ಹಾವೇರಿ:ಕಳೆದ ಎರಡು ವರ್ಷಗಳ ಹಿಂದೆ ಇಡೀ ರಾಜ್ಯವನ್ನೆ ಬೆಚ್ಚಿಬಿಳಿಸಿದ್ದ ಪ್ರಕರಣ ಸುಖಾಂತ್ಯ ಕಂಡಿದೆ. ನಡುರಾತ್ರಿಯಲ್ಲಿ ಅಪ್ರಾಪ್ತ ಹುಡುಗಿಯನ್ನು ರೇಪ್​ ಮಾಡಿ ಕೊಲೆ ಮಾಡಿದ ಪ್ರಕರಣ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು.
ಸಂತ್ರಸ್ತೆಯ ಸ್ವಂತ ಚಿಕ್ಕಪ್ಪನ ಮಗನೇ ಕೃತ್ಯ ಎಸಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಕಾಮತೃಷೆ ತೀರಿದ ಬಳಿಕ ಬರ್ಬರವಾಗಿ ಕೊಲೆ ಮಾಡಿದ 48 ಗಂಟೆಗಳಲ್ಲೇ ಹಾವೇರಿ ಪೋಲಿಸರು ಆರೋಪಿಯ ಹೆಡಿಮುರಿ ಕಟ್ಟಿದ್ದರು. ಇದೀಗ ಆರೋಪಿಗೆ ಹಾವೇರಿ ಸತ್ರ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಈ ಮೂಲಕ ಬೆಂಕಿಯಲ್ಲಿ ಬೆಂದು ಹೋಗಿದ್ದ ಅಪ್ರಾಪ್ತೆಯ ಆತ್ಮಕ್ಕೆ ಶಾಂತಿ ಸಿಕ್ಕಿದಂತಾಗಿದೆ.
ಇದನ್ನೂ ಓದಿ:ಸಂಜೆ ಹೊರಕ್ಕೆ ಹೋಗದಿದ್ರೆ ರೇಪ್​ ಆಗ್ತಿರಲಿಲ್ಲ: ಮಹಿಳಾ ಆಯೋಗದ ಸದಸ್ಯೆ ಹೇಳಿಕೆಗೆ ಭುಗಿಲೆದ್ದ ಆಕ್ರೋಶ
ಹಾವೇರಿ ಗ್ರಾಮೀಣ ವ್ಯಾಪ್ತಿಯಲ್ಲಿ 2018ರ ಆಗಸ್ಟ್​ 6ರಂದು 17 ವರ್ಷದ ಅಪ್ರಾಪ್ತೆಯ ಬರ್ಬರ ಹತ್ಯೆಯಾಗಿತ್ತು. ತನ್ನ ಕಾಮತೃಷೆ ತೀರಿಸಿಕೊಳ್ಳಲು ಅವಳ ಚಿಕ್ಕಪ್ಪನ ಮಗ ಮಂಜುನಾಥ್ ಪಾಟೀಲ್ ಎಂಬಾತ ಘೋರ ಕೃತ್ಯವೆಸಗಿದ್ದ. ಕೊಲೆಯ ಸಾಕ್ಷಿನಾಶ ಮಾಡಲು ಅದೆಷ್ಟೆ ಯತ್ನಿಸಿದರು ಸಫಲವಾಗದೆ ಹಾವೇರಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಸೇರಿದ್ದನು. ಈಗ ಹಾವೇರಿ ಸತ್ರ ನ್ಯಾಯಾಲಯ ಕಾಮುಕನಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಕೊಲೆ ಮಾಡಿ ಹೇಗೋ ಬಚಾವಾಗಬಲ್ಲೆ ಎಂದು ಆರೋಪಿ ಅನೇಕ ಐಡಿಯಾ ಮಾಡಿದ್ದ. ಕೊನೆಗೆ ವರದಾ ನದಿಯ ಸೇತುವೆ ಕೆಳಗೆ ಅರ್ಧಂಬರ್ದ ಸುಟ್ಟ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಅಷ್ಟರಲ್ಲಾಗಲೇ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸರ ಕೈಗೆ ಸಿಕ್ಕಮೇಲೆ ಒಂದೊಂದೆ ಸತ್ಯ ಕಕ್ಕಿದ್ದ. ಘಟನಾ ಸ್ಥಳಕ್ಕೆ ಬಂದಿದ್ದ ಸಂಬಂಧಿಕರಿಗೆ ಕೊಲೆ ಆಗಿದೆ ಎಂದು ಮಾತ್ರ ಗೊತ್ತಿತ್ತು. ಆದರೆ, ಯಾರು ಮಾಡಿದ್ದು ಎಂದು ಯೋಚಿಸುತ್ತಲೆ ತಮ್ಮ ಆಕ್ರಂದನ ಹೊರಹಾಕಿದ್ದರು. ಇದೀಗ ಆರೋಪಿಗೆ ಶಿಕ್ಷೆಯಾಗಿರುವುದು ನ್ಯಾಯ ಸಿಕ್ಕಂತಾಗಿದೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಮಾನವನ ಹೆಬ್ಬೆರಳು ಅಂದುಕೊಂಡು ಪೊಲೀಸರನ್ನು ತಕ್ಷಣ ಕರೆಸಿದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​! ​
ಮಹಾ ವಂಚಕನ ಮೊಬೈಲ್​ನಲ್ಲಿ ನಟಿಯರು, ಮಾಡೆಲ್​ಗಳ 108 ಫೋಟೋ ಪತ್ತೆ: ಇದರ ಹಿಂದಿನ ಉದ್ದೇಶವೇನು?

ನಡುರಸ್ತೆಯಲ್ಲಿ ದಂಡ ವಸೂಲಿಗೆ ತಡೆ: ವಾಹನ ಅಡ್ಡಗಟ್ಟುವುದಕ್ಕೆ ಬ್ರೇಕ್

ವಿಚ್ಛೇದನ ಕೊಟ್ಟ ನಂತರ ದಿಢೀರ್​ ಮರುಮದುವೆಯಾಗಲು ಬರುವುದಿಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − twelve =
Remember me
