ಹಾಸನ:ಮಗನೇ ನಿನ್ನ ಅಪ್ಪ ಸತ್ತಿದ್ದಾರೆ. ಅಂತ್ಯಸಂಸ್ಕಾರ ಮಾಡಬೇಕಿದೆ. ಎಲ್ಲಿದ್ದರೂ ಬೇಗ ಬಾ ಮಗನೇ ಎಂದು ತಾಯಿಯೊಬ್ಬಳು ಗಂಡನ ಸಾವಿನ ನೋವಿನಲ್ಲೇ ಮಗನ ಬರುವಿಕೆಗಾಗಿ ಗೋಳಿಡುತ್ತಿರುವ ಮನಕಲಕುವ ಘಟನೆ ಹಾಸನ ತಾಲ್ಲೂಕಿನ ಸಜ್ಜೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಾಲದ ಶೂಲಕ್ಕೆ ಸಿಲುಕದಿರಿ ಎಂದು ಎಷ್ಟೇ ಬುದ್ಧಿವಾದ ಹೇಳಿದರು, ಅತಿಯಾದ ಆಸೆಗೆ ಬಿದ್ದು ಮೈತುಂಬಾ ಸಾಲ ಮಾಡಿಕೊಳ್ಳುತ್ತಾರೆ. ಅಂತವರು ನೆಮ್ಮದಿಯಿಂದ ಇರಲಾರರು, ಮನೆಯವರನ್ನು ನೆಮ್ಮದಿಯಿಂದ ಇರಲು ಬಿಡಲಾರರು ಎಂಬುದಕ್ಕೆ ಈ ಘಟನೆ ಪ್ರತ್ಯಕ್ಷ ಸಾಕ್ಷಿಯಾಗಿದ್ದರೂ, ಒಮ್ಮೆ ಆಲೋಚಿಸದರೆ ಬದುಕಿಗೊಂದು ಅರ್ಥ ಸಿಗುತ್ತದೆ.
ಇದನ್ನೂ ಓದಿರಿ:ಡ್ರಾಪ್ ಕೊಟ್ಟ ಮಹಿಳೆಯ ದೇಹದ ಬಗ್ಗೆ ಕೆಟ್ಟದಾಗಿ ಪ್ರಶ್ನಿಸಿದ ಶಾಲಾ ಬಾಲಕ: ವಿಡಿಯೋ ಹರಿಬಿಟ್ಟ ಸಂತ್ರಸ್ತೆ!
ಹೌದು. ಮಗ ಸಾಲ ಮಾಡಿದ್ದಕ್ಕೆ ಸಾಲಗಾರರ ಕಾಟ ತಡೆಯಲಾರದೆ ತಂದೆಯೋರ್ವ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಜ್ಜೇನಹಳ್ಳಿ ಗ್ರಾಮದ ನಿವಾಸಿ ಶಿವಣ್ಣ (50) ಆತ್ಮಹತ್ಯೆ ಮಾಡಿಕೊಂಡಾತ. ಮಗ ಮಂಜುನಾಥ್​ 25 ಲಕ್ಷ ರೂಪಾಯಿಗು ಹೆಚ್ಚು ಸಾಲ ಮಾಡಿ, ಸಾಲಗಾರರ ಕಾಟ ತಾಳಲಾರದೆ ಮೂರು ತಿಂಗಳ ಹಿಂದೆಯೇ ಊರು ಬಿಟ್ಟು ಹೋಗಿದ್ದ.
ಮಂಜುನಾಥ್​ ಮಾಡಿದ್ದ ಸಾಲ ಪೋಷಕರಿಗೆ ತಿಳಿದಿರಲಿಲ್ಲ. ಇತ್ತ ಮಂಜುನಾಥ್​ ಸುಳಿವು ಸಿಗದಿದ್ದರಿಂದ ಸಾಲ ಕೊಟ್ಟವರು ಆತನ ಮನೆ ಬಳಿ ಬಂದು ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದರು. ಇದರಿಂದ ಮನನೊಂದ ಶಿವಣ್ಣ ವಿಷ ಸೇವಿಸಿ, ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇದನ್ನೂ ಓದಿರಿ:ಲಂಚ ತೆಗೆದುಕೊಳ್ಳುವಾಗ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಪೊಲೀಸರು! ಎಸ್ಕೇಪ್​ ಆಗಲು ಹೋಗಿ ಕಾಲು ಮುರಿದುಕೊಂಡ ಪೇದೆ
ಊರು ಬಿಟ್ಟಿರುವ ಮಗನನ್ನು ತಂದೆಯ ಅಂತ್ಯಸಂಸ್ಕಾರಕ್ಕೆ ಆಗಮಿಸುವಂತೆ ತಾಯಿ ಕಣ್ಣೀರಾಕುತ್ತಾ ಮನವಿ ಮಾಡುತ್ತಿರುವ ದೃಶ್ಯ ಎಂಥವರ ಕಣ್ಣಲ್ಲೂ ನೀರು ತುಂಬಿಕೊಳ್ಳುವಂತೆ ಮಾಡುತ್ತದೆ. ಎಲ್ಲಿದ್ದರು ಬಂದು ತಂದೆಯ ಅಂತ್ಯಸಂಸ್ಕಾರ ಮಾಡುವಂತೆ ತಾಯಿ ಮತ್ತು ಅಕ್ಕ ಕಣ್ಣೀರಿಡುತ್ತಿದ್ದು, ಮಗನ ಬರುವಿಕೆಗಾಗಿ ಕಾದಿದ್ದಾರೆ.
ಇಂತಹ ಘಟನೆಗಳು ನಡೆಯಲೇಬಾರದು ಎಂಬುದು ಎಲ್ಲಯ ಆಶಯವಾಗಿದೆ. ಆದರೆ, ಕ್ರೂರ ವಿಧಿಯಾಟ ಏನಿದೆಯೋ? ಯಾರು ಎದರು ನೋಡದ ಅಮಾನವೀಯ ಘಟನೆ ನಡದೇ ಹೋಗಿದೆ. ಸಾಲಕ್ಕೆ ನುಗ್ಗುವ ಮುನ್ನ ಒಮ್ಮೆ ಯೋಚಿಸಿದರೆ ಒಳಿತು. ಒಬ್ಬರ ದುರಾಸೆಗೆ ಯಾರೆಲ್ಲ ಬಲಿಪಶುವಾಗಬೇಕಾಗುತ್ತದೆ ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆ. ಹಾಗೆಯೇ ಸಾಲು ನೀಡುವವರು ಸಹ ಮನಷ್ಯತ್ವ ಮರೆತರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದ್ದು, ಇನ್ಮುಂದೆ ಇಂತಹ ಘಟನೆ ನಡೆಯದಿರಲಿ ಎಂದು ಪಾರ್ಥಿಸೋಣ.
ಇದನ್ನೂ ಒದಿರಿ:ಪ್ರೀತಿ ಹೆಸರಲ್ಲಿ ಲೂಟಿಮಾಡಿ ಈಗ ನನಗೆ ಬೇಕಾದಷ್ಟು ಜನ ಇದ್ದಾರೆ ಎನ್ನುತ್ತಿದ್ದಾಳೆ- ಬರೀ ಗಂಡಿಗೇಕೆ ಶಿಕ್ಷೆ?
ಅಂಕಲ್​ ಅಂತ್ಯಸಂಸ್ಕಾರ ಬಿಟ್ಟು ಒಂಟಿಯಾಗಿ ಮನೆಗೆ ಬಂದ ಯುವತಿ: ಪಾಲಕರಿಗೆ ಕಾದಿತ್ತು ಬಿಗ್​ ಶಾಕ್​!

ತಾಲೂಕು ಕಚೇರಿ ಮುಂದೆಯೇ ತನ್ನ ಹೊಟ್ಟೆಗೆ ತಾನೇ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ‌ ರೈತ..!

ಚಿಕ್ಕಪ್ಪಾ… ಎನ್ನುತ್ತಲೇ ಪ್ರೀತಿಯಿಂದ ತಬ್ಬಿಕೊಳ್ಳಲು ಕೈಚಾಚಿದ 5 ವರ್ಷದ ಮಗಳ ಕತ್ತನ್ನೇ ಕೊಯ್ದುಬಿಟ್ಟ! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + thirteen =
Remember me
