ಹಾಸನ:ನಗರದ ಕುವೆಂಪುನಗರ ಬಡಾವಣೆಯ ಡಿಟಿಡಿಸಿ ಕೊರಿಯರ್​ ಅಂಗಡಿಯಲ್ಲಿ ಕಳೆದ ಸೋಮವಾರ ಸಂಜೆ ನಡೆದಿದ್ದ ಮಿಕ್ಸರ್​ ಗ್ರೈಂಡರ್​ ಸ್ಫೋಟ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ವಿಚ್ಛೇದಿತ ಮಹಿಳೆ ಮೇಲಿನ ಪ್ರೀತಿಗಾಗಿ ಹಾಗೂ ಆಕೆಯಿಂದಾದ ಮೋಸಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಪಾಗಲ್​ ಪ್ರೇಮಿಯೊಬ್ಬ ಮಾಡಿದ ಅವಾಂತರಕ್ಕೆ ಅಮಾಯಕ ಕುಟುಂಬ ಕಣ್ಣೀರು ಹಾಕುತ್ತಿದೆ. ಪಾಗಲ್​ ಪ್ರೇಮಿ ಮತ್ತು ಆತನನ್ನು ವಂಚಿಸಿದ್ದ ಮಹಿಳೆ ಇಬ್ಬರೂ ಈಗ ಪೊಲೀಸರ ವಶದಲ್ಲಿದ್ದಾರೆ.
ವಿಚ್ಛೇದಿತ ಮಹಿಳೆ ಕೇಂದ್ರಬಿಂದು:ಹಾಸನದ ಕುವೆಂಪುನಗರ ಬಡಾವಣೆಯ 41 ವರ್ಷ ವಯಸ್ಸಿನ ವಿಚ್ಛೇದಿತ ಮಹಿಳೆ ಈ ದುರಂತ ಪ್ರಕರಣದ ಕೇಂದ್ರಬಿಂದು. ಈಕೆ ವರಾನ್ವೇಷಣೆಗಾಗಿ ಮ್ಯಾಟ್ರಿಮೋನಿ ವೆಬ್​ಸೈಟ್​ವೊಂದರಲ್ಲಿ ತನ್ನ ಫೋಟೊ ಮತ್ತು ವಿವರ ಪ್ರಕಟಿಸಿದ್ದಳು. ಇದನ್ನು ಗಮನಿಸಿದ ಮೂಲತಃ ಮಂಡ್ಯ ಜಿಲ್ಲೆಯ, ಹಾಲಿ ಬೆಂಗಳೂರಿನಲ್ಲಿ ವಾಸವಾಗಿರುವ ಅನೂಪ್​ಕುಮಾರ್​, ಮಹಿಳೆಯನ್ನು ಮೆಚ್ಚಿಕೊಂಡು ಮದುವೆ ಪ್ರಸ್ತಾಪ ಮುಂದಿಟ್ಟಿದ್ದ. ಈ ಪ್ರಸ್ತಾಪಕ್ಕೆ ಮೊದಲು ಒಪ್ಪಿಗೆ ಸೂಚಿಸಿ ಆತನೊಂದಿಗೆ ಕೆಲ ದಿನಗಳ ಕಾಲ ಪ್ರೀತಿಯಿಂದ ಓಡಾಡಿದ್ದಳು.
ವಿವಿಧ ಕಾರಣ ಹೇಳಿಕೊಂಡು ಅನೂಪ್​ ಕುಮಾರ್​ನಿಂದ ಲಕ್ಷಾಂತರ ರೂ. ವಸೂಲಿ ಮಾಡಿದ್ದಳು. ಆದರೆ ಕೆಲವೇ ದಿನಗಳಲ್ಲಿ ಅನೂಪ್​ನ ಪ್ರೀತಿ ಮತ್ತು ಮದುವೆ ಪ್ರಸ್ತಾಪ ನಿರಾಕರಿಸಿ ದೂರವಾಗಿದ್ದಳು ಎನ್ನಲಾಗಿದೆ. ಇದರಿಂದ ತೀವ್ರ ಹತಾಶೆಗೆ ಒಳಗಾದ ಅನೂಪ್​ಕುಮಾರ್​, ತಾನು ಕೊಟ್ಟಿದ್ದ ಹಣ ವಾಪಸ್​ ಕೇಳಿದಾಗ ಮಹಿಳೆ ಏನೇನೊ ನೆಪ ಹೇಳಿ ನುಣಚಿಕೊಂಡಿದ್ದಳು. ಈ ನಡುವೆ ಹಾಸನಕ್ಕೂ ಬಂದ ಅನೂಪ್​ ಕುಮಾರ್​, ಮಹಿಳೆಯ ಮನೆ ಎದುರು ಗಲಾಟೆ ಮಾಡಿದ್ದ. ಆತನ ವಿರುದ್ಧ ಪೊಲೀಸ್​ ಠಾಣೆ ಮತ್ತು ರಾಜ್ಯ ಮಹಿಳಾ ಆಯೋಗಕ್ಕೂ ಮಹಿಳೆ ದೂರು ನೀಡಿದ್ದಳು. ಇದು ಅನೂಪ್​ನನ್ನು ಮತ್ತಷ್ಟು ಕೆರಳಿಸಿತ್ತು. ತನಗೆ ಮೋಸ ಮಾಡಿದವಳಿಗೆ ಒಂದು ಗತಿ ಕಾಣಿಸಲೇಬೇಕೆಂದು ನಿರ್ಧರಿಸಿದ.
ವಿಚ್ಛೇದಿತ ಮಹಿಳೆಗೆ ಮೊದಲು ಸೀರೆ ಕೊರಿಯರ್​ ಮಾಡಿದ ಅನೂಪ್​, ಎರಡನೇ ಬಾರಿ ಎಲ್​ಇಡಿ ಬಲ್ಬ್​ಗಳ ಸೀರಿಯಲ್​ ಸೆಟ್​ ಕಳುಹಿಸಿದ್ದ. ಪಾರ್ಸೆಲ್​ನಲ್ಲಿ ವಸ್ತುಗಳ ಜತೆಗೆ ಹಣವನ್ನೂ ಇಟ್ಟು ಕಳುಹಿಸಿದ್ದ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಮೂರನೇ ಬಾರಿಗೆ ಮಿಕ್ಸರ್​ ಗ್ರೈಂಡರ್​ನಲ್ಲಿ ಡಿಟೋನೇಟರ್​ ಇಟ್ಟು ಕಳಿಸಿದ್ದ. ಆಕೆ ಸಾಯಬೇಕು, ಇಲ್ಲವೇ ಆಕೆಯ ಸೌಂದರ್ಯ ವಿರೂಪಗೊಳ್ಳಬೇಕು ಎಂಬುದು ಆತನ ಉದ್ದೇಶವಾಗಿತ್ತು.
ಬೆಂಗಳೂರಿನ ಪೀಣ್ಯ ಶಾಖೆ ನಾಗಸಂದ್ರದಿಂದ ಕಳುಹಿಸಿದವರ ವಿಳಾಸ ಇಲ್ಲದ ರೊಸಾರಿಯೊ ಗ್ರೈಂಡರ್​ ಹೆಸರಿನ ಮಿಕ್ಸರ್​ ಗ್ರೈಂಡರ್​ ಬಾಕ್ಸ್​ ಹಾಸನದ ಮಹಿಳೆಯ ಮನೆ ವಿಳಾಸ ಹೊತ್ತು ಡಿ.17ರಂದು ಹಾಸನದ ಡಿಟಿಡಿಸಿ ಅಂಗಡಿಗೆ ಬಂದಿದ್ದು, ಅದೇ ದಿನ ಡೆಲಿವರಿ ಬಾಯ್​ ಮಹಿಳೆಯ ಮನೆಗೆ ಕೊಟ್ಟು ಬಂದಿದ್ದ.
ವಿಡಿಯೋ ಮಾಡಿಕೊಂಡಿದ್ದಳು:ಕಳುಹಿಸಿರುವವರ ವಿಳಾಸ ಇಲ್ಲದೆ ಬಂದಿದ್ದ ಮೊದಲ ಎರಡು ಪಾರ್ಸೆಲ್​ಗಳನ್ನು ಸ್ವೀಕರಿಸಿದ್ದ ಮಹಿಳೆ ಅವುಗಳನ್ನು ತೆರೆಯುವ ಸಂದರ್ಭದಲ್ಲಿ ವಿಡಿಯೋ ರೆಕಾರ್ಡ್​ ಮಾಡಿಕೊಂಡಿದ್ದಳು. ಅದೇ ರೀತಿ ಮೂರನೇ ಬಾರಿ ಬಂದಿದ್ದ ಮಿಕ್ಸರ್​ ಗ್ರೈಂಡರ್​ ಬಾಕ್ಸ್​ ತೆರೆದು ವಿಡಿಯೋ ಮಾಡಿಕೊಂಡಿದ್ದಳು. ಆದರೆ ಮಿಕ್ಸರ್ ಗ್ರೈಂಡರ್​ ಬಳಸುವ ಸಾಹಸಕ್ಕೆ ಹೋಗಿರಲಿಲ್ಲ. ಒಂದು ವಾರ ಮಿಕ್ಸರ್​ ಗ್ರೈಂಡರ್​ರನ್ನು ಬಾಕ್ಸ್​ ಸಹಿತ ಹಾಗೇ ಇಟ್ಟಿದ್ದ ಮಹಿಳೆಯು ಡಿ.26ರಂದು ಡಿಟಿಡಿಸಿ ಕೊರಿಯರ್​ ಅಂಗಡಿಗೆ ಬಂದು “ಈ ಕೊರಿಯರ್​ ನನಗೆ ಬೇಡ ವಾಪಸ್​ ಕಳುಹಿಸಿ” ಎಂದು ಹಿಂದಿರುಗಿಸಿದ್ದಳು. ವಾಪಸ್​ ಕಳುಹಿಸಲು 300 ರೂ. ಶುಲ್ಕ ಕೇಳಿದ್ದಕ್ಕೆ, “ನನ್ನ ಬಳಿ ಹಣ ಇಲ್ಲ, ಏನಾದರೂ ಮಾಡಿಕೊಳ್ಳಿ” ಎಂದು ಮಿಕ್ಸಿಯನ್ನು ಅಲ್ಲೇ ಬಿಟ್ಟು ಹೋಗಿದ್ದಳು.
ಶಶಿಯ ದುರಂತ:ತುಂಬು ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ತರಾತುರಿಯಲ್ಲಿದ್ದ ಕೊರಿಯರ್​ ಅಂಗಡಿ ಮಾಲೀಕ ಶಶಿಕುಮಾರ್​, ಕೊರಿಯರ್​ ಬಾಕ್ಸ್​ ಎತ್ತಿಡಲು ಹೋದಾಗ ಬಾಕ್ಸ್​ ಮೊದಲೇ ತೆರೆದಿದ್ದ ಕಾರಣ ಮಿಕ್ಸರ್​ ಗ್ರೈಂಡರ್​ ಜಾರಿ ಕೆಳಗೆ ಬಿದ್ದು ಸ್ಫೋಟಗೊಂಡಿದೆ. ಇದರಿಂದ ಶಶಿಕುಮಾರ್​ನ ಬಲಗೈನ ಎರಡು ಬೆರಳುಗಳು ಸಂಪೂರ್ಣ ಪುಡಿ ಆಗಿವೆ. ಯಾರದೋ ತಪ್ಪು, ಯಾರದೋ ದ್ವೇಷಕ್ಕೆ ಅಮಾಯಕ ಶಶಿಕುಮಾರ್​ ತೀವ್ರವಾಗಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ.
“ವಯಸ್ಸಾದ ತಂದೆ ಅನಾರೋಗ್ಯದಿಂದ ಮನೆಯಲ್ಲಿ ನರಳುತ್ತಿದ್ದಾರೆ. ಪತ್ನಿ ಮಂಗಳವಾರ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಅವುಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ. ಕೊರಿಯರ್​ ಅಂಗಡಿಗೆ ಹಾಕಿದ್ದ ಲಕ್ಷಾಂತರ ರೂ. ಬಂಡವಾಳ ಹಾಳಾಗಿದೆ. ಯಾರೋ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವ ನನಗೆ ನ್ಯಾಯ ಕೊಡುವವರು ಯಾರು?” ಎಂದು ಶಶಿಕುಮಾರ್​ ಕಣ್ಣೀರಿಟ್ಟಿದ್ದಾರೆ.
ಬೆಂಗ್ಳೂರಲ್ಲಿ ಕಿಡ್ನ್ಯಾಪ್​, ಚಿಕ್ಕಬಳ್ಳಾಪುರದಲ್ಲಿ ಕೊಲೆ, ಚಾರ್ಮಾಡಿಘಾಟ್​ನಲ್ಲಿ ಶವ! ಕರವೇ ಅಧ್ಯಕ್ಷ ಸೇರಿ ಐವರ ಬಂಧನ, 9 ತಿಂಗಳ ಬಳಿಕ ರಹಸ್ಯ ಬಯಲಾಗಿದ್ದೇ ರೋಚಕ
ಒಲ್ಲೆ ಎಂದ್ರೂ ಅಕ್ರಮ ಸಂಬಂಧ ಮುಂದುವರಿಸಲು ಪೀಡಿಸುತ್ತಿದ್ದ ಮಹಿಳೆ! ಕಾಟ ಸಹಿಸಲಾಗದೆ ಕನಕಪುರದಲ್ಲಿ ನಡೆದೇ ಹೋಯ್ತು ಘೋರ ದುರಂತ
ಟಾಪ್​ಲೆಸ್​ ಆಗಿ ಬಂದ ಉರ್ಫಿ! ತಿಂಡಿ ಪ್ಲೇಟ್​-ಜ್ಯೂಸ್​ ಗ್ಲಾಸ್​ ಹಿಡಿದು ಮೈಮಾಟ ಪ್ರದರ್ಶಿಸುತ್ತಾ ಬ್ರೇಕ್​ಫಾಸ್ಟ್​ ಎಂದ ನಟಿ… ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 12 =
Remember me
