ಹಾಸನ:ನನ್ನ ಮಗಳಿಗೆ ಇಷ್ಟವಿಲ್ಲದಿದ್ದರೂ ಬೆದರಿಸಿ ಮದುವೆಯಾಗಿದ್ದಾನೆ. ಬಲವಂತವಾಗಿ ಮದುವೆ ಆಗಿದ್ದಕ್ಕೆ ಆಕೆ ವಿಷ ಸೇವಿಸಿದ್ದಾಳಂತೆ. ಈಗ ಆಕೆ ಎಲ್ಲಿದ್ದಾಳೆಂದು ಗೊತ್ತಿಲ್ಲ. ದಯವಿಟ್ಟು ನನ್ನ ಮಗಳನ್ನ ಹುಡುಕಿ ಕೊಡಿ, ಆಕೆ ಎಲ್ಲೇ ಇದ್ದರೂ ಚೆನ್ನಾಗಿರಬೇಕು… ಎಂದು ಯುವತಿಯ ತಾಯಿ ಗೋಳಾಡಿದ್ದಾರೆ.
ಬೇರೊಬ್ಬನ ಜತೆ ಮದುವೆ ನಿಶ್ಚಯವಾಗಿದ್ದ ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿರುವ ಮಧುಮಗಳ ಮನೆಗೆ ಸ್ನೇಹಿತರೊಂದಿಗೆ ಬಂದ ಅರೆಕೆರೆ ಗ್ರಾಮದ ಸತೀಶ್ ಎಂಬಾತ ಆಕೆಗೆ ತಾಳಿ ಕಟ್ಟಿದ್ದ ಪ್ರಕರಣ ಇದು. ನನ್ನ ಮಗಳನ್ನು ಪ್ರೀತಿಸುತ್ತಿದ್ದೇನೆಂದು ಹೇಳಿ ಮನೆಗೆ ನುಗ್ಗಿದ ಆತ ಬೆದರಿಸಿ ತಾಳಿಕಟ್ಟಿ ಕರೆದೊಯ್ದಿದ್ದಾನೆ ಎಂದು ಯುವತಿ ಪಾಲಕರು ಸಕಲೇಶಪುರ ನಗರ ಠಾಣೆ ಮೆಟ್ಟಿಲೇರಿದ್ದರು. ಇದೀಗ ಆ ಯುವತಿ ವಿಷ ಸೇವಿಸಿದ್ದಾಳಂತೆ!ಇದನ್ನೂ ಓದಿರಿವಾಟ್ಸ್​ಆ್ಯಪ್​ ವಿಡಿಯೋ ಕಾಲ್​ನಲ್ಲಿ ಬೆತ್ತಲಾದ ಯುವತಿಯರು… ಕಣ್ತುಂಬಿಕೊಂಡವನಿಗೆ ಕಾದಿತ್ತು ಭಾರಿ ಸಂಕಷ್ಟ!
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸುಜಿತ್ ಕೃಷ್ಣ ಎಂಬಾತನ ಜತೆ ಯುವತಿಗೆ ಮದುವೆ ನಿಶ್ಚಯವಾಗಿದೆ. ಜನವರಿ 25ರಂದು ನಿಗಧಿಯಾಗಿರುವ ಮದುವೆಗೆ ಕುಟುಂಬಸ್ಥರು ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಅಷ್ಟರಲ್ಲಿ ಯುವತಿ ಮನೆಗೆ ಅಂದ್ರೆ .21ರಂದು ಎಂಟ್ರಿಕೊಟ್ಟ ಸತೀಶ್​ ಎಂಬಾತ, ನಾನು ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆಂದು ಹೇಳಿ ಬೆದರಿಸಿ ತಾಳಿಕಟ್ಟಿ ಕರೆದೊಯ್ದ. ನನ್ನ ಮಗಳ ಪ್ರಾಣಕ್ಕೆ ಬೆದರಿಕೆ ಇದೆ, ಆಕೆಯನ್ನು ರಕ್ಷಿಸಿ ಎಂದು ಪೊಲೀಸರ ಮೊರೆ ಹೋಗಿದ್ದರು.
ಇಂದು ಬೆಳಗ್ಗೆ ಯುವಕ ಸತೀಶ್​ ಮನೆ ಬಳಿಗೆ ಮಗಳನ್ನು ನೋಡಲೆಂದು ಆಕೆ ಪಾಲಕರು ಹೋಗಿದ್ದು. ಅಲ್ಲಿ ಯುವತಿ ಮತ್ತು ಸತೀಶ್​ ಇರಲಿಲ್ಲ. ಆಕೆಯ ಫೋನ್ ಸ್ವಿಚ್ ಆಪ್ ಆಗಿದೆ. ಸತೀಶ್​ ಫೋನ್ ರಿಸೀವ್​ ಮಾಡುತ್ತಿಲ್ಲ. ನಿಮ್ಮ ಮಗಳು ವಿಷ ಸೇವಿಸಿದ್ದಾಳೆಂದು ಪಕ್ಕದ ಮನೆಯವರು ನಮಗೆ ಹೇಳಿದರು ಎಂದು ವಿವರಿಸಿದ ಯುವತಿಯ ತಾಯಿ ಲತಾ, ನನ್ನ ಮಗಳು ಎಲ್ಲಿದ್ದಾಳೆಂದು ಗೊತ್ತಿಲ್ಲ. ಬಲವಂತದ ಮದುವೆಯಿಂದ ಆತನ ಮನೆಯಲ್ಲಿ ಮಗಳು ವಿಷ ಸೇವಿಸಿದ್ದಾಳೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ದಯವಿಟ್ಟು ನನ್ನ ಮಗಳನ್ನು ಹುಡುಕಿಕೊಡಿ. ಆಕೆ ಎಲ್ಲಿದ್ದರೂ ಚೆನ್ನಾಗಿರಲಿ ಎಂದು ಪೊಲೀಸರನ್ನ ಮನವಿ ಮಾಡಿದ್ದಾರೆ.
ಕಾಲೇಜು ಯುವತಿಯ ಬೆತ್ತಲೆ ಫೋಟೋ ಸ್ನೇಹಿತರ ಕೈಯಲ್ಲಿ! ಮುಂದೆ ನಡೆದೇ ಹೋಯ್ತು ಅವಾಂತರ…

ಶವಗಳ ಮೇಲೆಯೇ ಓಡಾಡಿದ ಜನ… ಬೆಚ್ಚಿಬೀಳಿಸುತ್ತೆ ಶಿವಮೊಗ್ಗದಲ್ಲಿನ ಸ್ಫೋಟದ ಭೀಕರತೆ

ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

ಶಿವಮೊಗ್ಗ ಕ್ರಷರ್​ ಸ್ಫೋಟ; ಬುಲೆರೋ ಚಾಲಕ ಸುರಕ್ಷಿತ! ಪ್ರಕರಣಕ್ಕೆ ಟ್ವಿಸ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − nine =
Remember me
