ಹಾವೇರಿ:‘ಪಕ್ಕದಲ್ಲಿಯೇ ಇದ್ದ ನರ್ಸ್​ ರೋಗಿಗೆ ಇಂಜೆಕ್ಷನ್​ ಕೊಡದೆ ತೆರಳುತ್ತಾರೆ. ಬೇರೆ ದಾರಿ ಕಾಣದ ರೋಗಿ ತನ್ನ ಕೈಗೆ ಸಲಾಯಿನ್​ ಅಳವಡಿಸಲು ಹಾಕಿದ್ದ ಸೂಜಿ ಮೂಲಕ ತಾನೇ ಇಂಜೆಕ್ಷನ್​ ಮಾಡಿಕೊಳ್ಳುತ್ತಾನೆ…’ ಈ ದೃಶ್ಯದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಆಸ್ಪತ್ರೆಯ ದುಸ್ಥಿತಿ ಕಂಡ ಜನತೆ ಆತಂಕಗೊಂಡಿದ್ದಾರೆ.
ಇದು ಹಾವೇರಿ ಜಿಲ್ಲಾ ಕೋವಿಡ್​ ಆಸ್ಪತ್ರೆಯ ಕರ್ಮಕಾಂಡ. ಸೋಂಕಿತರಿಗೆ ಉತ್ತಮ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರು ವ್ಯಾಪಕವಾಗಿ ಕೇಳಿಬರುತ್ತಿದೆ. ಈ ನಡುವೆ ಮತ್ತೊಂದು ಅವಸ್ಥೆಗೆ ಇದೇ ಆಸ್ಪತ್ರೆ ಕಾರಣವಾಗಿದ್ದು, ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಸೋಂಕಿತರಿಗೆ ಸಕಾಲದಲ್ಲಿ ಉತ್ತಮ ಚಿಕಿತ್ಸೆ ಸಿಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸರ್ಕಾರದ ಮಟ್ಟದಲ್ಲಿ ಒತ್ತಡ ಹಾಕಿ ಈ ಆಸ್ಪತ್ರೆಗೆ ಅನೇಕ ಸೌಲಭ್ಯ ಕೊಡಿಸಿದ್ದಾರೆ. ಆದರೆ, ಇಲ್ಲಿನ ಆಡಳಿತ ವ್ಯವಸ್ಥೆ ಹಾಗೂ ವೈದ್ಯ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ರೋಗಿಗಳು ಪರದಾಡುವಂತಾಗಿದೆ.ಇದನ್ನೂ ಓದಿರಿ‘ಈ ಫೋಟೋ ಏನನ್ನು ಹೇಳುತ್ತೆ? ಜನ್ಮಜನ್ಮಾಂತರದ ಸಂಬಂಧ ಅನ್ನುತ್ತೆ’
ಇನ್ನು ಕೋವಿಡ್​ ಆಸ್ಪತ್ರೆಯಲ್ಲಿ ರೋಗಿಯೇ ಇಂಜೆಕ್ಷನ್​ ತೆಗೆದುಕೊಂಡ ವಿಡಿಯೋ ಕುರಿತು ತನಿಖೆಗೆ ಸೂಚಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಪರ ಜಿಲ್ಲಾಧಿಕಾರಿ ಎಂ.ಯೋಗೇಶ್ವರ ತಿಳಿಸಿದ್ದಾರೆ.
ಹಾವೇರಿ ಕೋವಿಡ್​ ಆಸ್ಪತ್ರೆಯಲ್ಲಿ ಒಬ್ಬ ರೋಗಿ ಚಿಕಿತ್ಸೆ ಪಡೆದು ಹೋದ ನಂತರ ಮತ್ತೊಬ್ಬ ರೋಗಿ ಬಂದರೆ ಬೆಡ್​ಶೀಟ್​ ಕೂಡ ಬದಲಾಯಿಸದೆ ಅದೇ ಬೆಡ್​ನಲ್ಲಿ ಮಲಗಲು ತಿಳಿಸುತ್ತಾರೆ. ಹಾಗಾಗಿ ರೋಗಿಗಳೇ ಮನೆಯಿಂದ ಬೆಡ್​ಶೀಟ್​ ತರಿಸಿಕೊಂಡ ಉದಾಹರಣೆಗಳೂ ಸಾಕಷ್ಟಿವೆ.
ಅಯ್ಯೋ, ಮಗಳೇ ನಿಲ್ಲು ಎಂದು ತಾಯಿ ಗೋಗರೆಯುತ್ತಿದ್ದರೂ ಮಗಳು ನೀರಿಗೆ ಹಾರಿ ಪ್ರಾಣ ಬಿಟ್ಲು!

Sign in to your account
Please enter an answer in digits:twenty − 12 =
Remember me
