ಹಾಸನ:ಕರೊನಾ ಲಾಕ್​ಡೌನ್​ನಿಂದ ಮದ್ಯವಿಲ್ಲದೇ ಬರೋಬ್ಬರಿ ಒಂದೂವರೆ ತಿಂಗಳು ಪರದಾಡಿದ್ದ ಕುಡುಕರಿಗೆ ಇದೀಗ ವೈನ್​ ಶಾಪ್​ ಓಪನ್​ ಆಗಿರುವುದು ಸಾಯುವ ಜೀವಕ್ಕೆ ಅಮೃತ ಬಿಟ್ಟಂತಾಗಿದೆ. ಸರ್ಕಾರ ಮದ್ಯದ ತೆರಿಗೆ ಹೆಚ್ಚಿಸಿದರೂ ಸಹ ಮದ್ಯ ಪ್ರಿಯರು ಮಾತ್ರ ಎಣ್ಣೆ ನಶೆಯಲ್ಲಿ ತೇಲಾಡುತ್ತಿದ್ದಾರೆ. ಕೆಲಸವಿಲ್ಲದಿದ್ದರೂ ಎಣ್ಣೆ ಅಂಗಡಿಗಳು ಮಾತ್ರ ಫುಲ್​ ಬಿಜಿಯಾಗಿದೆ.
ವಿಪರ್ಯಾಸವೆಂದರೆ ಮದ್ಯಕ್ಕೆ ಜೋತುಬಿದ್ದಿರುವ ವ್ಯಕ್ತಿಯೊಬ್ಬ ಕುಡಿಯಲು ಹಣವಿಲ್ಲದೇ‌ ಮನೆಯಲ್ಲಿದ್ದ ಟಿವಿ ಮಾರಲು ಹೊರಟಂತಹ ಘಟನೆ ಹಾಸನದಲ್ಲಿ ಶುಕ್ರವಾರ ನಡೆದಿದೆ.
ಇದನ್ನೂ ಓದಿ:VIDEO| ನಮಗೆ ಇಲ್ಲಿರಲು ಆಗುತ್ತಿಲ್ಲ, ದಯಮಾಡಿ ನಮ್ಮನ್ನು ರಕ್ಷಿಸಿ ಎಂದು ವಿದ್ಯಾರ್ಥಿನಿಯರ ಅಳಲು
ನಗರದ ವಲ್ಲಭಾಯಿ ರಸ್ತೆಯ ನಾಗರಾಜ್ ಎಂಬಾತ ಟಿವಿ ಮಾರಲು ಹೋಗುತ್ತಿದ್ದಾಗ ದಾರಿಹೋಕರು ಪ್ರಶ್ನಿಸಿದ ವೇಳೆ‌ ನಿಜಾಂಶ ಬಾಯಿಬಿಟ್ಟಿದ್ದಾನೆ. ಲಾಕ್​ಡೌನ್​ನಿಂದ ಕೆಲಸವಿಲ್ಲ, ಸಂಬಳವಿಲ್ಲ, ಮದ್ಯ ಸೇವಿಸಲು ಹಣವಿಲ್ಲ, ಹೀಗಾಗಿ ಟಿವಿ ಮಾರಲು ಹೊಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ.(ದಿಗ್ವಿಜಯ ನ್ಯೂಸ್​)
https://www.facebook.com/VVani4U/videos/593573544847042/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
