ಹಾಸನ:ಬಸ್​ನಲ್ಲಿ ಚಿನ್ನಾಭರಣ-ಹಣದ ಜತೆ ಪ್ರಯಾಣಿಸುವ ಮುನ್ನ ಜೋಕೆ. ಕಳ್ಳರು ಯಾವಾಗ, ಯಾವ ಸೋಗಿನಲ್ಲಿ ಬರ್ತಾರೆ ಎಂಬುದು ಗೊತ್ತಾಗಲ್ಲ. ಸ್ವಲ್ಪ ಯಾಮಾರಿದ್ರೆ ಇರೋ ಬರೋದ್ದನ್ನೆಲ್ಲ ದೋಚಿಕೊಂಡು ಕ್ಷಣಾರ್ಧದಲ್ಲೇ ಪರಾರಿಯಾಗ್ತಾರೆ. ಹೀಗಂತ ಹೇಳಿದ್ದು ಏಕೆ ಗೊತ್ತಾ?
ಬುರ್ಖಾ ಧರಿಸಿ ನಗರ ಸಾರಿಗೆ ಬಸ್ ಹತ್ತಿದ್ದ ಮೂವರು ಖತರ್ನಾಕ್ ಕಳ್ಳಿಯರು ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಪರ್ಸ್ ಮತ್ತು ಚಿನ್ನದ ಸರ ಎಗರಿಸಿದ್ದ ಘಟನೆ ಹಾಸನದಲ್ಲಿ ಭಾನುವಾರ ಸಂಭವಿಸಿದೆ.
ಚಿನ್ನದ ಸರ ಮತ್ತು ಪರ್ಸ್​ ಕಳೆದುಕೊಂಡ ಮಹಿಳೆಯ ಅದೃಷ್ಟ ಚೆನ್ನಾಗಿತ್ತು. ಬುರ್ಖಾಧಾರಿಯಾಗಿ ಬಂದಿದ್ದ ಮೂವರು ಕಳ್ಳಿಯರ ಕೈಚಳಕವನ್ನು ಪಕ್ಕದಲ್ಲೇ ಕುಳಿತಿದ್ದ ಮತ್ತೊಬ್ಬ ಮಹಿಳೆ ಗಮನಿಸಿದ್ದು, ಕಳ್ಳಿಯರು ಇನ್ನೇನು ಎಸ್ಕೇಪ್​ ಆಗಬೇಕು ಅನ್ನುವಷ್ಟರಲ್ಲಿ ಕೂಗಿಕೊಂಡಿದ್ದಾರೆ. ತಕ್ಷಣ ಚಾಲಕ ಬಸ್ ನಿಲ್ಲಿಸುತ್ತಿದ್ದಂತೆ ಬಸ್​ನಿಂದ ಇಳಿದ ಮೂವರು ಕಳ್ಳಿಯರು ಬುರ್ಖಾ ಎಸೆದು ಓಡಲಾರಂಭಿಸಿದರು. ಈ ವೇಳೆ ಸಾರ್ವಜನಿಕರು ಕಳ್ಳಿಯರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದರು.
ಬಸ್​ ನಿಲ್ದಾಣದಿಂದ ದಾಸಕೊಪ್ಪ ಮಾರ್ಗವಾಗಿ ಬಸ್​ ಸಂಚರಿಸುತ್ತಿತ್ತು. ಈ ವೇಳೆ ಪ್ರಯಾಣಿಕರು ಪರ್ಸ್​-ಸರ ಕಿತ್ತುಕೊಂಡಿದ್ದಾರೆ ಎಂದು ಕೂಗಾಡುತ್ತಿದ್ದರು. ಕೂಡಲೇ ಬಸ್​ ನಿಲ್ಲಿಸಿದೆ. ಕಳ್ಳಿಯರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಹಾಸನ ಡಿಪೋ-2ರಲ್ಲಿನ ಬಸ್​​ ಚಾಲಕ ಯೋಗರಾಜು ಘಟನೆ ಬಗ್ಗೆ ವಿವರಿಸಿದರು.
ಮಗಳ ಮದ್ವೆ ಸ್ಪೆಷಲ್: ಕ್ಷೇತ್ರದ ಜನ್ರಿಗೆ ದುಬಾರಿ ಗಿಫ್ಟ್​ ಕೊಟ್ಟ ಡಿಕೆಶಿ! ಪ್ರತಿ ಮನೆ-ಮನೆಗೂ ತಲುಪಿಸಿದ್ರು

ತಹಸೀಲ್ದಾರ್​ ಕಚೇರಿ ಬಳಿ ಹಾವಿನ ಜತೆ ಆಟವಾಡುತ್ತಿದ್ದ ವೃದ್ಧ ಕ್ಷಣಾರ್ಧದಲ್ಲೇ ಪ್ರಾಣಬಿಟ್ಟ!

ಬೇಡ ಬೇಡ ಅಂದ್ರೂ ಸಾವಿನ ಮನೆಯ ಕದ ತಟ್ಟಿದ 15ರ ಬಾಲಕ! ಕಳೆದ ವಾರವೇ ಪೊಲೀಸರು ಎಚ್ಚರಿಸಿದ್ದರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + seven =
Remember me
