ಬೆಂಗಳೂರು:ಡ್ರಗ್ಸ್​ ಜಾಲವನ್ನು ಬುಡ ಸಮೇತ ಕಿತ್ತೊಗೆಯಲು ಪಣತೊಟ್ಟಿರುವ ಪೊಲೀಸ್​, ಸಿಸಿಬಿ, ಎನ್​ಸಿಬಿ ತಂಡಕ್ಕೆ ರಾಜ್ಯದಲ್ಲಿ ನಿತ್ಯ ಮೂರ್ನಾಲ್ಕು ಕೇಸ್​ಗಳು ಸಿಕ್ಕಿಬೀಳುತ್ತಲೇ ಇವೆ. ಬಗೆದಷ್ಟು ಆಳ ಎಂಬಂತಾಗಿರುವ ಡ್ರಗ್ಸ್​ ಜಾಲದ ನಂಟಿನ ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದೀಗ ಕಾರಿನ ಸೀಟಿನ ಅಡಿ ಬರೋಬ್ಬರಿ 25 ಲಕ್ಷ ರೂ. ಮೌಲ್ಯದ ಡ್ರಗ್ಸ್​ ಸಿಕ್ಕಿದೆ!
ಶ್ರೀಲಂಕಾ ಮತ್ತು ಮಾಲ್ಡೀವ್ಸ್​​ನಿಂದ ಡ್ರಗ್ಸ್​ನ್ನು ಆಂಧ್ರದ ವಿಶಾಖಪಟ್ಟಣಂಗೆ ಸರಬರಾಜು ಮಾಡಿಕೊಂಡು ಅಲ್ಲಿಂದ ಬೆಂಗಳೂರು ಮತ್ತು ಕೇರಳಕ್ಕೆ ಮೂವರು ಡ್ರಗ್ಸ್​ ಪೆಡ್ಲರ್​ಗಳು ಪೂರೈಕೆ ಮಾಡುತ್ತಿದ್ದರು.
ನ.9ರಂದು ವಿಶಾಖಪಟ್ಟಣಂನಿಂದ ಕೇರಳಕ್ಕೆ ಕಾರಿನಲ್ಲಿ ಡ್ರಗ್ಸ್​ ಸಾಗಾಟದ ಸಂಬಂಧ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಮೇರೆಗೆ ಕಾರ್ಯಾಚರಣೆ ನಡೆಸಿದ ಎನ್​ಸಿಬಿ (ರಾಷ್ಟ್ರೀಯ ಮಾದಕ ದ್ರವ್ಯ ನಿಗ್ರಹ ದಳ) ಅಧಿಕಾರಿಗಳು ದೇವನಹಳ್ಳಿ ಟೌನ್​ ಗೇಟ್​ ಸಮೀಪ ಪೆಡ್ಲರ್​ಗಳಿದ್ದ ಕಾರನ್ನು ತಡೆದು ಪರಿಶೀಲನೆ ನಡೆಸಿದ್ದರು. ಆರಂಭದಲ್ಲಿ ಎಲ್ಲಿಯೂ ಡ್ರಗ್ಸ್​ ಪತ್ತೆಯಾಗಿಲ್ಲ. ಕೊನೆಗೆ ಚಾಲಕನ ಸೀಟ್​ ಕೆಳಗೆ ಹುಡುಕಾಟ ನಡೆಸಿದಾಗ ಹ್ಯಾಶಿಶ್ ಪತ್ತೆಯಾಗಿದೆ.
ಡ್ರಗ್ಸ್​ ಸಾಗಾಟ ನಡೆಸುತ್ತಿದ್ದ ಕೇರಳ ಮೂಲದ ಆರ್​.ಎಸ್​.ರಂಜೀತ್​, ಕೆ.ಕೆ.ಸಾರಂಗ್​ ಮತ್ತು ಪಿ.ಡಿ.ಅನೇಶ್​ ಎಂಬುವವರನ್ನು ಬಂಧಿಸಿದ ಎನ್​ಸಿಬಿ ಅಧಿಕಾರಿಗಳು 25 ಲಕ್ಷ ರೂ. ಮೌಲ್ಯದ ಡ್ರಗ್ಸ್​ ಜಪ್ತಿ ಮಾಡಿದ್ದಾರೆ. 1 ಗ್ರಾಂ ಹ್ಯಾಶಿಶ್ ದ್ರವನ್ನು ಐದು ಬಾರಿ ಸೇವನೆ ಮಾಡುವಷ್ಟು ಗುಣಮಟ್ಟದ್ದಾಗಿದೆ. ಕೇರಳ ಮೂಲದ ಪೆಡ್ಲರ್​ಗಳು ಹಲವು ವರ್ಷಗಳಿಂದ ಡ್ರಗ್ಸ್​ ದಂಧೆ ನಡೆಸುತ್ತಿದ್ದರು. ಇವರ ಸಹಚರರ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎನ್​ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಅಮ್ಮ… ನಾನು ಸ್ನೇಹಿತರೊಂದಿಗೆ ಹೋಗುತ್ತಿದ್ದೇನೆ, ಮನೆಗೆ ಬರೋದು ತಡವಾಗುತ್ತೆ ಎಂದವ ಹೆಣವಾಗಿ ಬಂದ!

ಲಾಂಗ್ ತೋರಿಸಿ ಸುಲಿಗೆ ಮಾಡಿದ್ದವನಿಗೆ ಗುಂಡೇಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + seventeen =
Remember me
