ಹಾಸನ:ಬಿಜೆಪಿ ಶಾಸಕ ಪ್ರೀತಮ್ ಗೌಡ ಮಾಡಿರುವ ಸವಾಲನ್ನು ಮಾಜಿ ಸಚಿವ ಎಚ್​.ಡಿ. ರೇವಣ್ಣ ಅವರ ಕುಟುಂಬ ಸ್ವೀಕರಿಸಿದ್ದು, ಹಾಸನ ಕ್ಷೇತ್ರದ ಗುಟ್ಟನ್ನು ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ಬಿಟ್ಟುಕೊಟ್ಟಿದ್ದಾರೆ. ಹಾಸನಕ್ಕೆ ರೇವಣ್ಣ ಕುಟುಂಬದ ಸದಸ್ಯರೇ ಸ್ಪರ್ಧಿಸುವುದಾಗಿ ಸುಳಿವು ನೀಡಿದ್ದಾರೆ.
ಇಂದು (ಜ.10) ವರದಿಗಾರರೊಂದಿಗೆ ಮಾತನಾಡಿದ ಪ್ರಜ್ವಲ್​ ರೇವಣ್ಣ, ನಾವು ಯಾವಾಗ ತಾನೇ ಸವಾಲಿಗೆ ತಯಾರಿಲ್ಲ ಅಂತ ಹೇಳಿದ್ದೀವಿ. ನಾವು ಸವಾಲಿಗೆ ನೂರಕ್ಕೆ ನೂರು ತಯಾರಿದ್ದೇವೆ. ಎಲ್ಲಾದ್ರೂ ನಾವು ಸವಾಲನ್ನು ಬಿಡ್ತಿವಾ? ರೇವಣ್ಣ ಕುಟುಂಬ ಯಾವತ್ತೋ ಸವಾಲನ್ನು ತಗೆದುಕೊಂಡಿದೆ ಎಂದು ಪ್ರಜ್ವಲ್ ಹೇಳಿದರು.
ನಾವು ಯಾವತ್ತು ಸವಾಲಿನ ಹಿಂದೆ ಹೋದವರಲ್ಲ. ಅವನು (ಪ್ರೀತಂ ಗೌಡ) ಇನ್ನು ಹತ್ತು ‌ಸವಾಲು ಹಾಕಿದರೂ ಎದುರಿಸುವ‌ ಶಕ್ತಿ ನಮಗಿದೆ. ನಮ್ಮ ಜತೆ ಜನ ಇದ್ದಾರೆ. ಜನರ ಜೊತೆ ಸವಾಲು ಎದುರಿಸುತ್ತೇವೆ. ಇವತ್ತಿಗೂ ಆ ಸವಾಲಿಗೆ ಬದ್ಧವಾಗಿದ್ದೇವೆ. ಯವಾಗ ತಾನೆ ಹಿಂದೆ ಸರಿದಿದ್ದೀವಿ?ಎಂಥಾ ಸವಾಲು ಹಾಕಿದರು ನಾವು ರೆಡಿ ಎಂದರು.
ಲೋಕಸಭಾ ಚುನಾವಣೆಯಲ್ಲಿ ಹಾಸನದಲ್ಲಿ 15 ಸಾವಿರ ಲೀಡ್ ತೆಗೆದುಕೊಳ್ಳಲಿಲ್ಲ ಅಂದ್ರೆ ಹಾಸನ ಜಿಲ್ಲೆಗೆ ತಲೆ ಹಾಕಲ್ಲ ಅಂತ ಹೇಳಿದ್ದೆ, ಹಾಸನದಲ್ಲಿ ನಾನು 16 ಸಾವಿರ ಲೀಡ್​ ತೆಗೆದುಕೊಳ್ಳಳಿಲ್ವಾ? ಎನ್ನುವ ಮೂಲಕ ಕೊನೆಗೂ ಹಾಸನ ಶಾಸಕ ಪ್ರೀತಮ್ ಸವಾಲನ್ನು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸ್ವೀಕರಿಸಿದ್ದಾರೆ.
ಇನ್ನ ಹತ್ತು ದಿನ ಸಮಯ ಕೊಡಿ ಇದಕ್ಕೆಲ್ಲ ತೆರೆ ಎಳೆಯುತ್ತೇವೆ. ಆಮೇಲೆ ಏನೇನು ಶೋ ಮಾಡಬೇಕು ಮಾಡೋಣ. ದೇವರು ಯಾರ ಬಾಯಲ್ಲಿ ಹೇಳಿಸಬೇಕು ಹೇಳಿಸ್ತಾನೆ ಎಂದು ಪ್ರಜ್ವಲ್​ ರೇವಣ್ಣ ಗುಡುಗಿದರು.
ಹಾಸನ ಕ್ಷೇತ್ರಕ್ಕೆ ರೇವಣ್ಣ ಬಂದು ನಿಂತ್ರೆ 50 ಸಾವಿರ ಲೀಡ್​ನಲ್ಲಿ ಗೆಲ್ಲುತ್ತೆನೆ ಎಂದು ಹಾಸನ ಶಾಸಕ ಪ್ರೀತಂ ಗೌಡ ಪಂಥಾಹ್ವಾನ ನೀಡಿದ್ದರು.(ಏಜೆನ್ಸೀಸ್​)
6ನೇ ತರಗತಿ ವಿದ್ಯಾರ್ಥಿನಿ ಮನೆಗೆ ನುಗ್ಗಿ ಚಾಕುವಿನಿಂದ ಬೆದರಿಸಿ ಹಣೆಗೆ ಕುಂಕುಮವಿಟ್ಟ 8ನೇ ತರಗತಿ ವಿದ್ಯಾರ್ಥಿ!

ರಮ್ಯಾ ಮೂಲಕ ಕಿಚ್ಚ ಸುದೀಪ್​ಗೆ ಗಾಳ ಹಾಕಿದ ಕಾಂಗ್ರೆಸ್​!​

ನನಗೆ ಬಂದ ಪರಿಸ್ಥಿತಿ ಯಾರಿಗೂ ಬಾರದಿರಲಿ: ಟ್ರೋಲಿಗರಿಗೂ ಒಳ್ಳೆಯದ್ದನ್ನೇ ಬಯಸಿದ ಸಮಂತಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 10 =
Remember me
