ಹಾಸನ:ಹಾಸನದ ಆರ್​ಸಿ ರಸ್ತೆಯಲ್ಲಿ ನಡೆಯುತ್ತಿದ್ದ ಪ್ಯಾಚ್​ ವರ್ಕ್​ಗೆ ಸಂಸದ ಪ್ರಜ್ವಲ್​ ರೇವಣ್ಣ ತಡೆ ನೀಡಿದ್ದು, ಚೆನ್ನಾಗಿರುವ ರಸ್ತೆಗೆ ಪ್ಯಾಚ್​ ವರ್ಕ್​ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಹಾಸನದಲ್ಲಿ ಸಂಸದರ ನಿವಾಸದ ಮುಂದಿರುವ ರಸ್ತೆಯಲ್ಲಿದ್ದ ಸ್ಪೀಟ್​ ಬ್ರೇಕ್​ ಅನ್ನು ರಾತ್ರೋರಾತ್ರಿ ಕಿತ್ತು ಹಾಕಿ ಸುಮಾರು 30 ಮೀಟರ್ ಮಾತ್ರ ಹೊಸ ರಸ್ತೆ ನಿರ್ಮಾಣ ಮಾಡಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿರುವ ಪ್ರಜ್ವಲ್​ ರೇವಣ್ಣ, ಯಾರ ಗಮನಕ್ಕೂ ತಿಳಿಸದೆ ಚೆನ್ನಾಗಿದ್ದ ರಸ್ತೆಯನ್ನು ಕಿತ್ತು ಕಾಮಗಾರಿ ಮಾಡುತ್ತಿದ್ದಾರೆಂದು ದೂರಿದ್ದಾರೆ. ಯಾವುದೇ ಅಧಿಕಾರಿಗಳನ್ನು ಕೇಳಿದರೆ, ನಮಗೆ ಮಾಹಿತಿ ಇಲ್ಲ ಎಂದು ಹೇಳುತ್ತಿದ್ದಾರೆ. ರಾಜಕೀಯ ದುರುದ್ದೇಶದಿಂದಲೇ ಈ ರೀತಿ ಮಾಡುತ್ತಿದ್ದಾರೆಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:ಪಬ್​ಜಿ ಪ್ರೇಮಿಗಳಿಗೆ ಶುಭಸುದ್ದಿ; ಮತ್ತೆ ಬರಲಿದೆ ನಿಮ್ಮ ಫೇವರೆಟ್​ ಗೇಮ್​
ರಾತ್ರೋರಾತ್ರಿ ಬರುತ್ತಾರೆ. ಎಲ್ಲೆಂದರಲ್ಲಿ ರಸ್ತೆಯನ್ನು ಕಿತ್ತು ಪ್ಯಾಚ್​ ಹಾಕ್ತಾರೆ. ಯಾವುದೋ ಹಿಂದಿನ ಅನುದಾನ ಆಗಿರುವುದನ್ನು ತೋರಿಸುತ್ತಾರೆ. ಈ ಬಗ್ಗೆ ಪ್ರಶ್ನಿಸಿದವರಿಗೆ ಧಮ್ಕಿ ಹಾಕುತ್ತಾರೆಂದು ಗುಡುಗಿದರು.
ಸಂಸದರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಪ್ಯಾಚ್​ ವರ್ಕ್​ ಮಾಡುತ್ತಿದ್ದ ಕಾರ್ಮಿಕರು ಕಾಮಗಾರಿಯನ್ನು ನಡುವಲ್ಲೇ ಬಿಟ್ಟು ಪರಾರಿಯಾಗಿದ ಪ್ರಸಂಗವೂ ಜರುಗಿತು. ಹಾಸನದ ಸಂಸದರ ನಿವಾಸ ಹಾಗೂ ಹಾಸನ ಹಿಮ್ಸ್ ನಡುವೆ ಇರುವ ಆರ್​ ರಸ್ತೆಯಲ್ಲಿ ಕೆಲಕಾಲ ಗಲಿಬಿಲಿ ವಾತಾವರಣ ಉಂಟಾಯಿತು.
ಬಳಿಕ ಸಂಸದರ ಕರೆಯಂತೆ ಸ್ಥಳಕ್ಕೆ ಹಾಸನ ಎಡಿಸಿ ಕವಿತಾ ರಾಜಾರಾಮ್ ಭೇಟಿ ನೀಡಿ ಪರಿಶೀಲಿಸಿದರು.(ದಿಗ್ವಿಜಯ ನ್ಯೂಸ್​)
ಮೋಸದ ದುಡ್ಡು-ಹೆಲಿಕಾಪ್ಟರ್​ನಲ್ಲಿ ಯಾತ್ರೆ! ಪದವಿ ಮುಗಿಸಿದ ಯುವಕರೇ ಮಿಸ್​ಮಾಡ್ದೆ ಇದನ್ನು ಓದಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
