ಹಾಸನ:ಸೋಮವಾರ ವಿವಾಹ ನಿಗದಿಯಾಗಿದ್ದ ಮಧುಮಗಳಿಗೆ ಯುವಕನೊಬ್ಬ ಬಲವಂತವಾಗಿ ತಾಳಿಕಟ್ಟಿದ ಆರೋಪ ಕೇಳಿಬಂದಿದೆ.
ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆಂದು ಹೇಳಿ ಮನೆಗೆ ಬಂದು ಬೆದರಿಸಿ ತಾಳಿಕಟ್ಟಿ ಕರೆದೊಯ್ದಿದ್ದಾನೆಂದು ಅರೆಕೆರೆ ಗ್ರಾಮದ ಸತೀಶ್ ಎಂಬ ಯುವಕನ ವಿರುದ್ಧ ಯುವತಿಯ ಪೋಷಕರು ದೂರಿದ್ದಾರೆ.
ಇದನ್ನೂ ಓದಿರಿ:ನಿನ್ನ ಜತೆ ಮಲಗಲ್ಲ- ಡಿವೋರ್ಸೂ ಕೊಡಲ್ಲ ಎಂದರೆ ಕಾನೂನಿನಲ್ಲಿ ಪತಿ ಏನು ಮಾಡಬಹುದು?
ಜನವರಿ 25ಕ್ಕೆ ಸುಜಿತ್ ಕೃಷ್ಣ ಎಂಬುವವರ ಜತೆ ಯುವತಿಗೆ ಮದುವೆ ನಿಶ್ಚಯವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವಕನ ಜತೆ ಮದುವೆ ನಿಶ್ಚಯಿಸಿ, ಕುಟುಂಬ ಎಲ್ಲ ತಯಾರಿ ಮಾಡಿಕೊಂಡಿದ್ದರು. ಆದರೆ, ಮದುವೆ ನಿಶ್ಚಯವಾಗಿರುವ ಹುಡುಗಿಯನ್ನು ತಾನು ಪ್ರೀತಿಸುತ್ತಿರುವುದಾಗಿ ಆರೋಪಿ ಸತೀಶ್​ ಸ್ನೇಹಿತರ ಬಳಿ ಹೇಳಿಕೊಂಡಿದ್ದ.
ಇತ್ತ ಸತೀಶ್​ ಆತ್ಮಹತ್ಯೆ ಯತ್ನವೂ ನಡೆಸಿದ್ದನಂತೆ. ಹೀಗಾಗಿ ಆತನ ಸ್ನೇಹಿತರು ಸತೀಶ್​ನನ್ನು ಯುವತಿಯ ಮನೆಗೆ ಕರೆದೊಯ್ದು ಅರಿಶಿಣಕೊಂಬು ಕಟ್ಟಿಸಿ ಅಲ್ಲೇ ಮದುವೆ ಮಾಡಿಸಿರುವ ಆರೋಪ ಮಾಡಲಾಗಿದೆ.
ಈ ಸಂಬಂಧ ಯುವತಿಯ ತಾಯಿ ಸಕಲೇಶಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗಳಿಗೆ ಇಷ್ಟವಿಲ್ಲದಿದ್ದರೂ ಬೆದರಿಸಿ ಬಲವಂತವಾಗಿ ಮದುವೆಯಾಗಿದ್ದಾರೆಂದು ದೂರಿದ್ದಾರೆ. ಗೆಳೆಯರ ಜತೆ ಬಂದು ಹೆದರಿಸಿ ತಾಳಿಕಟ್ಟಿ ಕರೆದೊಯ್ದಿದ್ದಾರೆ. ತಮ್ಮ ಮಗಳ ಪ್ರಾಣಕ್ಕೆ ಬೆದರಿಕೆ ಇದ್ದು, ಆಕೆಯನ್ನು ರಕ್ಷಿಸಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿರಿ:ಕಾಲೇಜು ಯುವತಿಯ ಬೆತ್ತಲೆ ಫೋಟೋ ಸ್ನೇಹಿತರ ಕೈಯಲ್ಲಿ! ಮುಂದೆ ನಡೆದೇ ಹೋಯ್ತು ಅವಾಂತರ…
ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿ ಜನವರಿ 21 ರಂದು ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.(ದಿಗ್ವಿಜಯ ನ್ಯೂಸ್​)
ಬೆತ್ತಲೆ ಫೋಟೋ ಹರಿಬಿಟ್ಟು ಸಂಭ್ರಮಿಸಿದ ಮಹಿಳೆ: ಕಾರಣ ಕೇಳಿದ್ರೆ ಹೀಗೂ ಉಂಟೆ ಅಂತಿರಾ!

ಇನ್​ಸ್ಟಾಗ್ರಾಂ ಪರಿಚಯ ತಂದಿಟ್ಟ ಆಪತ್ತು: ಕಾಮುಕರ ಕೈಗೆ ಸಿಕ್ಕಿ ನರಕಯಾತನೆ ಅನುಭವಿಸಿದ ಅಪ್ರಾಪ್ತೆ!

ಸೆಲ್ಫಿ ತೆಗೆದುಕೊಳ್ಳುವಾಗ ಜೇನುನೊಣಗಳ ದಾಳಿ, ಮೂವರು ನೀರು ಪಾಲು: ಒಬ್ಬ ಹುಡುಗ-ಹುಡುಗಿ ಪಾರು…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:8 − 1 =
Remember me
