ಹಾಸನ:ಸಪ್ತಮಾತೃಕೆಯರಲ್ಲಿ ಒಬ್ಬಳಾದ ಹಾಗೂ ವರ್ಷಕ್ಕೊಮ್ಮೆ ಮಾತ್ರವೇ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ.
ಹಾಸನಾಂಬೆ ಜಾತ್ರೆ ಪ್ರಯುಕ್ತ ಸೋಮವಾರ ದೇವಿಯ ಆಭರಣಗಳನ್ನು ದೇವಾಲಯಕ್ಕೆ ತರಲಾಯಿತು. ಖಜಾನೆಯಲ್ಲಿ ರಿಸಿದ್ದ ಆಭರಣಗಳನ್ನು ಹೊರತಂದು, ಅಡ್ಡ ಪಲ್ಲಕ್ಕಿ ಮೇಲಿರಿಸಿ ಸಂಪ್ರದಾಯದಂತೆ ಮಡಿವಾಳರು ಪಂಜು ಹಾಗೂ ಮುತ್ತೈದೆಯರು ಆರತಿ ಬೆಳಗಿದರು. ವಿವಿಧ ಬಗೆಯ ಹೂವುಗಳಿಂದ ಸಿಂಗರಿಸಿದ್ದ ಅಡ್ಡಪಲ್ಲಕ್ಕಿ ಮೇಲೆ ಆಭರಣ ಇರಿಸುತ್ತಿದ್ದಂತೆ ಭಕ್ತರು ಹಾಸನಾಂಬೆಗೆ ಜೈಕಾರ ಕೂಗಿದರು.
ಜಿಲ್ಲಾಧಿಕಾರಿ ಆರ್​. ಗಿರೀಶ್​, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಅಡ್ಡಪಲ್ಲಕಿಗೆ ಪೂಜೆ ಸಲ್ಲಿಸಿ ಆಭರಣಗಳನ್ನು ಖಜಾನೆಯಿಂದ ಕಳುಹಿಸಿಕೊಟ್ಟರು. ಮಂಗಳವಾದ್ಯ ಸಮೇತ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಹಾಸನಾಂಬೆ ದೇವಾಲಯಕ್ಕೆ ಆಭರಣ ತರಲಾಯಿತು. ಪೊಲೀಸ್​ ಬಂದೋಬಸ್ತ್​ ಹಾಕಲಾಗಿತ್ತು. ತಹಸೀಲ್ದಾರ್​ ಶಿವಶಂಕರಪ್ಪ ಇತರರಿದ್ದರು.
ನ.5ರಂದು ಹಾಸನಾಂಬೆ ದೇವಾಲಯದ ಗರ್ಭಗುಡಿಯ ಬಾಗಿಲು ತೆರೆಯಲಿದ್ದು, ಕೋವಿಡ್​ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿಲ್ಲ. ನಗರದ ಅಲ್ಲಲ್ಲಿ ಎಲ್​ಇಡಿ ಪರದೆ ಮೇಲೆ ದೇವಿಯ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಆರ್​ಸಿಬಿ ಗೆಲುವಿಗಾಗಿ ರುದ್ರಾಭಿಷೇಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + nineteen =
Remember me
