ಹಾಸನ ಡಿಸಿ ಎಸ್ಪಿ ನೇತೃತ್ವದಲ್ಲಿ ಗರ್ಭಗುಡಿ ಬಾಗಿಲು ತೆರೆಯಲಾಗುತ್ತದೆ. ಸಪ್ತ ಮಾತೃಕೆಯರಲ್ಲಿ ವೈಷ್ಣವೀ , ಕೌಮಾರಿ ,ಮಹೇಶ್ವರಿ ರೂಪದಕ್ಲಿ ಹಾಸನಾಂಬೆಯಲ್ಲಿ ನೆಲೆಸಿದ್ದಾರೆ. ಆಶ್ವೀಜ ಮಾಸದ ಹುಣ್ಣಿಮೆ ನಂತರ ಬರುವ ಮೊದಲ ಗುರುವಾರ ಹಾಸನಾಂಬೆ ಗರ್ಭಗುಡಿ ಬಾಗಿಲು ತೆರೆಯೋದು ಪ್ರತೀತಿ. ಬಲಿಪಾಡ್ಯಮಿ ದಿನ ಬಾಗಿಲು ಮುಚ್ಚೊದು ಸಂಪ್ರದಾಯ.
ಇಂದು ನವೆಂಬರ್ 2 ರಿಂದ ಬಾಗಿಲು ತೆರೆಯಲಿದ್ದು, ಬಲಿಪಾಡ್ಯಮಿ ನವೆಂಬರ್ 15 ರಂದು ಗರ್ಭಗುಡಿ ಬಾಗಿಲು ಹಾಕಲಾಗುತ್ತದೆ. ಬಾಗಿಲು ತೆರೆದ ಮೊದಲ ದಿನ, ಗರ್ಭಗುಡಿ ಬಾಗಿಲು ಹಾಕುವ ದಿನ ಸಾರ್ವಜನಿಕರಿಗೆ ದರುಶನ ಇರುವುದಿಲ್ಲ. ಹಾಸನಾಂಬೆ ಗರ್ಭಗುಡಿ ಇರುವ ಮುಖ್ಯ ಪ್ರವೇಶ ದ್ವಾರ ಬಳಿ ಅರಸು ವಂಶಸ್ಥರು ತಲವಾರದಿಂದ ಬಾಳೆ ಕಂಬ ಕಡಿಯೋ ಸಮಯಕ್ಕೆ ಸರಿಯಾಗಿ ಗರ್ಭಗುಡಿ ಬಾಗಿಲು ತೆರೆಯಲಾಗುತ್ತದೆ.
ಬರ ಸಂಕಷ್ಟಕ್ಕೆ ಅನಪೇಕ್ಷಿತ ಪರಿಹಾರ: ಎನ್​ಡಿಆರ್​ಎಫ್ ನಿಯಮಗಳಲ್ಲಿನ ಅವಕಾಶ ಬಳಕೆಗೆ ಮುಂದಾದ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 5 =
Remember me
