ಹಾಸನ:ಅಂಗವಿಕಲ ಕೋಟಾದಲ್ಲಿ ಶಾಲಾ ಶಿಕ್ಷಕ ನೌಕರಿ ಗಿಟ್ಟಿಸಿಕೊಂಡು, ಸರ್ಕಾರಕ್ಕೆ ಪಂಗನಾಮ ಹಾಕಿರುವ ಆರೋಪ ಕೇಳಿಬಂದಿದ್ದು, ಪ್ರಕರಣವೀಗ ಲೋಕಾಯುಕ್ತ ಮೆಟ್ಟಿಲೇರಿದೆ.
ಹಾಸನ ಜಿಲ್ಲೆಯಲ್ಲಿ ಒಟ್ಟು 42 ಮಂದಿ ಶಿಕ್ಷಕರು ನಕಲಿ ಅಂಗವಿಕಲ ಪ್ರಮಾಣ ಪತ್ರ ನೀಡಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿರುವ ಆರೋಪ ಕೇಳಿಬಂದಿದೆ. 1996 ರಿಂದ 2004ನೇ ಸಾಲಿನವರೆಗೂ ನಡೆದ ಶಿಕ್ಷಕರ ನೇಮಕಾತಿಯಲ್ಲಿ ಈ ಹಗರಣ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ:ಫುಟ್​ಬಾಲರ್​ ಆಗುವ ಕನಸನ್ನೇ ಕಸಿದ ಸೊಳ್ಳೆ ಕಡಿತ: ಊದಿದ ಕಾಲು, ಭಯಾನಕ ರೋಗಕ್ಕಿಲ್ಲ ಮದ್ದು..!
ಓರ್ವ ಶಿಕ್ಷಕ ಅಂಗವಿಕಲ ಕೋಟಾದಲ್ಲಿ ನೌಕರಿ ಪಡೆಯಲು ಆತನಿಗೆ ಶೇ. 40 ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರತಕ್ಕದ್ದು ಕಾನೂನು ನಿಯಮ. ಆದರೆ, ಹಾಸನ ಜಿಲ್ಲೆಯಲ್ಲಿ ಒಟ್ಟು 149 ಮಂದಿ ಶಿಕ್ಷಕರು ಅಂಗವಿಕಲ ಕೋಟದಲ್ಲಿ ಕೆಲಸ ಪಡೆದಿದ್ದಾರೆ. ಇದರಲ್ಲಿ 137 ಮಂದಿ ಶಿಕ್ಷಕರನ್ನು ವೈದ್ಯಕೀಯ ಮರು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 42 ಮಂದಿ ಶಿಕ್ಷಕರ ವೈದ್ಯಕೀಯ ಮರು ತಪಾಸಣ ವೇಳೆಯಲ್ಲಿ ಶೇಕಡ 40 ಕ್ಕಿಂತ ಕಡಿಮೆ ಅಂಗವಿಕಲತೆ ಹೊಂದಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದ್ದು, ಈ ಸಂಬಂಧ ಹಾಸನ ಶಿಕ್ಷಣ ಇಲಾಖೆಯಿಂದ ರಾಜ್ಯ ಪ್ರಾಥಮಿಕ ಶಿಕ್ಷಣ ನಿರ್ದೇಶಕರಿಗೆ ದೂರು ಸಲ್ಲಿಕೆಯಾಗಿ. ಈ ವಿಚಾರ ಇದೀಗ ಲೋಕಾಯುಕ್ತ ತನಿಖೆಗೆ ಒಳಪಡಿಸಿರುವುದಾಗಿ ತಿಳಿದುಬಂದಿದೆ.
ಪ್ರಕರಣ ಗಮನಿಸಿದರೆ ಈಗಾಗಲೇ ನಕಲಿ ಅಂಗವಿಕಲ ದಾಖಲೆ ಸಲ್ಲಿಸಿ ಕೆಲಸ ಪಡೆದವರು 10 ವರ್ಷಕಿಂತ ಹೆಚ್ಚುಕಾಲ ಸೇವೆ ಸಲ್ಲಿಸಿ ಆಗಿದೆ. ಇಂತ ಸರ್ಕಾರಿ ನೇಮಕಾತಿ ಆಗುವಾಗ ಎಚ್ಚರ ವಹಿಸಬೇಕಾದ ಸರ್ಕಾರ ಮತ್ತು ಮೇಲಾಧಿಕಾರಿಗಳ ಬೇಜವಾಬ್ದಾರಿ ತನದಿಂದ ಇಂದು ದೊಡ್ಡಪ್ರಮಾಣದ ಪ್ರಮಾದ ನಡೆದು ಹೋಗಿದೆ. ಇನ್ನಾದ್ರೂ ಸರ್ಕಾರ ಇಂತಹ ಸರ್ಕಾರಿ ನೇಮಕಾತಿ ವಿಚಾರದಲ್ಲಿ ಕಟ್ಟೆಚ್ಚರ ವಹಿಸಬೇಕಾಗಿದೆ.(ದಿಗ್ವಿಜಯ ನ್ಯೂಸ್​)
ಭೀಮ್​ ಆರ್ಮಿಗೂ ಪಿಎಫ್​ಐಗೂ ಸಂಬಂಧವಿಲ್ಲ, ಹಾಥರಸ್​ ಪ್ರತಿಭಟನೆಗೆ 100 ಕೋಟಿ ಹಣವೂ ಬಂದಿಲ್ಲ: ಇಡಿ ಸ್ಪಷ್ಟನೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × three =
Remember me
