ಹಾವೇರಿ: ಲಾಕ್​ಡೌನ್ 3ರ ಅವಧಿಯಲ್ಲಿ ಮದ್ಯಮಾರಾಟಕ್ಕೆ ಕೊಂಚ ವಿನಾಯಿತಿ ಸಿಕ್ಕಿದ ಕಾರಣ ಹಾವೇರಿ ಜಿಲ್ಲೆಯಾದ್ಯಂತ ಮದ್ಯದಂಗಡಿಗಳು ಸೋಮವಾರ ಬೆಳಗ್ಗೆಯೇ ಓಪನ್ ಆಗಿವೆ. ಲಾಕ್​​ಡೌನ್ ಎರಡು ಅವಧಿಯಲ್ಲೂ ಮದ್ಯ ಮಾರಾಟ ಇಲ್ಲದ ಕಾರಣ, ಭ್ರಮನಿರಸನಕ್ಕೆ ಒಳಗಾಗಿದ್ದ ಮದ್ಯಪ್ರಿಯರು ಕೊಂಚ ರಿಲ್ಯಾಕ್ಸ್ ಮೂಡ್​ನಲ್ಲಿದ್ದುದು ಕಂಡುಬಂತು.
ಬೆಳಗ್ಗೆಯೇ ಮದ್ಯದಂಗಡಿಗಳ ಎದುರು ಜಮಾಯಿಸಿದ ಮದ್ಯಪ್ರಿಯರು, ಮದ್ಯ ಖರೀದಿಗಾಗಿ ಸುಮಾರು ಅರ್ಧ ಕಿ.ಮೀ. ಉದ್ದಕ್ಕೆ ಸರದಿ ನಿಂತಿದ್ದರು. ಜಿಲ್ಲೆಯಲ್ಲಿ 80 CL2, 24 ಎಂಎಸ್ ಐಎಲ್ ಅಂಗಡಿಗಳು ವ್ಯಾಪಾರ ಶುರುಮಾಡಿಕೊಂಡಿವೆ. ಜಿಲ್ಲಾಡಳಿತದ ಆದೇಶ ಪ್ರಕಾರ, ಒಬ್ಬ ವ್ಯಕ್ತಿಗೆ 2.3 (ಎರಡು ಲೀಟರ್ ಮೂವತ್ತು ಎಂಎಲ್​) ಮದ್ಯವನ್ನಷ್ಟೇ ಮದ್ಯದಂಗಡಿಗಳು ವಿತರಣೆ ಮಾಡುತ್ತಿವೆ.
ಇದನ್ನೂ ಓದಿ:ಶಿವಮೊಗ್ಗ ಶರಾವತಿ ನಗರದ ಎಂಎಸ್​ಐಎಲ್ ಮಳಿಗೆ ಮುಂದೆ ಕ್ಯೂ ನಿಂತ್ರು ಕುಡುಕರು…
ಮದ್ಯದಂಗಡಿ ಮಾರಾಟ ಮತ್ತು ನಿಯಮ ಪಾಲನೆ ಪರಿಶೀಲನೆ ಮಾಡುವ ಸಲುವಾಗಿ ಅಬಕಾರಿ ಡಿಸಿ ಡಾ.ಮಹಾದೇವಿಬಾಯಿ ಜಿಲ್ಲಾದ್ಯಂತ ಗಸ್ತು ನಡೆಸುತ್ತಿದ್ದಾರೆ. ನಿಯಮ ಉಲ್ಲಂಘನೆಯಾದರೆ ಮದ್ಯದಂಗಡಿ ಬಂದ್ ಮಾಡುವ ಎಚ್ಚರಿಕೆಯನ್ನೂ ಅಂಗಡಿ ಮಾಲೀಕರಿಗೆ ವಿಧಿಸಿದ್ದಾರೆ.
ಕೆಲವು ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಕಲಾಗಿದ್ದ ಚೌಕದೊಳಗೆ ಪಾದರಕ್ಷೆ ಬಿಟ್ಟು ದೂರ ಹೋಗಿ ಕುಳಿತ ದೃಶ್ಯಗಳೂ ಇಂದು ಮದ್ಯದಂಗಡಿಗಳ ಎದುರು ಕಂಡುಬಂತು.
ಮದ್ಯದ ಮತ್ತು ಅಳತೆ ಮೀರಿ ಕುಡಿದರೆ ಆಪತ್ತು: ಎಣ್ಣೆ ಸಿಕ್ಕ ಖುಷಿಗೆ ನಿಯಂತ್ರಣ ಮೀರದಿರಿ

ಮದ್ಯದ ಸಮಸ್ಯೆ ನಿಭಾಯಿಸಬೇಕಾದ ಮತ್ತೊಂದು ಸವಾಲು ಎದುರಾಗಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
