ಹಾಸನ:ಮಹಾಮಾರಿ ಕರೊನಾ ಸಂಕಷ್ಟದಿಂದ ನೊಂದು ಕಂಗಲಾಗಿರುವ ರೈತರಿಗೆ ಇದೀಗ ಬ್ಯಾಂಕ್‌ನಿಂದ ನೋಟಿಸ್ ಆಘಾತ ಎದುರಾಗಿದೆ.
ಸಾಲ ಮರುಪಾವತಿ ಮಾಡುವಂತೆ ರೈತರ ಮನೆಗೆ ಬಂದು ಕೆನರಾ ಬ್ಯಾಂಕ್​ ಸಿಬ್ಬಂದಿ ನೋಟೀಸ್ ನೀಡುತ್ತಿದ್ದಾರೆ. ಹಾಸನದ ಚನ್ನರಾಯಪಟ್ಟಣ ಶಾಖೆಯ ಕೆನರಾ ಬ್ಯಾಂಕ್‌ ಸಿಬ್ಬಂದಿ ಕರೊನಾ ಸಂಕಷ್ಟ ಸಮಯದಲ್ಲಿ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ.
ಈಗಾಗಲೇ ಸುಮಾರು 50ಕ್ಕೂ ಹೆಚ್ಚು ಜನರಿಗೆ ನೋಟಿಸ್​ ನೀಡಲಾಗಿದೆ. ಮೊದಲೇ ಕರೊನಾ ಸಂಕಷ್ಟದಿಂದ ಸರಿಯಾಗಿ ಕೂಲಿ ಸಿಗುತ್ತಿಲ್ಲ. ಬೆಳೆದ ಬೆಳೆಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ. ಇದರ ನಡುವೆ ನೋಟಿಸ್​ ನೀಡುತ್ತಿರುವುದು ರೈತರನ್ನು ಚಿಂತೆಗೆ ದೂಡಿದೆ.
ದಯವಿಟ್ಟು ನಮ್ಮ ಸಾಲಮನ್ನಾ ಮಾಡಿ. ಬ್ಯಾಂಕ್‌ಗಳಿಗೆ ನೋಟಿಸ್ ನೀಡಿ ಕಿರುಕುಳ ನೀಡದಂತೆ ಎಚ್ಚರಿಕೆ ನೀಡಿ ಎಂದು ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇನ್ನು ಮಗ ತೀರಿ ಹೋದ ನಂತರ ವಯೋವೃದ್ಧ ತಂದೆ-ತಾಯಿಗೆ ನೊಟೀಸ್ ನೀಡಿದ್ದು, ನನ್ನ ಮಗ ಈಗಾಗಲೇ ಸಾಲದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿ ಹಲವು ದಿನ ಕಳೆದಿವೆ. ಹೀಗಾದ್ರೆ ನಾವು ಬದುಕೋದು ಹೇಗೆ ಎಂದು ಕಣೀರಿಡುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
‘ವಿದುರನ ಸ್ಥಾನದಲ್ಲಿ ನಿಂತು ಹೇಳ್ತಿದ್ದೇನೆ ಧೃತರಾಷ್ಟ್ರ ಸ್ಥಾನದಲ್ಲಿರೋ ಯಡಿಯೂರಪ್ಪ ಅರ್ಥ ಮಾಡ್ಕೋಬೇಕು’

ಸಿಟಿ ಸ್ಕ್ಯಾನಿಂಗ್​ಗೆ ದರ ನಿಗದಿ ಮಾಡಿದ ಸರ್ಕಾರ, ಖಾಸಗಿ ಆಸ್ಪತ್ರೆಗಳ ವಸೂಲಿ ದಂಧೆಗೆ ಬ್ರೇಕ್

ಕರೊನಾಗೆ ಬಾಣಂತಿ ಬಲಿ! ಅವಳ ಚಿತೆಯಲ್ಲೇ ನನ್ನನ್ನೂ ಸುಟ್ಟುಹಾಕಿ … ಎಂದವ ವಿಷ ಕುಡಿದು ಆಸ್ಪತ್ರೆ ಆವರಣದಲ್ಲೇ ಒದ್ದಾಡಿದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 12 =
Remember me
