ಹಾಸನ:ಯುವತಿಗೆ ಬಲವಂತವಾಗಿ ತಾಳಿ ಕಟ್ಟಿದ ಯುವಕನನ್ನು ಸಕಲೇಶಪುರದ ಪೊಲೀಸರು ಬಂಧಿಸಿ, ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಬಲವಂತವಾಗಿ ತಾಳಿಕಟ್ಟಿ ಕರೆದೊಯ್ದಿದ್ದಾಗಿ ಪೊಲೀಸರ ಮುಂದೆ ಯುವತಿ ನೀಡಿದ ಹೇಳಿಕೆ ಆಧರಿಸಿ ಮಂಗಳವಾರವೇ (ಜ.26) ಬಂಧಿಸಲಾಗಿದೆ.
ಜನವರಿ 21ರಂದು ಸಕಲೇಶಪುರ ತಾಲ್ಲೂಕಿನ ಅರೆಕೆರೆ ನಿವಾಸಿ ಸತೀಶ್, ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿರುವ ಯುವತಿ ಮನೆಗೆ ನುಗ್ಗಿ ಬಲವಂತವಾಗಿ ತಾಳಿಕಟ್ಟಿ ಕರೆದೊಯ್ದಿದ್ದ. ಸತೀಶ್​ ಕೃತ್ಯಕ್ಕೆ ಆತನ ಸ್ನೇಹಿತರು ಸಹ ಸಾಥ್​ ನೀಡಿದ್ದರು.
ಇದನ್ನೂ ಓದಿರಿ:ಮಾವನ ಮೇಲೆ ಮುನಿಸು: ಪೊಲೀಸ್​ ಪತಿಗೆ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ!
ಬಳಿಕ ಪೊಲೀಸ್​ ಠಾಣೆಯಲ್ಲಿ ಯುವತಿ ತಾಯಿ ದೂರು ನೀಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸುಜಿತ್ ಕೃಷ್ಣ ಎಂಬಾತನ ಜತೆ ಯುವತಿಗೆ ಮದುವೆ ನಿಶ್ಚಯವಾಗಿದೆ. ಜನವರಿ 25ರಂದು ನಿಗದಿಯಾಗಿರುವ ಮದುವೆಗೆ ಕುಟುಂಬಸ್ಥರು ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಅಷ್ಟರಲ್ಲಿ ಮನೆಗೆ ಬಂದ ಸತೀಶ್, ನಾನು ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆಂದು ಹೇಳಿ ಬೆದರಿಸಿ ತಾಳಿಕಟ್ಟಿ ಕರೆದೊಯ್ದಿದ್ದಾನೆ. ನನ್ನ ಮಗಳ ಪ್ರಾಣಕ್ಕೆ ಬೆದರಿಕೆ ಇದೆ, ಆಕೆಯನ್ನು ರಕ್ಷಿಸಿ ಎಂದು ಪೊಲೀಸರ ಮೊರೆ ಹೋಗಿದ್ದರು.
ಘಟನೆ ನಡೆದ ಮಾರನೇ ದಿನ ಬೆಳಗ್ಗೆ ಯುವಕ ಸತೀಶ್​ ಮನೆ ಬಳಿಗೆ ಮಗಳನ್ನು ನೋಡಲೆಂದು ಆಕೆ ಪಾಲಕರು ಹೋಗಿದ್ದರು. ಆದರೆ, ಅಲ್ಲಿ ಯುವತಿ ಮತ್ತು ಸತೀಶ್​ ಇರಲಿಲ್ಲ. ಆಕೆಯ ಫೋನ್ ಸಹ ಸ್ವಿಚ್ ಆಪ್ ಆಗಿತ್ತು. ಸತೀಶ್​ ಫೋನ್ ರಿಸೀವ್​ ಮಾಡುತ್ತಿರಲಿಲ್ಲ. ನಿಮ್ಮ ಮಗಳು ವಿಷ ಸೇವಿಸಿದ್ದಾಳೆಂದು ಪಕ್ಕದ ಮನೆಯವರು ನಮಗೆ ಹೇಳಿದರು ಎಂದು ವಿವರಿಸಿದ ಯುವತಿಯ ತಾಯಿ ಲತಾ, ನನ್ನ ಮಗಳು ಎಲ್ಲಿದ್ದಾಳೆಂದು ಗೊತ್ತಿಲ್ಲ. ಬಲವಂತದ ಮದುವೆಯಿಂದ ಆತನ ಮನೆಯಲ್ಲಿ ಮಗಳು ವಿಷ ಸೇವಿಸಿದ್ದಾಳೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ದಯವಿಟ್ಟು ನನ್ನ ಮಗಳನ್ನು ಹುಡುಕಿಕೊಡಿ. ಆಕೆ ಎಲ್ಲಿದ್ದರೂ ಚೆನ್ನಾಗಿರಲಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿರಿ:ಮಗಳ ನೋಡಲು ಬಂದ ತಾಯಿಗೆ ಕಾದಿತ್ತು ಶಾಕ್​: ಮದ್ವೆಯಾದ ಕೆಲವೇ ದಿನಗಳಲ್ಲಿ ಅತ್ತೆ-ಸೊಸೆ ನಿಗೂಢ ಸಾವು!
ದೂರು ದಾಖಲಿಸಿಕೊಂಡು ಸತೀಶ್​ ಬಂಧನಕ್ಕೆ ಬಲೆಬೀಸಿದ ಪೊಲೀಸರು ಮಂಗಳವಾರ ಆರೋಪಿಯನ್ನು ಬಂಧಿಸಿದ್ದಾರೆ. ಬಲವಂತವಾಗಿ ತಾಳಿಕಟ್ಟಿ ಕರೆದೊಯ್ದಿದ್ದಾಗಿ ಪೊಲೀಸರ ಮುಂದೆ ಯುವತಿ ಸಹ ಹೇಳಿಕೆ ನೀಡಿರುವುದು ಸತೀಶ್​ಗೆ ಸಂಕಷ್ಟ ಎದುರಾಗಲಿದೆ.(ದಿಗ್ವಿಜಯ ನ್ಯೂಸ್​)
ನನ್ನ ಮನೆಗೆ ನುಗ್ಗಿ ಬಲವಂತವಾಗಿ ಮಗಳಿಗೆ ತಾಳಿ ಕಟ್ಟೇಬಿಟ್ಟ: ಪ್ಲೀಸ್​.. ನನ್ನ ಮಗಳನ್ನು ಕಾಪಾಡಿ…

‘ಬಡಿಗೆ ಹಿಡಿದುಬನ್ನಿ, ಧ್ವಜವನ್ನೂ ತನ್ನಿ… ನಾನು ಹೇಳುತ್ತಿರುವುದೇನು ಅರ್ಥವಾಯ್ತಲ್ಲ… ಈಗ ಇಷ್ಟು ಸಾಕು…’

ಪತ್ನಿಯ ಮೇಲಿನ ಸೇಡಿಗೆ 16 ಮಂದಿಯ ರೇಪ್‌- ಮರ್ಡರ್‌! ‘ಆಗಂತುಕ’ ಸಿನಿಮಾ ನೆನಪಿಸುವ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − fifteen =
Remember me
