ಬೆಂಗಳೂರು:ಸಚಿವರ ನಡುವಿನ ವ್ಯತ್ಯಾಸಗಳಿಂದ ಪ್ರತಿಪಕ್ಷಕ್ಕೆ ಸಿಕ್ಕ ಕರೊನಾ ನಿರ್ವಹಣೆ ಆರೋಪಾಸ್ತ್ರವನ್ನು ಈ ಹಂತದಲ್ಲೇ ಮೊಟಕುಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದ್ದರೆ, ವಿಷಯವನ್ನು ಜಿಲ್ಲೆ ಹಾಗೂ ತಾಲೂಕು ಹಂತಕ್ಕೆ ಕೊಂಡೊಯ್ಯಲು ಕಾಂಗ್ರೆಸ್ ನಿರ್ಧರಿಸಿದೆ. ಶುಕ್ರವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಪ್ರಶ್ನೆಗಳನ್ನು ಪುನರಾವರ್ತಿಸಿದ್ದಾರೆ. ಗುರುವಾರ ತಾವಾಡಿದ ಮಾತುಗಳನ್ನೇ ಮಗುಚಿಯಾಡುವ ಮೂಲಕ ಸರ್ಕಾರದ ಇಮೇಜ್​ಗಾದ ಗಾಯ ಹಸಿಯಾಗಿಡುವ ಪ್ರಯತ್ನ ಇರುವುದನ್ನು ಸ್ಪಷ್ಟಮಾಡಿದ್ದಾರೆ. ಇನ್ನೊಂದೆಡೆ ಸರ್ಕಾರದ ಕಡೆಯಿಂದಲೂ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಸಚಿವರಾದ ಆರ್.ಅಶೋಕ, ಡಾ.ಕೆ.ಸುಧಾಕರ್ ಮುಖೇನ ಅಷ್ಟೇ ವೇಗದಲ್ಲಿ ಉತ್ತರಗಳು ಪುನರಾವರ್ತನೆಯಾಗಿವೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಯಾವುದೇ ಅಕ್ರಮ ಮಾಡಿಲ್ಲ ಎನ್ನುವುದಾದರೆ ವೈದ್ಯಕೀಯ ಉಪಕರಣಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕೆ ಭಯವೇಕೆ? ಸಚಿವರುಗಳು ಸತ್ಯವಂತರು ಎನ್ನುವುದಾದರೆ ತನಿಖೆ ಬೇಡ ಎನ್ನುವುದೇಕೆ? ಇದು ಭಂಡತನದ ಪರಮಾವಧಿ ಎಂದು ಟೀಕಿಸಿದ್ದಾರೆ. ಇವರ ಟೀಕೆಗೆ ಪ್ರತಿಯಾಗಿ ಆರ್.ಅಶೋಕ್, ಕರೊನಾ ಪರಿಕರಗಳ ಖರೀದಿಗೆ ಸಂಬಂಧಿಸಿದಂತೆ ಐವರು ಸಚಿವರು ಮಾಧ್ಯಮಗೋಷ್ಠಿಯಲ್ಲಿ ದಾಖಲೆಗಳೊಂದಿಗೆ ಉತ್ತರಿಸಿಯಾಗಿದೆ. ಹೀಗಾಗಿ ತನಿಖೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪುನರುಚ್ಚರಿಸಿದರು. ಸಿದ್ದರಾಮಯ್ಯ ಈಗ ಮುಖ್ಯಮಂತ್ರಿಯಲ್ಲ, ಪ್ರತಿಪಕ್ಷ ನಾಯಕರು. ಸಲಹೆ ಕೊಡಬಹುದೇ ಹೊರತು, ಆದೇಶ ನೀಡುವಂತಿಲ್ಲ. ಹಿಂದೆ ಅಧಿಕಾರದಲ್ಲಿ ಇದ್ದಾಗ ಎಷ್ಟು ಆರೋಪಗಳಿದ್ದವು, ಅವೆಲ್ಲದಕ್ಕೂ ತನಿಖೆ ಮಾಡಿಸಿದ್ದಾರೆಯೇ ಎಂದು ಮರು ಪ್ರಶ್ನಿಸಿದರು. ಸರ್ಕಾರ ಹೀಗೆ ಎದಿರೇಟು ಕೊಡುತ್ತಾ ವಿಷಯಾಂತರ ಮಾಡಿ ಆರೋಪಗಳ ತೀವ್ರತೆ ಕಡಿಮೆ ಮಾಡಲು ಪ್ರಯತ್ನಿಸಿರುವಾಗಲೇ ಪ್ರತಿಪಕ್ಷ ವಿಷಯವನ್ನು ಜಿಲ್ಲೆಗೆ ಕೊಂಡೊಯ್ಯುವ ಇರಾದೆ ಹೊಂದಿದೆ. ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಿದ್ದು, 30 ಜಿಲ್ಲೆಗೆ 30 ತಂಡ ಕಳಿಸಲು ನಿರ್ಧರಿಸಿದ್ದಾರೆ.
ಪಾಯಿಂಟ್ ಟುಬಿ ನೋಟೆಡ್
ಸರ್ಕಾರದ ಆಶಯ
ಕೈ ಉದ್ದೇಶವೇನು?
ಸಿದ್ದು-ಸುಧಾಕರ್ ಜಗಳ್​ಬಂದಿ
ಬೆಂಗಳೂರು: ಕರೊನಾ ನಿರ್ವಹಣೆ ಕುರಿತ ಪ್ರತಿಪಕ್ಷದ ಆರೋಪಕ್ಕೆ ಸಚಿವ ಡಾ.ಸುಧಾಕರ್ ಗುರುವಾರ ತೀಕ್ಷ್ಣ ಉತ್ತರ ನೀಡಿದ್ದು, ಸಿದ್ದರಾಮಯ್ಯಗೆ ಇರಿಸುಮುರಿಸಾಗುವಂತೆ ಸವಾಲು ಹಾಕಿದ್ದರು. ಇದಕ್ಕೆ ಸಿದ್ದರಾಮಯ್ಯ ಕೂಡ ತಮ್ಮ ಎಂದಿನ ಶೈಲಿಯಲ್ಲಿ ಉತ್ತರ ಕೊಟ್ಟಿದ್ದಾರೆ.
ಸಿದ್ದು ವಾದ:
ಸುಧಾಕರ್ ಗುದ್ದು:
ಪ್ಲಾಸ್ಮಾ ದಾನ ಮಾಡಿ ಮಾನವೀಯತೆ ಮೆರೆದ ಎಸಿಪಿ ಸತೀಶ್​! ಕರೊನಾ ವಿರುದ್ಧ ಗೆಲ್ಲೋಕೆ ಐಡಿಯಾ ಕೊಟ್ರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
