ಹಾಸನ:ಕಾರು ಸಮೇತ ವ್ಯಕ್ತಿಯನ್ನು ಸುಟ್ಟು ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಮಟ್ಟನವಿಲೆ ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆದಿದೆ. ಈ ರಸ್ತೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ಸಮೀಪದಲ್ಲೇ ಇದೆ…
ದುಷ್ಕರ್ಮಿಗಳು ಮಟ್ಟನವಿಲೆಯಿಂದ ಕಗ್ಗೆರೆಗೆ ಹೋಗೋ ಮಾರ್ಗ ಮಧ್ಯದಲ್ಲಿ ಈ ಕಾರಿಗೆ ಬೆಂಕಿ ಹಚ್ಚಿದ್ದರು. ಆದರೆ, ಈ ಘಟನೆ ಗ್ರಾಮದವರ ಗಮನಕ್ಕೆ ಬಂದಿರಲಿಲ್ಲ. ಬೆಳಗಿನ ಜಾವ ಕಾರಿನ ಬೆಂಕಿ ಉರಿದು ಸ್ಫೋಟಗೊಂಡ ಸದ್ದು ಕೇಳಿ ಸ್ಥಳಕ್ಕೆ ಸ್ಥಳೀಯರು ಧಾವಿಸಿದ್ದರು. ಮೊದಲಿಗೆ ಸುಟ್ಟು ಹೋದ ಕಾರೆಂದು ತಿಳಿದಿದ್ದರು. ಪರಿಶೀಲಿಸಿ ನೋಡಿದಾಗ ಸುಟ್ಟ ಕಾರಿನ ಡಿಕ್ಕಿಯಲ್ಲಿ ಸುಟ್ಟು ಕರಕಲಾದ ಶವವೊಂದು ಕಂಡು ಬಂದಿತ್ತು.
ಇದನ್ನೂ ಓದಿ:ರಾಹುಲ್ ಗಾಂಧಿಯಿಂದ ಎಡವಟ್ಟು; ಕಾನೂನು ಕ್ರಮಕ್ಕೆ ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಬಿಜೆಪಿ ಪತ್ರ
ಆದರೆ, ಶವ ಗಂಡಿನದ್ದೋ ಅಥವಾ ಮಹಿಳೆಯದ್ದೋ ಎಂದು ತಿಳಿಯದ ಮಟ್ಟಿಗೆ ದೇಹ ಸುಟ್ಟುಹೋಗಿದೆ. ಈ ಶವ ಸ್ಥಳೀಯರದ್ದೇ ಯಾರೋದೋ ಸಂಬಂಧಿಸಿದ್ದರಬಹುದೆಂದು ಪೊಲೀಸರು ಊಹಿಸಿದ್ದಾರೆ. ಸ್ಥಳಕ್ಕೆ ಹಾಸನ ಎಸ್ಪಿ ಶ್ರೀನಿವಾಸ್ ಗೌಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಸುಟ್ಟ ಕಾರು ಟಯೋಟೋ ಇಟಿಯಾಸ್ ಕಾರು ಎಂದು ಗುರುತಿಸಲಾಗಿದೆ. ಆದ್ರೆ ಕೊಲೆಯಾಗಿರೋ ವ್ಯಕ್ತಿ ಯಾರಿರಬಹುದೆಂಬ ಗುರುತು ಪತ್ತೆಯಾಗಿಲ್ಲ. ಇನ್ನು ರಾಷ್ಟ್ರೀಯ ಹೆದ್ದಾರಿ 75 ರ ಸಮೀಪ ಘಟನೆ ನಡೆದಿರೋ ಕಾರಣ ಬೆಂಗಳೂರಿನಿಂದ ಆಗಮಿಸಿದ ದುಷ್ಕರ್ಮಿಗಳಿಂದಲೂ ಈ ಕೃತ್ಯ ಆಗಿರಬಹುದೆಂದು ಪೊಲೀಸ್ ಉಹೀಸಿದ್ದಾರೆ. ಆದ್ರೆ ಕಾರಿನ ಡಿಕ್ಕಿಯಲ್ಲಿ ಹಾಕಿ ಸುಟ್ಟು ಹಾಕುವಷ್ಟು ಅಮಾನುಷ ಘಟನೆ ಹಿರಿಸಾವೆ ಜನರಿಗೆ ಆತಂಕ ಉಂಟುಮಾಡಿದೆ.(ದಿಗ್ವಿಜಯ ನ್ಯೂಸ್​)
‘ಶಿರಾ ಧರ್ಮಯುದ್ಧಕ್ಕೆ ಪಂಚಪಾಂಡವರು…ಸಾರಥ್ಯಕ್ಕೆ ಕೃಷ್ಣ..’: ನಳೀನ್​ ಕುಮಾರ್​ ಕಟೀಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 13 =
Remember me
