ಬೆಂಗಳೂರು:ಖಾಸಗಿ ಶಾಲೆ ಮಕ್ಕಳು ಸರ್ಕಾರಿ ಶಾಲೆಗಳತ್ತ ಮುಖ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಶಿಕ್ಷಣ ಇಲಾಖೆ ಸುಧಾರಣೆಯ ದ್ಯೋತಕವಾಗಿದೆ. ಶಾಲಾ ಪರಿಸರವನ್ನು ಮಕ್ಕಳ ಸ್ನೇಹಿಯಾಗಿ ಮಾರ್ಪಡಿಸುವ ಅಗತ್ಯ ಶಿಕ್ಷಕರ ಮುಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿವಿಮಾತು ಹೇಳಿದರು.
ವಿಧಾನಸೌಧ ಬ್ಯಾಂಕ್ವೆಟ್ ಹಾಲ್​ನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಶುಕ್ರವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಕರು ಮಕ್ಕಳಲ್ಲಿ ಕ್ರಿಯಾಶಕ್ತಿ ಮತ್ತು ಮೌಲ್ಯಗಳನ್ನು ಬೆಳೆಸಬೇಕು. ಪ್ರಾಕೃತಿಕ ಸಂಪತ್ತಿನಂತೆ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ ಎಂದರು.ಇದನ್ನೂ ಓದಿ:ಅಗಸ್ಟಾವೆಸ್ಟ್​ಲ್ಯಾಂಡ್ ಕೇಸ್ – ಮಾಜಿ ರಕ್ಷಣಾ ಕಾರ್ಯದರ್ಶಿ ವಿಚಾರಣೆಗೆ ಅನುಮತಿ ಕೋರಿದ ಸಿಬಿಐ
ಕೇಂದ್ರದ ಮೆಚ್ಚುಗೆ:ಕರೊನಾ ಕಾರಣಕ್ಕೆ ಶಾಲೆಯಿಂದ ದೂರ ಉಳಿದ ಮಕ್ಕಳಲ್ಲಿ ಕಲಿಕಾ ಆಸಕ್ತಿ, ಬೋಧನೆಯತ್ತ ಗಮನ ಸೆಳೆಯುವುದಕ್ಕಾಗಿ ‘ವಿದ್ಯಾಗಮ’ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಇದಕ್ಕೆ ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ತಿಳಿಸಿದರು.
ಪ್ರಶಸ್ತಿ ಪ್ರದಾನ:ರಾಷ್ಟ್ರದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮೂವರು, ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ ಪ್ರಾಥಮಿಕ ಶಾಲೆ ವಿಭಾಗದ 20 ಮುಖ್ಯ ಶಿಕ್ಷಕ/ ಶಿಕ್ಷಕರು, ಪ್ರೌಢ ಶಾಲೆ ವಿಭಾಗದ 11 ಮುಖ್ಯ ಶಿಕ್ಷಕ/ಶಿಕ್ಷಕರು, ಇಬ್ಬರು ಪ್ರಾಂಶುಪಾಲರು ಹಾಗೂ 8 ಉಪನ್ಯಾಸಕರಿಗೆ ಸಿಎಂ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ರಾಜ್ಯ ಸರ್ಕಾರದ ಶಿಕ್ಷಣ ಸಲಹೆಗಾರ ಪ್ರೊ.ಎಂ.ಆರ್.ದೊರೆ ಸ್ವಾಮಿ, ಪರಿಷತ್ ಸದಸ್ಯರಾದ ಅರುಣ್ ಶಹಾಪುರ, ವೈ.ಎ.ನಾರಾಯಣ ಸ್ವಾಮಿ, ಹನುಮಂತ ನಿರಾಣಿ, ಅ.ದೇವೇಗೌಡ ಮತ್ತಿತರರು ಇದ್ದರು.ಇದನ್ನೂ ಓದಿ:VIDEO: 7 ತಿಂಗಳ ಬಳಿಕ ಪತ್ನಿ ಸಾನಿಯಾ ಮಿರ್ಜಾ ಭೇಟಿಯಾದ ಕ್ರಿಕೆಟಿಗ ಶೋಯಿಬ್ ಮಲಿಕ್
ಸರ್ಟಿಫಿಕೇಟ್ ಚೈನ್ ತಂತ್ರಾಂಶ:ಎನ್​ಐಸಿ ಸಹಯೋಗದಲ್ಲಿ ಪ್ರೌಢ ಶಿಕ್ಷಣ ಮಂಡಳಿಯು ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿಕೊಂಡು ಅಭಿವೃದ್ಧಿಪಡಿಸಿದ ‘ಸರ್ಟಿಫಿಕೇಟ್ ಚೈನ್’ ತಂತ್ರಾಂಶವನ್ನು ಸಿಎಂ ಲೋಕಾರ್ಪಣೆ ಮಾಡಿದರು. ಪಾರದರ್ಶಕ ಹಾಗೂ ಕಾಗದರಹಿತ ಆಡಳಿತ ಈ ತಂತ್ರಾಂಶದ ಮುಖ್ಯ ಉದ್ದೇಶವಾಗಿದ್ದು, ಹ್ಯಾಕ್ ಮುಕ್ತ ಹಾಗೂ ಸುರಕ್ಷಿತ ಡಿ.ಜಿ.ಲಾಕ್ ವಿದ್ಯಾರ್ಥಿಗಳಿಗೂ ಉಪಯುಕ್ತವಾಗಿದೆ ಎಂದು ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದರು.
‘ಕಲಿಕಾ ಸಂವರ್ಧನ’ ಮಾರ್ಗಸೂಚಿಯನ್ನು ಸಿಎಂ ಬಿಡುಗಡೆ ಮಾಡಿದರು. ಶಿಕ್ಷಕರಿಗೆ 1 ರಿಂದ 10ನೇ ತರಗತಿವರೆಗೆ ಕಲಿಕೆ, ಬೋಧನೆ ಮತ್ತು ಮೌಲ್ಯಮಾಪನದ ಕುರಿತು ಮಾರ್ಗದರ್ಶಿ ಕೈಪಿಡಿಯಾಗಿದ್ದು, ಶೈಕ್ಷಣಿಕ ಚಟುವಟಿಕೆಗಳನ್ನು ಸುಲಲಿತವಾಗಿಸಲಿದೆ.
ಕರೊನಾದಿಂದಾಗಿ ರಾಜ್ಯದ ಅನುದಾನರಹಿತ ಶಾಲೆಗಳ 3.5 ಲಕ್ಷ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ಸಹಾಯ ಒದಗಿಸುವ ಪ್ರಯತ್ನ ಜಾರಿಯಲ್ಲಿದೆ ಎಂದು ಸಚಿವ ಎಸ್.ಸುರೇಶ್ ಕುಮಾರ್ ಭರವಸೆ ನೀಡಿದರು. ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ಅನುಮತಿ ನೀಡಿ, ಸಂಗ್ರಹಿಸಿದ ಶುಲ್ಕ ಶಿಕ್ಷಕರ ವೇತನಕ್ಕೆ ಬಳಸಲು ತಿಳಿಸಿರುವುದು ಸರ್ಕಾರದ ನೆರವಿನ ಭಾಗ ಎಂದರು.
ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಗೆ ಸಿಸಿಬಿ ನೋಟಿಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
