ಹಾಸನ:ಯುವತಿಯೊಬ್ಬಳ ಶವ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದ್ದು, ಆಕೆಯ ಪ್ರಿಯಕರ ಕೊಲೆ ಮಾಡಿ ಹೂತು ಹಾಕಿದ್ದಾನೆ ಎಂದು ಮೃತಳ ಪಾಲಕರು ಆರೋಪ ಮಾಡಿದ್ದಾರೆ.
ಕಾವ್ಯ (25) ಮೃತಪಟ್ಟ ಯುವತಿ. ಈ ಘಟನೆ ಹೊಳೆನರಸೀಪುರ ತಾಲ್ಲೂಕಿನ ಪಾರಸನಹಳ್ಳಿಯಲ್ಲಿ ನಡೆದಿದೆ. ಕಾವ್ಯ ಪ್ರಿಯಕರ ಅವಿನಾಶ್ ವಿರುದ್ಧ ಆಕೆಯ ಪಾಲಕರು ಕೊಲೆ ಆರೋಪ ಮಾಡಿದ್ದು, ಪ್ರಕರಣ ದಾಖಲಾಗಿದೆ. ಇದೀಗ ತಹಸಿಲ್ದಾರ್ ಕೃಷ್ಣಮೂರ್ತಿ ಸಮ್ಮುಖದಲ್ಲಿ ಪ್ರಿಯಕರನ ಎದರೇ ಕಾವ್ಯಾಳ ಶವವನ್ನು ಪೊಲೀಸರು ಹೊರಗೆ ತೆಗೆಸಿದ್ದಾರೆ.
ಬಿಬಿಎಂ ಓದಿದ್ದ ಕಾವ್ಯ ಓರ್ವ ವ್ಯಕ್ತಿಯನ್ನು ಪ್ರೀತಿಸಿ ಮೊದಲ ವಿವಾಹ ಆಗಿದ್ದಳು. ಆದರೆ, ಸಂಸಾರದಲ್ಲಿ ಹೊಂದಾಣಿಕೆ ಬಾರದ ಕಾರಣ ಗಂಡನನ್ನು ಬಿಟ್ಟು ಬಂದಿದ್ದಳು. ಇದಾದ ಬಳಿಕ ಪಾರಸನಹಳ್ಳಿಯ ಅವಿನಾಶ್‌ನನ್ನು ಪ್ರೀತಿಸಿ ಆತನ ಮನೆಯಲ್ಲಿದ್ದಳು. ಆದರೆ, ಕಳೆದ ಹದಿನೈದು ದಿನಗಳಿಂದ ಕಾವ್ಯಾ ನಾಪತ್ತೆಯಾಗಿದ್ದು, ಆಕೆಯ ಪಾಲಕರು ದೂರು ನೀಡಿದ್ದರು. ಪೊಲೀಸರ ತನಿಖೆಯ ಬಳಿಕೆ ಆಕೆಯ ಶವ ಅವಿನಾಶ್​ಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದೆ.
ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಅದನ್ನು ಹೊರತೆಗೆಯಲಾಗಿದೆ. ಅವಿನಾಶ್​ ಕೊಲೆ ಮಾಡಿ ಹೂತಿಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ರಿಷಭ್​ ಶೆಟ್ಟಿ ಕಂಡರೆ ಹೊಟ್ಟೆಕಿಚ್ಚಂತೆ! ಕಾಂತಾರ ಯಶಸ್ಸಿನ ಬಗ್ಗೆ ನವಾಜುದ್ದೀನ್​ ಸಿದ್ದಿಖಿ ಆಡಿದ ಮಾತುಗಳಿವು…

ಖದೀಮರ ಕೈಚಳಕ ಕಂಡು ಪೊಲೀಸರೇ ಶಾಕ್! ಈ ಖತರ್ನಾಕ್ ಗ್ಯಾಂಗ್ ಕಳ್ಳತನಕ್ಕಿಳಿದ್ರೆ ಮಿಸ್ ಆಗೋ ಚಾನ್ಸೇ ಇಲ್ಲ

ಆ ಮಹಿಳೆ ಹೋದ ಬಳಿಕ ರೂಮಿನಲ್ಲಿ ಹೆಣ ಪತ್ತೆ! ಮಂಗಳೂರಿನ ಲಾಡ್ಜ್​ನಲ್ಲಿ ಅನುಮಾನಾಸ್ಪದ ಸಾವು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
