ಹಿರೇಕೆರೂರ:ತಾನು ಮಾಡಿಕೊಂಡ ಸಾಲ ತೀರಿಸಲು ಪತಿ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಪತ್ನಿಯೊಬ್ಬಳು ತನ್ನ ಮಗನೊಂದಿಗೆ ಸೇರಿ ಪತಿಯನ್ನೇ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಶುಕ್ರವಾರ ತಾಲೂಕಿನ ಗುಂಡಗಟ್ಟಿ ಗ್ರಾಮದಲ್ಲಿ ನಡೆದಿದೆ.
ಹನುಮಂತಪ್ಪ ಬಸಪ್ಪ ಗುಡದಳ್ಳಿ (62) ಕೊಲೆಯಾದವನು. ಈತನ ಪತ್ನಿ ಕುಸುಮಾ ಗುಡದಳ್ಳಿ (45) ಹಾಗೂ ಮಗ ಮರುಳಸಿದ್ದೇಶ (25) ಕೊಲೆ ಆರೋಪಿಗಳು.
ಘಟನೆ ಹಿನ್ನೆಲೆ: ಕುಸುಮಾ ತನ್ನ ಸ್ವಂತ ಕೆಲಸಕ್ಕಾಗಿ ಸಂಘ ಹಾಗೂ ಇತರ ಕಡೆಗಳಲ್ಲಿ ಏಳೆಂಟು ಲಕ್ಷ ರೂ. ಸಾಲ ಮಾಡಿಕೊಂಡಿದ್ದಳಂತೆ. ಸಾಲ ತೀರಿಸಲು ಹಣ ಕೊಡು ಎಂದು ಪತಿ ಹನುಮಂತಪ್ಪನೊಂದಿಗೆ ಪ್ರತಿನಿನವೂ ಜಗಳ ಮಾಡುತ್ತಿದ್ದಳು ಎನ್ನಲಾಗಿದೆ.
ಇದರಿಂದ ಬೇಸತ್ತ ಹನುಮಂತಪ್ಪ ಬೆಂಗಳೂರಿಗೆ ಹೋಗಿ ಮನೆ ಕಾಯುವ ಕೆಲಸ ಮಾಡಿಕೊಂಡಿದ್ದನು. ಆದರೆ, ಕರೊನಾ ಹಿನ್ನೆಲೆಯಲ್ಲಿ ಲಾಕ್​ಡೌನ್ ಘೊಷಣೆಯಾಗಿದ್ದರಿಂದ ವಾಪಸ್ ಊರಿಗೆ ಬಂದು ಪತ್ನಿ, ಮಗನೊಂದಿಗೆ ವಾಸವಾಗಿದ್ದನು. ಆದರೂ ಕುಸುಮಾ ‘ಸಾಲ ತೀರಿಸಲು ಹಣ ಕೊಡಲಿಲ್ಲ’ ಎಂದು ಮತ್ತೆ ನಿತ್ಯ ಜಗಳ ಮಾಡಲು ಶುರು ಮಾಡಿದ್ದಳು.
ಇದೇ ಕಾರಣಕ್ಕೆ ಅ. 7ರಂದು ರಾತ್ರಿ ಹನುಮಂತಪ್ಪನೊಂದಿಗೆ ಜಗಳ ತೆಗೆದ ಕುಸುಮಾ ಹಾಗೂ ಮರಳಸಿದ್ದೇಶ, ಕುಡಗೋಲಿನಿಂದ ಆತನ ಹೊಟ್ಟೆಗೆ, ಪಕ್ಕೆಗೆ ಹೊಡೆದಿದ್ದಾರೆ. ಇದರಿಂದ ಹನುಮಂತಪ್ಪ ತೀವ್ರ ರಕ್ತಸ್ರಾವದಿಂದ ಬಿದ್ದು ಒದ್ದಾಡಿ ಮೃತಪಟ್ಟಿದ್ದಾನೆ ಎಂದು ಆತನ ಸಂಬಂಧಿಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ನೇಣು ಬಿಗಿದು ಡ್ರಾಮಾ:ಹನುಮಂತಪ್ಪ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದಾಗ ಗ್ರಾಮದ ಜನರು ಆತನನ್ನು ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದಾರೆ. ಆಗ ಕುಸುಮಾ ಹಾಗೂ ಮರಳಸಿದ್ದೇಶ ‘ಆತ ಸತ್ತರೆ ಸಾಯಿಲಿ. ಯಾರೂ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಡಿ. ನಾವೇ ಆತನನ್ನು ಹೊಡೆದೇವಿ ಎಂದು ಜನರಿಗೆ ಬೈದು ಕಳುಹಿಸಿದ್ದಾರೆ ಎನ್ನಲಾಗಿದೆ. ಆತ ಮೃತಪಟ್ಟ ಮೇಲೆ ಮನೆಯಲ್ಲಿಯೇ ಆತನಿಗೆ ನೇಣು ಹಾಕಿ ಅಲ್ಲಿಂದ ಕಾಲ್ಕಿತ್ತಿದ್ದರು.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಪತ್ನಿ ಮತ್ತು ಮಗನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + two =
Remember me
