ಹಾಸನ:ನೀವು ಇದೇ ರೀತಿ ಕಿರುಕುಳ ನೀಡಿದರೆ ನಾವು ಡೆತ್​ನೋಟ್​ ಬರೆದಿಟ್ಟು ಸಾಯುತ್ತೇವೆ ಎಂದು ಅರಸೀಕೆರೆ ನಗರಸಭೆ ಸದಸ್ಯೆ ಕಲೈಅರಸೀ, ತಮಿಳುನಾಡಿನಿಂದ ವಿಡಿಯೋ ಹರಿಬಿಟ್ಟಿದ್ದಾರೆ.
ಕಲೈ ಅರಸೀ ಅವರು ಅರಸೀಕೆರೆಯ 2ನೇ ವಾರ್ಡ್ ಸದಸ್ಯೆ. ಹಾಸನ ಅರಸೀಕೆರೆ ನಗರಸಭೆ ಜೆಡಿಎಸ್ ಬಂಡಾಯ ಅಭ್ಯರ್ಥಿ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದೆ. ಬಂಡಾಯವೆದ್ದ 7 ಜನ ಸದಸ್ಯರಲ್ಲಿ 2ನೇ ವಾರ್ಡ್​ನ ಕಲೈ ಅರಸೀ ಮನಸ್ಸು ಬದಲಿಸಿ ಮತ್ತೆ ಜೆಡಿಎಸ್​ಗೆ ಸೇರಿದ್ದಾರೆ.
500 ರೂ. ಮುಖ ಬೆಲೆಯ ನೋಟಿನ ಕಂತೆ ಇಟ್ಟು ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ವಿರುದ್ಧ ಕಲೈ ಅರಸೀ ಆರೋಪ ಮಾಡಿದ್ದರು. ಸಂತೋಷ್ ಬೆಂಬಲಿಗರು 25 ಲಕ್ಷ ಆಫರ್ ಮಾಡಿದ್ರು. ಮುಂಗಡ 10 ಲಕ್ಷ ರೂ. ಕೊಟ್ಟು ಹೋದರು ಎಂದು ಕಲೈ ಅರಸೀ ಪ್ರೆಸ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಪ್ರಕರಣ ಸಂಬಧ ಅರಸೀಕೆರೆ ಸದಸ್ಯ ಹರ್ಷವರ್ಧನ್ ಹಾಗೂ ಇನ್ನೊರ್ವ ಸದಸ್ಯೆ ಆಯೇಷ ಪತಿ ಸಿಖಂದರ್ ಎಂಬುವರ ವಿರುದ್ಧ ಕಲೈ ಅರಸೀ ಜಾತಿ ನಿಂದನೆ ಕೇಸ್ ದಾಖಲಿಸಿದ್ದರು.
ಇದೀಗ ವಿಡಿಯೋ ಹರಿಬಿಡುವ ಮೂಲಕ ಕುತೂಹಲಕ್ಕೆ ಕಾರಣರಾಗಿದ್ದಾರೆ. ನಾವು ಹೊಸೂರಿಗೆ ಹೋದರೆ, ಅಲ್ಲಿಯೂ ನಮ್ಮನ್ನು ಬಿಡುತ್ತಿಲ್ಲ. ನಮಗೆ ಯಾವುದೇ ಹಣ ಬೇಡ. ನಮಗೆ ಹೀಗೆ ಹಿಂಸೆ ನೀಡಬೇಡಿ. ಸಿಖಂದರ್, ಹರ್ಷ, ನೀವೆಲ್ಲಾ ದಯವಿಟ್ಟು ಒತ್ತಾಯ ಮಾಡಬೇಡಿ ಎಂದು ಕಲೈ ಅರಸೀ ಹಾಗೂ ಆಕೆಯ ಪತಿ ವಿಡಿಯೋ ಹರಿಬಿಟ್ಟಿದ್ದಾರೆ.(ದಿಗ್ವಿಜಯ ನ್ಯೂಸ್​)
ಲೋನ್​ ಬೇಕಾದ್ರೆ ಲೈಂಗಿಕ ಸುಖ ನೀಡ್ಬೇಕಂತೆ! ಬ್ಯಾಂಕ್​ ಮ್ಯಾನೇಜರ್ ಕಳ್ಳಾಟ ಸಿಸಿಟಿವಿಯಲ್ಲಿ ಬಯಲು​​

ಮಾಫಿಯಾ ವಿರುದ್ಧ ಪ್ರಜ್ವಲ್​ಹೋರಾಟ; ಹುಟ್ಟುಹಬ್ಬಕ್ಕೆ ಟೀಸರ್, ಪೋಸ್ಟರ್​ಗಳೇ ಉಡುಗೊರೆ

ಕರ್ನಾಟಕದಲ್ಲಿ ಆಡಳಿತ ಸುಧಾರಣೆಗೆ ಮುನ್ನುಡಿ; ಆಯೋಗ-2ರ ಮೊದಲ ವರದಿ ಸಲ್ಲಿಕೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + twelve =
Remember me
