ಹಾಸನ:ಪ್ರೀತಿಯನ್ನು ನಿರಾಕರಿಸಿದ್ದ ಯುವತಿಯನ್ನು ಪಾಗಲ್​ ಪ್ರೇಮಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಇದೀಗ ಮತ್ತೊಂದು ತಿರುವು ಕಾಣಿಸಿಕೊಂಡಿದೆ. ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ:ಪ್ರೀತಿ ನಿರಾಕರಿಸಿದ ಯುವತಿಯನ್ನು ನಡುರಸ್ತೆಯಲ್ಲಿ ಮಚ್ಚಿನಿಂದ ಕೊಚ್ಚಿ ಕೊಂದ ಪಾಗಲ್​ ಪ್ರೇಮಿ
ಸಕಲೇಶಪುರ ತಾಲೂಕಿನ ಸಿದ್ದಾಪುರ ಗ್ರಾಮದ ಹೇಮಂತ್​(25) ಹೆಸರಿನ ಯುವಕ ಸುಶ್ಮಿತಾ (21)ಳನ್ನು ಪ್ರೀತಿಸುತ್ತಿದ್ದ. ಆಕೆ ಪ್ರೀತಿಗೆ ಒಪ್ಪದ ಹಿನ್ನೆಲೆಯಲ್ಲಿ ಇಂದು ನಡುರಸ್ತೆಯಲ್ಲಿ ಆಕೆಯ ಮೇಲೆ ಮಚ್ಚಿನಿಂದ ದಾಳಿ ಮಾಡಿದ್ದಾನೆ. ತೀವ್ರ ರಕ್ತಸ್ತ್ರಾವದಿಂದ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಅದಾದ ಮೇಲೆ ಹೇಮಂತ್​ ಕಾಫಿ ತೋಟದ ಮರವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ:ಕೆಲಸದಿಂದ ತೆಗೆದು ಹಾಕಿದ್ರೆ ಜೀವನ ನಿರ್ವಹಣೆ ಕಷ್ಟ; ರಾಜ್ಯ ಖಾಸಗಿ ಶಿಕ್ಷಕರ ಬಳಗದ ಸದಸ್ಯರ ಆಕ್ರೋಶ
ನೇಣಿಗೆ ಶರಣಾಗುವುದಕ್ಕೂ ಮೊದಲು ಆತ, ಪ್ರಿಯತಮೆಯನ್ನು ಕೊಲೆ ಮಾಡಿ ಬಂದವನೆ ನೇರವಾಗಿ ಗ್ರಾಮದ ಕೆರೆಗೆ ಹೋಗಿ ಹಾರಿದ್ದಾನೆ. ಆ ಸಮಯದಲ್ಲಿ ಕರೆ ಪಕ್ಕದಲ್ಲಿ ಮೃತ ಯುವತಿಯ ಚಿಕ್ಕಪ್ಪ ಜಮೀನು ಕೆಲಸ ಮಾಡುತ್ತಿದ್ದ, ಹೇಮಂತ್​ನ ರಕ್ಷಣೆಗೆ ಓಡು ಬಂದಿದ್ದಾರೆ. ಆತನನ್ನು ನೀರಿನಿಂದ ಮೇಲತ್ತಿ ಜೀವ ರಕ್ಷಿಸಲಾಗಿತ್ತು. ಅದಾದ ನಂತರ ಆತ ತನ್ನ ಅಣ್ಣನ ಮಗಳನ್ನೇ ಕೊಲೆ ಮಾಡಿರುವ ವಿಚಾರ ತಿಳಿದು ಚಿಕ್ಕಪ್ಪ ಅಘಾತಕ್ಕೆ ಒಳಗಾಗಿದ್ದರು. (ದಿಗ್ವಿಜಯ ನ್ಯೂಸ್​)
ನಾವಲ್ಲ, ಅಕ್ಕನೇ ತಂಗಿಯನ್ನ ಕೊಂದಿದ್ದು! ಆಮೇಲೆ ನನ್ನನ್ನೂ ಕೊಂದುಬಿಡಿ ಎಂದು ಬೇಡಿಕೊಂಡಳು!

ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − three =
Remember me
