ಹಾಸನ:ಗಂಡನಿಂದ ಪರಿತ್ಯಕ್ತಳಾಗಿ ತವರು ಸೇರಿದ್ದ ತನ್ನ ಸಹೋದರಿಯನ್ನು ಮನೆಯಿಂದ ಹೊರ ಹಾಕುವಂತೆ ಕಿರುಕುಳ ನೀಡುತ್ತಿದ್ದ ಪತ್ನಿಯನ್ನು ಕೊಲೆಗೈದು ಪತಿಯು ಆತ್ಮಹತ್ಯೆಗೆ ಶರಣಾಗಿದ್ದಾನೆ.
ತಾಲೂಕಿನ ಶಾಂತಿಗ್ರಾಮ ನಿವಾಸಿ ತುಳಸಿದಾಸ್ (35) ಪತ್ನಿ ಅನ್ನಪೂರ್ಣ (27) ಮೃತರು. ಗ್ರಾಮದ ಎಟಿಎಂನಲ್ಲಿ ಸೆಕ್ಯುರೆಟಿಯಾಗಿ ಕೆಲಸ ಮಾಡಿಕೊಂಡಿದ್ದ ತುಳಸಿದಾಸ್ ಮೂರು ತಿಂಗಳ ಹಿಂದಷ್ಟೇ ಮೈಸೂರು ಮೂಲದ ಅನ್ನಪೂರ್ಣ ಅವರನ್ನು ಮದುವೆಯಾಗಿದ್ದ.
ಗಂಡನಿಂದ ಪರಿತ್ಯಕ್ತಳಾದ ಸಹೋದರಿಯನ್ನು ಮನೆಯಿಂದ ಕಳುಹಿಸಬೇಕೆಂದು ಅನ್ನಪೂರ್ಣ ನಿತ್ಯ ಜಗಳ ಮಾಡುತ್ತಿದ್ದಳು ಎನ್ನಲಾಗಿದೆ. ಈ ವಿಚಾರವಾಗಿ ನೊಂದಿದ್ದ ತುಳಸಿದಾಸ್ ಪತ್ನಿಯನ್ನು ಕೊಲೆ ಮಾಡುವ ಜತೆಗೆ ತಾನೂ ನೇಣಿಗೆ ಶರಣಾಗಿದ್ದಾನೆ.
ಗುರುವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ದಂಪತಿಗಳಿಬ್ಬರೂ ಎಳನೀರು ಕುಡಿದು ಜಮೀನು ಕಡೆಗೆ ತೆರಳಿದ್ದಾರೆ. ಶಾಂತಿಗ್ರಾಮದಿಂದ ಮೂರು ಕಿ.ಮೀ. ದೂರದ ಹೊಂಗೆರೆ ರಸ್ತೆಯಲ್ಲಿರುವ ಜಮೀನಿಗೆ ಪತ್ನಿಯನ್ನು ಕೊರೆದೊಯ್ದ ತುಳಸಿದಾಸ್ ಕೈಯಲ್ಲಿದ್ದ ಚಾಕುವಿನಿಂದ ಚುಚ್ಚು ಕೊಲೆ ಮಾಡಿದ್ದಾನೆ. ನಂತರ ಸಮೀಪದ ಮರಕ್ಕೆ ತಾನು ನೇಣು ಹಾಕಿಕೊಂಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಪುಟ್ಟಸ್ವಾಮಿಗೌಡ, ಪಿಎಸ್‌ಐ ಕಾವ್ಯಶ್ರೀ ಪರಿಶೀಲನೆ ನಡೆಸಿದರು. ಶಾಂತಿಗ್ರಾಮ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
