ಹಾಸನ:ರಾಜ್ಯದಲ್ಲಿ ಸರ್ಕಾರಿ ಸಾರಿಗೆ ನೌಕರರ ಪ್ರತಿಭಟನೆ ಏಳನೇ ದಿನಕ್ಕೆ ‌ಕಾಲಿಟ್ಟಿದ್ದು, ಮತ್ತಿಬ್ಬರು ಸಾರಿಗೆ ನೌಕರರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಹಾಸನದ ಕೆ.ಆರ್. ಪುರಂನಲ್ಲಿ ಸಾರಿಗೆ ಬಸ್ ಅಡ್ಡಲಾಗಿ ಮಲಗಿದ ನೌಕರ ನಾರಾಯಣಗೌಡ ಆತ್ಮಹತ್ಯೆಗೆ ಯತ್ನಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ನೌಕರನನ್ನು ಠಾಣೆಗೆ ಕರೆದೊಯ್ದರು.
ಠಾಣೆಯಲ್ಲೂ ಸಾವಿನ ನಿರ್ಧಾರದಿಂದ ಹೊರಬರದ ನಾರಾಯಣಗೌಡ, ಸೆಲ್​ನ ಕಬ್ಬಿಣದ ಸರಳಿಗೆ ತಲೆ ಚಚ್ಚಿಕೊಂಡರು. ಈ ವೇಳೆ ತೀವ್ರ ರಕ್ತಸ್ರಾವವಾದ ಕಾರಣ ಕೂಡಲೇ ನಾರಾಯಣ ಗೌಡರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಇದನ್ನೂ ಓದಿರಿ:ಗೆಸ್ಟ್​ಹೌಸ್​ನಲ್ಲಿ ಲವರ್​ ಜತೆ ಒಂದು ರಾತ್ರಿ! ಯುವತಿಯ ನಿಗೂಢ ಸಾವು ಪ್ರಕರಣದ ಸತ್ಯಾಂಶ ಕೊನೆಗೂ ಬಯಲು
ಸಾರಿಗೆ ನೌಕರರ ಪ್ರತಿಭಟನೆ: ಹಾಸನದ ಕೆ.ಆರ್. ಪುರಂನಲ್ಲಿ ಸಾರಿಗೆ ಬಸ್ ಅಡ್ಡಲಾಗಿ ಮಲಗಿದ ನೌಕರ ನಾರಾಯಣಗೌಡ ಆತ್ಮಹತ್ಯೆಗೆ ಯತ್ನಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ನೌಕರನನ್ನು ಠಾಣೆಗೆ ಕರೆದೊಯ್ದರು.#Hassan#TransportEmployee#Protest#StateGovt#TransportStrikepic.twitter.com/gbpj1f8POa
— Vijayavani (@VVani4U)April 13, 2021

ಇನ್ನೊಂದೆಡೆ ಮನೆಯಲ್ಲಿ ನೌಕರ ಹೇಮಂತ್​ ಕುಮಾರ್​ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಕೂಡಲೇ ಅವರನ್ನು ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ದಾಖಲಿಸಿದರು.
ನಿನ್ನೆ ಪ್ರತಿಭಟನೆ ವೇಳೆ ನೌಕರ ಕೆ.ಕೆ.ಪಾಲಾಕ್ಷ ಎಂಬುವರು ವಿಷ ಸೇವಿಸಿದ್ದರು. ಹಾಸನ ಜಿಲ್ಲೆಯಲ್ಲಿ ಮೂವರು ಸಾರಿಗೆ ನೌಕರರು ಆತ್ಮಹತ್ಯೆಗೆ ಯತ್ನಿಸಿದಂತಾಗಿದೆ.(ದಿಗ್ವಿಜಯ ನ್ಯೂಸ್​)
ಭಾವ ಕರೆದನೆಂದು ಆತನ ಮನೆಗೆ ಹೋದ ಇಂಜಿನಿಯರ್​ ವಿದ್ಯಾರ್ಥಿನಿಗೆ ಕಾದಿತ್ತು ಬಿಗ್​ ಶಾಕ್​!

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ 24 ತಾಸು ಚುನಾವಣಾ ಪ್ರಚಾರ ಮಾಡುವಂತಿಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
