ಬೆಂಗಳೂರು:ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು 35 ದಿನಗಳ ಬಳಿಕ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಅಧಿಕಾರಿಗಳು ಬಂಧಿಸಿದರು.
ಇದನ್ನೂ ಓದಿ:ಟಿ-20 ವಿಶ್ವಕಪ್: ಸ್ಟಾರ್ ಕ್ರಿಕೆಟಿಗನಿಗೆ ವೀಸಾ ನಿರಾಕರಿಸಿದ ಅಮೆರಿಕ..! ಕಾರಣ ಹೀಗಿದೆ..
ಭಾರತೀಯ ಕಾಲಮಾನ ಪ್ರಕಾರ ಇಂದು ಸಂಜೆ 4.09 ಕ್ಕೆ ಜರ್ಮನಿಯ ಮ್ಯೂನಿಕ್‌ಮಿಂದ ಹೊರಟಿದ್ದ ವಿಮಾನದಲ್ಲಿ ಪ್ರಜ್ವಲ್ ರೇವಣ್ಣ ಹತ್ತಿರೋದು ಖಚಿತವಾಗಿತ್ತು. ಲುಫ್ತಾನ್ಸ್‌ ಏರ್‌ಲೈನ್ಸ್‌ನ LH764 ವಿಮಾನದ ಬ್ಯುಸಿನೆಸ್​​ ಕ್ಲಾಸ್‌ನಲ್ಲಿ ಪ್ರಜ್ವಲ್‌ ಪ್ರಯಾಣಿಸಿದ್ದು ಮಧ್ಯರಾತ್ರಿ 12.51ರ ಸುಮಾರಿಗೆ ಬೆಂಗಳೂರಿನಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆಆಗಮಿಸಿದ್ದಾರೆ.
ಕೆಐಎಬಿಗೆ ಬರುತ್ತಿದ್ದಂತೆ ಪ್ರಜ್ವಲ್ ರನ್ನು ಇಮಿಗ್ರೇಷನ್ ಅಧಿಕಾರಿಗಳ ಬಳಿ ಕರೆತಂದ CISF ಸಿಬ್ಬಂದಿ ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆ ಮತ್ತು ಸಿಐಎಸ್​ಎಫ್ ಯೋಧರು. ಬಳಿಕ ಇಮಿಗ್ರೇಷನ್ ಅಧಿಕಾರಿಗಳಿಂದ ರಾಜತಾಂತ್ರಿಕ ಪಾಸ್‌ಪೋರ್ಟ್‌ ಸೇರಿ ಕೆಲ ದಾಖಲಾತಿಗಳ ಪರಿಶೀಲನೆ ನಡೆಸಿ ಎಸ್​ಐಟಿ ಅಧಿಕಾರಿಗಳಿಗೆ ಒಪ್ಪಿಸಿದರು.
ಪ್ರಜ್ವಲ್ ರನ್ನು ಕರೆತರುವ ಹಿನ್ನಲೆಯಲ್ಲಿ ಏರ್ ಪೋರ್ಟ್ ರಸ್ತೆಯ ಗಂಗೇನಹಳ್ಳಿ, ಮೇಖ್ರಿ ಸರ್ಕಲ್, ಗುಟ್ಟಹಳ್ಳಿ ಹಾಗೂ ಹೈಗ್ರೌಂಡ್ಸ್ ಬಳಿ ಹೊಯ್ಸಳ ಪೊಲೀಸ್ ವಾಹನಗಳ ಗಸ್ತು ಹೆಚ್ಚಿಸಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಿಐಡಿ ಕಚೇರಿ ಬಳಿ ಪೊಲೀಸ್ ಬಂದೋಬಸ್ತ್‌ ಒದಗಿಸಲಾಗಿದ್ದು, 2 ಕೆಎಸ್​​ಆರ್​ಪಿ ತುಕಡಿ, 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸಿಐಡಿ ಕಚೇರಿ ಮುಂದೆ ಬ್ಯಾರಿಕೇಡ್ ಹಾಕಲಾಗಿದೆ.
ಟಿ-20 ವಿಶ್ವಕಪ್: ಸ್ಟಾರ್ ಕ್ರಿಕೆಟಿಗನಿಗೆ ವೀಸಾ ನಿರಾಕರಿಸಿದ ಅಮೆರಿಕ..! ಕಾರಣ ಹೀಗಿದೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
